ಕೊರೋನಾ; ಪ್ರಧಾನಿ ಮೋದಿ ಕೊಟ್ಟ 'ರಿಕವರಿ' ಮಾಹಿತಿ

By Suvarna News  |  First Published Oct 19, 2020, 9:36 PM IST

ಕೊರೋನಾ ವಿಚಾರದಲ್ಲಿ ಮೋದಿ ಮಾತು/ ದೇಶದಲ್ಲಿ ಸೋಂಕು ಏರಿಕೆ ಪ್ರಮಾಣ ಕಡಿಮೆಯಾಗುತ್ತಿದೆ/ ರಿಕವರಿ ರೇಟ್ ಸಹ ಜಾಸ್ತಿಯಿದೆ/ ಸೋಶಿಯಲ್ ಮೀಡಿಯಾ ಮುಖೇನ ಹೇಳಿಕೆ


ನವದೆಹಲಿ(ಅ. 19)  ಕೊರೋನಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.  ದೇಶದಲ್ಲಿ ಕೊರೋನಾ ಸೋಂಕಿತರ  ಪ್ರಕರಣ ಇಳಿಕೆಯಾಗುತ್ತಿದೆ. ಸೋಂಕಿನ ಏರಿಕೆ ಪ್ರಮಾಣವೂ ಇಳಿಕೆಯಾಗಿದೆ ಎಂದಿದ್ದಾರೆ.

ಭಾರತವೇ ಅತಿ ಹೆಚ್ಚಿನ ಅಂದರೆ ಶೇ.  88  ರಷ್ಟು ರಿಕವರಿ ರೇಟ್ ಹೊಂದಿದೆ ಎಂಬುದನ್ನು ಉಲ್ಲೇಖಿಸಲು ಮರೆತಿಲ್ಲ. ಕಳೆದ ಆರು ತಿಂಗಳಿನಿಂದ ಕೊರೋನಾ ದೇಶವನ್ನು ಕಾಡುತ್ತಿದೆ.

Latest Videos

undefined

ದೇಶದ ಅರ್ಥವ್ಯವಸ್ಥೆ ಮೇಲೆಯೂ ಪರಿಣಾಮ ಬೀರಿದೆ. ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಲಾಕ್ ಡೌನ್ ಘೋಷಣೆ ಮಾಡಿತ್ತು. ಇದು ಎಲ್ಲ ಕ್ಷೇತ್ರಗಳ ಮೇಲೆ ಜನ ಜೀವನದ ಮೇಲೆ ಪರಿಣಾಮ ಬೀರಿತ್ತು. 

ಕರ್ನಾಟಕದ ಕೊರೋನಾ ಲೆಕ್ಕಾಚಾರ; ಗಂಡಾಂತರ

ಸದ್ಯ ದೇಶದಲ್ಲಿ 7,574,167 ಕೊರೋನಾ ಪ್ರಕರಣಗಳಿವೆ. 114,902 ಸಾವು ಕಂಡಿದ್ದು 6,693,491 ರೋಗಿಗಳು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿಯೂ ಕೊರೋನಾ ಅಬ್ಬರಕ್ಕೇನು ಕಡಿಮೆ ಇಲ್ಲ. 

ಕರ್ನಾಟಕದಲ್ಲಿ ಇಂದು (ಸೋಮವಾರ) ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು, ಕಳೆದ 24 ಗಂಟೆಗಳಲ್ಲಿ 5018 ಕೊರೋನಾ ಕೇಸ್ ಪತ್ತೆಯಾಗಿದೆ.

 ಈ ಮೂಲಕ ಸೋಂಕಿತರ ಸಂಖ್ಯೆ 7,70,604ಕ್ಕೆ ಏರಿಕೆಯಾಗಿದ್ದು, ಸೋಮವಾರ  64 ಸಾವಿನ ಪ್ರಕರಣಗಳೊಂದಿಗೆ ಒಟ್ಟು ಮೃತಪಟ್ಟವರ ಸಂಖ್ಯೆ 10,542ಕ್ಕೆ ಏರಿಕೆಯಾಗಿದೆ.

ಇನ್ನು ಸೋಮವಾರ ಒಂದೇ ದಿನ 8005 ಕೊರೋನ ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು  ಇದುವರೆಗೆ 6,53,829 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾದಂತಾಗಿದೆ.

Today, we are seeing a decline in the number of cases per day and the growth rate of cases.

India has one of the highest recovery rates of 88 percent: PM

— PMO India (@PMOIndia)
click me!