ಪಾಕ್‌ಗೆ ಈ ದೇಶಗಳಿಂದ ವಿಮಾನ ಸಂಚಾರ ರದ್ದು

Published : Feb 28, 2019, 08:27 AM ISTUpdated : Feb 28, 2019, 12:49 PM IST
ಪಾಕ್‌ಗೆ ಈ ದೇಶಗಳಿಂದ ವಿಮಾನ ಸಂಚಾರ ರದ್ದು

ಸಾರಾಂಶ

ಪಾಕಿಸ್ತಾನಕ್ಕೆ ವಿವಿಧ ದೇಶಗಳಿಂದ ಸಂಚರಿಸುತ್ತಿದ್ದ ವಿಮಾನ ಸೇವೆನಯನ್ನು ರದ್ದು ಮಾಡಲಾಗಿದೆ. ಇದರಿಂದ ಯುದ್ಧ ಪರಿಸ್ಥಿತಿ ನಿರ್ಮಾಣವಾದಂತಾಗಿದೆ. 

ಮುಂಬೈ: ಭಾರತ - ಪಾಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಾಕ್‌ಗೆ ಸಂಚರಿಸುತ್ತಿದ್ದ ಎಲ್ಲ ವಿಮಾನಯಾನ ಸೇವೆಗಳು ರದ್ದಾಗಿವೆ. ಪುಲ್ವಾಮಾ ಉಗ್ರ ದಾಳಿ ನಂತರ ಭಾರತ ವಾಯುಸೇನೆ ಪಾಕ್ ನೆಲದಲ್ಲಿದ್ದ ಉಗ್ರರ ನೆಲೆ ಮೇಲೆ ದಾಳಿ ನಡೆಸಿತ್ತು. 

ಇದರಿಂದಾಗಿ ಪರಸ್ಪರ ದೇಶಗಳ ನಡುವೆ ನಡುವೆ ಯುದ್ದ ಸನ್ನಿವೇಶ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಕ್‌ಗೆ ಬರುತ್ತಿದ್ದ ಹಾಗೂ ಹೋಗುತ್ತಿದ್ದ ದುಬೈ, ಅಬುದಾಬಿ, ಕತಾರ, ಗಲ್ಫ್ ಮತ್ತು ಅಪಘಾನಿಸ್ತಾನದ ಎಲ್ಲ ವಿಮಾನ ಯಾನ ಸೇವೆಗಳನ್ನು ಆಯಾ ರಾಷ್ಟ್ರಗಳು ರದ್ದುಗೊಳಿಸಿವೆ. 

ಈ ಬಗ್ಗೆ ತಮ್ಮ ಪ್ರಯಾಣಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ರವಾನೆ ಮಾಡಿರುವ ವಿಮಾನ ಯಾನ ಸಂಸ್ಥೆಗಳು ಫೆ.27 ಮತ್ತು 28 ರಂದು ಪಾಕ್‌ನ ಎಲ್ಲ ವಿಮಾನ ಸೇವೆ ರದ್ದುಗೊಳಿಸಿದ್ದು, ಪರಿಸ್ಥಿತಿ ಆಧರಿಸಿ ಮುಂದಿನ ಕ್ರಮ ಎಂದು ಸ್ಪಷ್ಟನೆ ನೀಡಿವೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!