ಭಾರತೀಯ ಸಮಾಜದಲ್ಲಿ ಧಾರ್ಮಿಕ ತಾರತಮ್ಯವಿಲ್ಲ: ಪ್ರಧಾನಿ ಮೋದಿ

By Kannadaprabha NewsFirst Published Dec 23, 2023, 8:16 AM IST
Highlights

ನಾವು ಅಧಿಕಾರಕ್ಕೆ ಬಂದ ನಂತರ ಕೋಮುದ್ವೇಷ, ದ್ವೇಷ ಭಾಷಣಗಳು ಹೆಚ್ಚಿವೆ ಎಂದು ಟೀಕಿಸುವವರಿಗೆ ವಾಸ್ತವ ಅಂಕಿ ಅಂಶಗಳೇ ಉತ್ತರಿಸುತ್ತವೆ. ನಾವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ನಮ್ಮೊಳಗೆ ಸೌಹಾರ್ದತೆ ಇಲ್ಲದಿದ್ದರೆ ಈ ಸಾಧನೆ ಮಾಡಲು ಸಾಧ್ಯವಿರಲಿಲ್ಲ ಎಂದು ಮೋದಿ ಹೇಳಿದ್ದಾರೆ.

ನವದೆಹಲಿ (ಡಿಸೆಂಬರ್ 23, 2023): ಭಾರತೀಯ ಸಮಾಜದಲ್ಲಿ ಧರ್ಮಗಳ ನಡುವೆ ಯಾವುದೇ ತಾರತಮ್ಯವಿಲ್ಲ. ಅದು ನಶಿಸಿ ಹೋಗಿ ಬಹಳ ಕಾಲವಾಗಿದ್ದು, ಎಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬ್ರಿಟನ್‌ನ ಫೈನಾನ್ಷಿಯಲ್ ಟೈಮ್ಸ್‌ಗೆ ಸಂದರ್ಶನದಲ್ಲಿ ತಿಳಿಸಿದ ಅವರು, ‘ನಾವು ಅಧಿಕಾರಕ್ಕೆ ಬಂದ ನಂತರ ಕೋಮುದ್ವೇಷ, ದ್ವೇಷ ಭಾಷಣಗಳು ಹೆಚ್ಚಿವೆ ಎಂದು ಟೀಕಿಸುವವರಿಗೆ ವಾಸ್ತವ ಅಂಕಿ ಅಂಶಗಳೇ ಉತ್ತರಿಸುತ್ತವೆ. ನಾವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ನಮ್ಮೊಳಗೆ ಸೌಹಾರ್ದತೆ ಇಲ್ಲದಿದ್ದರೆ ಈ ಸಾಧನೆ ಮಾಡಲು ಸಾಧ್ಯವಿರಲಿಲ್ಲ’. 

Latest Videos

ಇದನ್ನು ಓದಿ: ಪ್ರಧಾನಿ ಮೋದಿ ಮುಸ್ಲಿಮರನ್ನು ಹತ್ತಿರ ಬರಬೇಡಿ ಎನ್ನುತ್ತಾರೆ: ಸಿದ್ದರಾಮಯ್ಯ ವ್ಯಂಗ್ಯ

‘ವಿಶ್ವದ ಎಲ್ಲೆಡೆಯಿಂದ ಪರಿತ್ಯಕ್ತರಾದ ಪಾರ್ಸಿಗಳು ಭಾರತಕ್ಕೆ ಬಂದು ನೆಲೆಸಿ ಅಲ್ಪಸಂಖ್ಯಾತರಾಗಿದ್ದರೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇಂತಹ ಸುಳ್ಳು ಆರೋಪಗಳನ್ನು ಮಾಡುವವರಿಂದ ಭಾರತೀಯ ತತ್ವಾದರ್ಶಗಳಾದ ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುವುದಿಲ್ಲ’ ಎಂದು ಮೋದಿ ಸ್ಪಷ್ಟಪಡಿಸಿದರು.

ಅಲ್ಲದೆ ಸಂವಿಧಾನವನ್ನು ತಿದ್ದುಪಡಿಯ ಕುರಿತು ಚರ್ಚೆ ಮಾಡುವುದು ವ್ಯರ್ಥ ಕಸರತ್ತು ಎಂದು ಪ್ರಧಾನಿ ಮೋದಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನು ಓದಿ: ಬೆಂಗಳೂರಿಗೆ 2 ಸೇರಿ 5 ವಂದೇ ಭಾರತ್, 2 ಅಮೃತ್ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಡಿ. 30 ರಂದು ಹಸಿರು ನಿಶಾನೆ

click me!