ಭ್ರಷ್ಟಾಚಾರ ಆರೋಪ : ಶಿಕ್ಷಣ ಸಚಿವ 3 ದಿನಕ್ಕೆ ರಾಜೀನಾಮೆ!

By Kannadaprabha NewsFirst Published Nov 20, 2020, 8:05 AM IST
Highlights

ಭ್ರಷ್ಟಾಚಾರ ಆರೋಪದ ಮೇಲೆ ಶಿಕ್ಷಣ ಸಚಿವರು ಮೂರು ದಿನಗಳ ಕಾಲ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ರಾಷ್ಟ್ರಗೀತೆ ತಿಳಿದಿಲ್ಲ ಎನ್ನುವ ಆರೋಪವು ಇದೆ 

ಪಟನಾ (ನ.20) : ಭ್ರಷ್ಟಾಚಾರದ ಕಳಂಕ ಎದುರಿಸುತ್ತಿದ್ದ ಬಿಹಾರದ ಶಿಕ್ಷಣ ಸಚಿವ ಮೇವಾ ಲಾಲ್‌ ಚೌಧರಿ, ಪ್ರಮಾಣ ವಚನ ಸ್ವೀಕರಿಸಿದ ಮೂರೇ ದಿನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಭ್ರಷ್ಟಾಚಾರದ ಕಳಂಕವಿದ್ದರೂ ಸಂಪುಟಕ್ಕೆ ಚೌಧರಿ ಸೇರ್ಪಡೆ ಬಗ್ಗೆ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಇದರಿಂದ ನಿತೀಶ್‌ ಸರ್ಕಾರ ಮುಜುಗರಕ್ಕೆ ಒಳಗಾಗಿತ್ತು. 

ಅದರ ಬೆನ್ನಲ್ಲೇ ಸಚಿವ ಚೌಧರಿ ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಐದು ವರ್ಷಗಳ ಹಿಂದೆ ಕೃಷಿ ವಿವಿ ಕುಲಪತಿಯಾಗಿದ್ದ ವೇಳೆ ಪ್ರಾಧ್ಯಾಪಕರ, ವಿಜ್ಞಾನಿಗಳ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ಚೌಧರಿ ಭಾಗಿಯಾಗಿದ್ದರು ಎಂಬ ಆರೋಪ ಕೇಳಿಬಂದು ಕೇಸು ದಾಖಲಾಗಿತ್ತು. 

ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆ ಸೇರಿದ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು

ಇನ್ನು ಶಾಲೆಯೊಂದರಲ್ಲಿ ಧ್ವಜಾರೋಹಕ್ಕೆ ತೆರಳಿದ್ದ ವೇಳೆ ಸರಿಯಾಗಿ ರಾಷ್ಟ್ರಗೀತೆ ಹಾಡಲು ಬರದ ಚೌಧರಿ ಅವರ ಹಳೆಯ ವಿಡಿಯೋವೊಂದನ್ನು ವಿಪಕ್ಷಗಳು ಇತ್ತೀಚೆಗೆ ತೇಲಿ ಬಿಟ್ಟು ಅವರ ಮರ್ಯಾದೆ ಹರಾಜು ಹಾಕಿದ್ದವು.

click me!