ಐಸಿಯು ಚಿಕಿತ್ಸೆ ಪಡೆದ ಕೋವಿಡ್‌ ರೋಗಿಗಳಲ್ಲಿ ಹೊಸ ಸಮಸ್ಯೆ!

Published : Jan 11, 2021, 09:04 AM IST
ಐಸಿಯು ಚಿಕಿತ್ಸೆ ಪಡೆದ ಕೋವಿಡ್‌ ರೋಗಿಗಳಲ್ಲಿ ಹೊಸ ಸಮಸ್ಯೆ!

ಸಾರಾಂಶ

: ಕೊರೋನಾ ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ರೋಗಿಗಳು| ಐಸಿಯು ಚಿಕಿತ್ಸೆ ಪಡೆದ ಕೋವಿಡ್‌ ರೋಗಿಗಳಲ್ಲಿ ಮೆದುಳಿನ ಸಮಸ್ಯೆ!

ನವದೆಹಲಿ(ಜ.11): ಕೊರೋನಾ ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದವರಿಗಿಂತ ಹೆಚ್ಚಿನ ಪ್ರಮಾಣದ ಮತಿ ವಿಕಲ್ಪ ಹಾಗೂ ಕೋಮಾ ಕಂಡುಬಂದಿದೆ ಎಂದು ಅಧ್ಯಯನವೊಂದು ತಿಳಿಸಿದೆ.

2020ರ ಏ.28ಕ್ಕೂ ಮುನ್ನ 14 ದೇಶಗಳ ಆಸ್ಪತ್ರೆಗೆ ದಾಖಲಾಗಿದ್ದ 2000ಕ್ಕೂ ಅಧಿಕ ಕೋವಿಡ್‌ ರೋಗಿಗಳನ್ನು ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಲಾಗಿದ್ದು, ದ ಲ್ಯಾನ್ಸೆಟ್‌ ರೆಸ್ಪಿರೇಟರಿ ಮೆಡಿಸಿನ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಔಷಧ ಬಳಕೆ, ಕುಟುಂಬದ ಭೇಟಿಗೆ ಮಿತಿಯಂತಹ ಬೆಳವಣಿಗೆಗಳು ಮೆದುಳಿನ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿವೆ.

ಈ ರೀತಿಯ ಸಮಸ್ಯೆಯಿಂದ ಚಿಕಿತ್ಸಾ ವೆಚ್ಚ ಹೆಚ್ಚುವುದಲ್ಲದೆ ಸಾವು ಹಾಗೂ ದೀರ್ಘಕಾಲದಲ್ಲಿ ಮರೆವಿನ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯವೂ ಇದೆ ಎಂದು ವರದಿ ವಿವರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೊಸವರ್ಷದ ಮೊದಲ ದಿನವೇ ಭಾರತದಲ್ಲಿ ಸ್ಫೋಟ, ಪ್ರವಾಸಿಗರ ಗುರಿಯಾಗಿಸಿ ನಡೆಯಿತಾ ದಾಳಿ?
ದೇಶದ ಅತ್ಯಂತ ಕ್ಲೀನ್‌ ಸಿಟಿಯಲ್ಲಿ ಮಲಿನ ನೀರಿನಿಂದಾಗಿ 6 ತಿಂಗಳ ಮಗು ಸಾವು