ದೇಶದ ಹಲವು ಭಾಗದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದೆ. ರಾಜಕೀಯ ನಾಯಕರ ಹೇಳಿಕೆಗಳು ಹಲವರಿಗೆ ಬಿಸಿ ತುಪ್ಪವಾಗುತ್ತಿದೆ. ಇದರ ನಡುವೆ ಅಧಿಕಾರಕ್ಕಾಗಿ ಯಾತ್ರೆ, ಅಭಿಯಾನ, ದೊಂಬರಾಟವೂ ಜೋರಾಗಿದೆ. ದೇಶದಲ್ಲಿ ನಡೆಯುತ್ತಿರುವ ಮಹತ್ವದ ಬೆಳೆವಣಿಗೆಗಳ ಕಿರುನೋಟ ಇಲ್ಲಿದೆ.
ಸುಂದರಿ ಹುಡುಕಾಟದಲ್ಲಿ ಬಿಜೆಪಿ
ಈ ವರ್ಷದ ಅಂತ್ಯದಲ್ಲಿ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದ ಕಿತ್ತಾಟವಾದರೆ, ಬಿಜೆಪಿಯಲ್ಲಿ ಸಣ್ಣ ಮಟ್ಟದ ಕಿಡಿ ಹೊತ್ತಿಕೊಂಡಿದೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಹೊಸ ಮುಖದ ಪ್ರಸ್ತಾವನೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ರಾಜಸ್ಥಾನ ಮೂಲದ ಬಿಜೆಪಿ ರಾಷ್ಟ್ರೀಯ ನಾಯಕರೊಬ್ಬರ ಪರೋಕ್ಷ ಸೂಚನೆ ಈ ಕಿಡಿ ಹೊತ್ತಲು ಕಾರಣವಾಗಿದೆ. ಮುಂದಿನ ವಿಧಾಸಭಾ ಚುನಾವಣಯಲ್ಲಿ ಮುಖ್ಯಮಂತ್ರಿಯಾಗುವವರು ಸುಂದರ ಮುಖದ ಸುಂದರಿ ಎಂಬ ಸೂಚನೆ ನೀಡಿದ್ದಾರೆ. ಈ ಮೂಲಕ ಹೊಸ ರಾಜಕುಮಾರಿಗೆ ಮಣೆ ಹಾಕಲಾಗುತ್ತಿದೆ ಅನ್ನೋ ಸೂಚನೆಯನ್ನು ನೀಡಲಾಗಿದೆ. ಇದರಿಂದ ಮಾಜಿ ಸಿಎಂ, ಬಿಜೆಪಿ ನಾಯಕಿ ವಸುಂದರ ರಾಜೆ ಬದಲು ಹೊಸ ಮುಖಕ್ಕೆ ಬಿಜೆಪಿ ಮಣೆ ಹಾಕುವ ಪ್ಲಾನ್ ಮಾಡಿದೆ ಅನ್ನೋ ಚರ್ಚೆ ಶುರುವಾಗಿದೆ. ಈ ಪ್ರತ್ಯಕ್ಷ ಪರೋಕ್ಷ ಸಂದೇಶ, ಚರ್ಚೆಗಳ ನಡುವೆ ರಾಜಸ್ಥಾನ ಬಿಜೆಪಿಯ ರಾಜಕುಮಾರಿಗೆ ಅಭಿನಂದನೆ ಸಂದೇಶಗಳು ರವಾನೆಯಾಗಿದೆ. ಇದೀಗ ರಾಜಸ್ಥಾನ ರಾಜ ಮನೆತನೆದ ಮತ್ತೊಬ್ಬ ನಾಯಕಿಗೆ ಪಟ್ಟ ಕಟ್ಟಲು ತಯಾರಿಗಳು ನಡೆಯುತ್ತಿದೆ.
ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಫೋಟೋ ತಳಮಳ
ರಾಜಸ್ಥಾನ ಕಾಂಗ್ರೆಸ್‌ಗೆ ಒಂದಲ್ಲ ಒಂದು ಹೊಡೆತ ಹಿನ್ನಡೆ ತರುತ್ತಿದೆ. ಪ್ರಶ್ನೆ ಪತ್ನಿಕೆ ಸೋರಿಕೆ ಪ್ರಕರಣದಲ್ಲಿ ಆರೋಪಿಗಳು ಕಾಂಗ್ರೆಸ್ ನಾಯಕರೊಬ್ಬರ ಜೊತೆ ನಿರಂತರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್‌ಗೆ ಆತ್ಮೀಯರಾಗಿರುವ ಶಿಕ್ಷಕರ ನೇಮಕಾತಿ ಪತ್ರಿಕೆ ಸೋರಿಕೆ ಮಾಸ್ಟರ್ ಮೈಂಡ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ಅವಕಾಶವನ್ನು ಬಳಸಿಕೊಂಡಿರುವ ಬಿಜೆಪಿ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಅನ್ನೋ ಕ್ಯಾಂಪೇನ್ ಆರಂಭಿಸಿದೆ. ಇಷ್ಟೇ ಅಲ್ಲ ಈ ಆರೋಪಿ ಹಾಗೂ ಕಾಂಗ್ರೆಸ್ ನಾಯಕರ ಜೊತೆಗೆ ಸಂಪರ್ಕ ಹೊಂದಿದ್ದಾರೆ ಅನ್ನೋ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದು ರಾಜಸ್ಥಾನ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ ನೀಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪೊಲೀಸರು 60 ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಮಾಸ್ಟರ್ ಮೈಂಡ್‌ಗಳು ಪರಾರಿಯಾಗಿದ್ದಾರೆ. ಇದರಲ್ಲಿ ಒಬ್ಬರು ಕಾಂಗ್ರೆಸ್ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದವರಾಗಿದ್ದಾರೆ.
