ಜಾರ್ಖಂಡಲ್ಲಿ ದೇಶದ ಮೊದಲ ಗಣಿ ಪ್ರವಾಸೋದ್ಯಮ ಆರಂಭ

Kannadaprabha News   | Kannada Prabha
Published : Jul 22, 2025, 06:03 AM IST
Gold Mining

ಸಾರಾಂಶ

ಗಣಿ ಶ್ರೀಮಂತ ರಾಜ್ಯವಾದ ಜಾರ್ಖಂಡ್‌ ದೇಶದಲ್ಲೇ ಮೊದಲ ಬಾರಿ ಗಣಿಗಾರಿಕಾ ಪ್ರವಾಸೋದ್ಯಮ ಆರಂಭಕ್ಕೆ ಮುಂದಾಗಿದೆ. ಈ ಕುರಿತು ಜಾರ್ಖಂಡ್‌ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್) ಜತೆ ಒಪ್ಪಂದ ಮಾಡಿಕೊಂಡಿದೆ.

ರಾಂಚಿ: ಗಣಿ ಶ್ರೀಮಂತ ರಾಜ್ಯವಾದ ಜಾರ್ಖಂಡ್‌ ದೇಶದಲ್ಲೇ ಮೊದಲ ಬಾರಿ ಗಣಿಗಾರಿಕಾ ಪ್ರವಾಸೋದ್ಯಮ ಆರಂಭಕ್ಕೆ ಮುಂದಾಗಿದೆ. ಈ ಕುರಿತು ಜಾರ್ಖಂಡ್‌ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್) ಜತೆ ಒಪ್ಪಂದ ಮಾಡಿಕೊಂಡಿದೆ.

ಏನಿದು ಯೋಜನೆ?:

ಸದ್ಯಕ್ಕೆ ರಾಮಗಢ ಜಿಲ್ಲೆಯ ಉತ್ತರ ಉರಿಮರಿ (ಬಿರ್ಸಾ) ಕಲ್ಲಿದ್ದಲು ಗಣಿಯಲ್ಲಿ ಯೋಜನೆಯನ್ನು ಆರಂಭಿಸಲಾಗಿದೆ. ನಂತರ ಇತರ ಗಣಿಗಳಿಗೂ ವಿಸ್ತರಿಸಲಾಗುತ್ತದೆ. ವಾರಕ್ಕೆ 2 ಸಲ ಪ್ರವಾಸವಿದ್ದು, ಪ್ರತಿ ತಂಡದಲ್ಲಿ 10-20 ಜನರಿಗೆ ಅವಕಾಶವಿರುತ್ತದೆ. 2 ಮಾರ್ಗಗಳ ಮೂಲಕ ಗಣಿ ತಲುಪಲಾಗುತ್ತದೆ. ರಜರಪ್ಪಾ ಮಾರ್ಗವನ್ನು ಆಯ್ದುಕೊಂಡರೆ ಪ್ರತಿ ವ್ಯಕ್ತಿಗೆ 2,800 ರು., ಪತರಾತೂ ಮಾರ್ಗವಾದರೆ 2,500 ಶುಲ್ಕವಿರುತ್ತದೆ.

ಪ್ರವಾಸಿಗರಿಗೆ ಖನಿಜಗಳನ್ನು ಹೊರತೆಗೆಯುವುದರಿಂದ ಹಿಡಿದು ಅವುಗಳನ್ನು ಶುದ್ಧೀಕರಿಸಿ ಅಂತಿಮ ಸ್ವರೂಪ ನೀಡುವವರೆಗಿನ ಎಲ್ಲ ಹಂತಗಳನ್ನು ವೀಕ್ಷಿಸಲು ಅವಕಾಶ ಸಿಗಲಿದೆ. ಹಳೆ ಮತ್ತು ಸಕ್ರಿಯ ಎರಡೂ ರೀತಿಯ ಗಣಿಗಳ ಒಳಗೆ ತೆರಳಲು ಪ್ರವಾಸಿಗರಿಗೆ ಗೈಡ್‌ ಮೂಲಕ ಅವಕಾಶ ಕಲ್ಪಿಸಲಾಗುವುದು. ಸಾಂಪ್ರದಾಯಿಕವಾಗಿ ಗಣಿಗಾರಿಕೆ ಮಾಡುತ್ತಿರುವ ಸಮುದಾಯಗಳ ಸಂಸ್ಕೃತಿಯ ಪರಿಚಯ ಮಾಡಿಕೊಡಲಾಗುತ್ತದೆ. ಪ್ರವಾಸದುದ್ದಕ್ಕೂ ಮೋಜಿನ ಜತೆಗೆ ಮಾಹಿತಿಯೂ ಸಿಗುವಂತೆ ಯೋಜನೆ ಸಿದ್ಧಪಡಿಸಲಾಗುತ್ತದೆ. ಸ್ಥಳೀಯರಿಗೆ ಉದ್ಯೋಗಾವಕಾಶ, ಗಣಿಪ್ರದೇಶಗಳ ಅಭಿವೃದ್ಧಿಯ ಗುರಿಯನ್ನೂ ಹಾಕಿಕೊಳ್ಳಲಾಗಿದೆ.

