ಕೋವಿಡ್‌ ತ್ಯಾಜ್ಯ: ಮಹಾರಾಷ್ಟ್ರ ನಂ.1, ಕರ್ನಾಟಕ ನಂ.8!

By Suvarna NewsFirst Published Jan 11, 2021, 9:58 AM IST
Highlights

ಕೋವಿಡ್‌ ತ್ಯಾಜ್ಯ: ಮಹಾರಾಷ್ಟ್ರ ನಂ.1, ಕರ್ನಾಟಕ ನಂ.8 | 7 ತಿಂಗಳಲ್ಲಿ ಕರ್ನಾಟಕದಲ್ಲಿ 2,026 ಟನ್‌ ತ್ಯಾಜ್ಯ ಉತ್ಪಾದನೆ| ಮಹಾರಾಷ್ಟ್ರದಲ್ಲಿ 3,587 ಟನ್‌ ತ್ಯಾಜ್ಯ| ಇಡೀ ದೇಶದಲ್ಲಿ ತ್ಯಾಜ್ಯ ಪ್ರಮಾಣ 33 ಸಾವಿರ ಟನ್‌

ನವದೆಹಲಿ(ಜ.11): ಭಾರತದಲ್ಲಿ ಕಳೆದ ಏಳು ತಿಂಗಳಿನಲ್ಲಿ 33,000 ಟನ್‌ ಕೋವಿಡ್‌ ತ್ಯಾಜ್ಯ ಉತ್ಪಾದನೆ ಆಗಿದ್ದು, 3,587 ಟನ್‌ ತ್ಯಾಜ್ಯ ಉತ್ಪಾದನೆಯೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನ ಹಾಗೂ 2,026 ಟನ್‌ ತ್ಯಾಜ್ಯ ಉತ್ಪಾದನೆಯೊಂದಿಗೆ ಕರ್ನಾಟಕ 8ನೇ ಸ್ಥಾನದಲ್ಲಿದೆ ಎಂಬ ಸಂಗತಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು 2020ರ ಜೂನ್‌ನಿಂದ ಒದಗಿಸಿದ ಮಾಹಿತಿಯ ಪ್ರಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋರೋನಾಕ್ಕೆ ಸಂಬಂಧಿತ 32,994 ಟನ್‌ ಬಯೋಮೆಡಿಕಲ್‌ ತ್ಯಾಜ್ಯಗಳನ್ನು ಉತ್ಪಾದನೆ ಮಾಡಿವೆ. ಇವುಗಳಲ್ಲಿ ಪಿಪಿಇ ಕಿಟ್‌ಗಳು, ಮಾಸ್ಕ್‌ಗಳು, ಶೂ ಕವರ್‌ಗಳು, ಗ್ಲೌಸ್‌ಗಳು, ಮಾನವ ಅಂಗಾಂಗಗಳು, ಡೆಸ್ಸಿಂಗ್‌, ಪ್ಲಾಸ್ಟರ್‌ಗಳು, ಹಾಸಿಗೆಗಳು, ಸಿರೆಂಜ್‌ಗಲು, ರಕ್ತ ಹಾಗೂ ದ್ರಾವಣಗಳು ಸೇರಿವೆ.

ಕಳೆದ ಏಳು ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ 5367 ಟನ್‌ಗಳಷ್ಟುಕೋವಿಡ್‌ ತ್ಯಾಜ್ಯಗಳು ಉತ್ಪಾದನೆ ಆಗಿದ್ದರೆ ನಂತರದ ಸ್ಥಾನದಲ್ಲಿರುವ ಕೇರಳದಲ್ಲಿ 3300 ಟನ್‌, ಗುಜರಾತಿನಲ್ಲಿ 3086 ಟನ್‌, ತಮಿಳುನಾಡಿನಲ್ಲಿ 2806 ಟನ್‌, ಉತ್ತರ ಪ್ರದೇಶದಲ್ಲಿ 2502 ಟನ್‌, ದೆಹಲಿಯಲ್ಲಿ 2471 ಟನ್‌, ಪಶ್ಚಿಮ ಬಂಗಾಳದಲ್ಲಿ 2095 ಟನ್‌ ಹಾಗೂ ಕರ್ನಾಟಕದಲ್ಲಿ 2026 ಟನ್‌ನಷ್ಟುತ್ಯಾಜ್ಯಗಳು ಉತ್ಪಾದನೆ ಆಗಿವೆ.

ಇನ್ನು ಡಿಸೆಂಬರ್‌ವೊಂದರಲ್ಲಿಯೇ 4,530 ಟನ್‌ನಷ್ಟುಕೊರೋನಾ ತ್ಯಾಜ್ಯ ಉತ್ಪಾದನೆ ಆಗಿದ್ದು, ಮಹಾರಾಷ್ಟ್ರವೊಂದರಲ್ಲೇ 629 ಟನ್‌ ಕೋವಿಡ್‌ ತ್ಯಾಜ್ಯ ಉತ್ಪಾದನೆ ಆಗಿದೆ.

click me!