ಸಂಕಷ್ಟದಲ್ಲಿ ಪಿಣರಾಯಿಗೆ ಕೈ ಹಿಡಿದ ಹವಾಮಾನ, ಕಾಂಗ್ರೆಸ್‌ಗೆ ತಲೆನೋವಾದ ತಮಿಳುನಾಡು-ತೆಲಂಗಾಣ!
ಜೈಲಿನಲ್ಲಿರುವ ನಾಯಕರ ಭೇಟಿಗೆ ಅಖಿಲೇಶ್ ಯಾದವ್ ಪ್ರವಾಸ
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾವಾದಿ ಪಕ್ಷದ ಕೆಲ ನಾಯಕರು ಈಗಾಗಲೇ ಜೈಲು ಸೇರಿದ್ದಾರೆ. ಒಬ್ಬೊಬ್ಬ ನಾಯಕರು ಒಂದೊಂದು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇವರ ಭೇಟಿಗಾಗಿ ಅಖಿಲೇಶ್ ಯಾದವ್ ಸಣ್ಣ ಪ್ರವಾಸ ಮಾಡುತ್ತಿರುವುದು ಗೌಪ್ಯವಾಗಿರುವ ವಿಚಾರವಲ್ಲ. ಸೌಹಾರ್ಧಯುತ, ಪಕ್ಷ ಸಂಘಟನೆ ಹಾಗೂ ನಾಯಕರ ಜೊತೆ ಸಂಪರ್ಕದಲ್ಲಿರುವ ಅಖಿಲೇಶ್ ಯಾದವ್ ಜೈಲಿನಲ್ಲೇ ನಾಯಕ ಭೇಟಿಯಾಗುತ್ತಿದ್ದಾರೆ. ಆದರೆ ಇದು ಜೈಲು ವಾಸಿ ನಾಯಕರಿಗೆ ಸಮಸ್ಯೆ ತಂದೊಡ್ಡುತ್ತಿದೆ. ಇತ್ತೀಚೆಗೆ ಅಖೀಲೇಶ್ ಯಾದವ್ ಕಾನ್ಪುರದ ಜೈಲಿನಲ್ಲಿರುವ ತಮ್ಮ ಶಾಸಕರೊಬ್ಬರನ್ನು ಭೇಟಿಯಾಗಿದ್ದರು. ಮರುದಿನವೇ ಆ ಶಾಸಕರನ್ನು ಜೈಲಿನಿಂದ ಸ್ಥಳಾಂತರ ಮಾಡಲಾಗಿತ್ತು. ಇದೀಗ ಚೋಟಾ ನೇತಾಜಿ ಜೈಲಿನಲ್ಲಿರುವ ಯಾವುದಾದರೂ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಬರುತ್ತಿದ್ದಂತೆ ಜೈಲು ವಾಸಿ ನಾಯಕರು ಮೌನಕ್ಕೆ ಜಾರುತ್ತಿದ್ದಾರೆ.
From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!
ಕೇರಳದಲ್ಲಿ ಜಯರಾಜನ್ ಹೋರಾಟ
ಇಪಿ ಜಯರಾಜನ್ ವಿರುದ್ಧ ಕಣ್ಣೂರಿನ ನಾಯಕ ಪಿ ಜಯರಾಜನ್ ಮಾಡಿರುವ ಭ್ರಷ್ಟಾಚಾರ ಆರೋಪ ಕೇರಳದಲ್ಲಿ ರಾಜಕೀಯ ಸಂಚಲನ ಸೃಷ್ಚಿಸಿದೆ. ಇದಕ್ಕೆ ಮುಖ್ಯ ಕಾರಣ ಇಬ್ಬರೂ ಸಿಪಿಎಂ ನಾಯಕರಾಗಿರುವ ಕಾರಣ ಸರ್ಕಾರಕ್ಕೆ ಇರಿಸುಮುರಿಸು ಉಂಟಾಗಿದೆ. ಇಪಿ ಜಯರಾಜನ್ ಆಯುರ್ವೇದ ರೆಸಾರ್ಟ್ ಯೋಜನೆಯಲ್ಲಿ ಕೋಟಿ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪ ಕಳೆದ ಕೆಲ ದಿನದಿಂದ ಚರ್ಚೆಯಾಗಿದೆ. ಈ ಕುರಿತು ಪಕ್ಷ ಮಹತ್ವದ ಸಭೆ ನಡೆಸಿ ಈ ಯೋಜನೆಯಲ್ಲಿ ಇಪಿ ಜಯರಾಜನ್ ಅವರಿಗೆ ಯಾವುದೇ ಸಂಬಂಧವಿಲ್ಲ, ಇದು ಇಪಿ ಜಯರಾಜನ್ ಅವರ ಪತ್ನಿ ಹಾಗೂ ಪುತ್ರನ ಹೂಡಿಕೆಯಾಗಿದೆ ಎಂದು ಪಕ್ಷ ನಯವಾಗಿ ಪ್ರಕರಣದಿಂದ ಜಾರಿಕೊಂಡಿದೆ. ಇದೀಗ ರಾಜ್ಯ ಸಭೆಯತ್ತ ಎಲ್ಲ ಚಿತ್ತ ನೆಟ್ಟಿದೆ.