  • ಗಣಿ ಶ್ರೀಮಂತ ರಾಜ್ಯವಾದ ಜಾರ್ಖಂಡ್‌ ದೇಶದಲ್ಲೇ ಮೊದಲ ಬಾರಿ ಗಣಿಗಾರಿಕಾ ಪ್ರವಾಸೋದ್ಯಮ ಆರಂಭ
  • ಜಾರ್ಖಂಡ್‌ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್) ಜತೆ ಒಪ್ಪಂದ
  • ರಾಮಗಢ ಜಿಲ್ಲೆಯ ಉತ್ತರ ಉರಿಮರಿ (ಬಿರ್ಸಾ) ಕಲ್ಲಿದ್ದಲು ಗಣಿಯಲ್ಲಿ ಯೋಜನೆಯನ್ನು ಆರಂಭ
  • ವಾರಕ್ಕೆ 2 ಸಲ ಪ್ರವಾಸವಿದ್ದು, ಪ್ರತಿ ತಂಡದಲ್ಲಿ 10-20 ಜನರಿಗೆ ಅವಕಾಶವಿರುತ್ತದೆ

ಪ್ರವಾಸಿಗರ ನಿಯಂತ್ರಣಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದಾಗಿದೆ

ಕಾಫಿನಾಡು ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರ ದಂಡು ಹಿನ್ನೆಲೆಯಲ್ಲಿ ಪ್ರವಾಸಿಗರ ನಿಯಂತ್ರಣಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದಾಗಿದೆ. ಬೆಳಿಗ್ಗೆ 600 ಮಧ್ಯಾಹ್ನ 600 ವಾಹನಗಳಿಗೆ ಮಾತ್ರ ಮುಳ್ಳಯ್ಯನಗಿರಿ ಬೆಟ್ಟದ ಪ್ರದೇಶಕ್ಕೆ ಹೋಗಲು ಅವಕಾಶ ನೀಡಲು ತೀರ್ಮಾನ ಕೈಗೊಂಡಿದೆ.

 ಈ ಮೂಲಕ ಒಂದು ದಿನಕ್ಕೆ 1200 ವಾಹನಗಳಿಗೆ ಮಾತ್ರ ಪ್ರವೇಶಾವಕಾಶ ನೀಡಲಿದ್ದು, ಮುಗಿಬೀಳುವ ಪ್ರವಾಸಿಗರಿಗೆ ಕಡಿವಾಣ ಹಾಕಲು ಮುಂದಾಗಿದೆ. ಇನ್ನು ಇಲ್ಲಿಗೆ ಹೋಗುವವರು ಅಡ್ವಾನ್ಸ್ ಬುಕಿಂಗ್ ಮಾಡಿಕೊಂಡು ಹೋಗಬೇಕು.

 ಹೌದು, ಇನ್ನು ಮುಂದೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿಗರ ಸ್ವರ್ಗವಾಗಿರುವ ಮುಳ್ಳಯ್ಯನಗಿರಿಗೆ ಹೋಗಲು ಅಡ್ವಾನ್ಸ್ ಬುಕಿಂಗ್ ಮಾಡಬೇಕು. ಬುಕ್ಕಿಂಗ್ ವಾಹನಗಳು ಸೇರಿದಂತೆ ನಿತ್ಯ ಬೆಳಗ್ಗೆ 600, ಮಧ್ಯಾಹ್ನ 600 ವಾಹನಗಳಿಷ್ಟೆ ಅವಕಾಶ ನೀಡಲಾಗುತ್ತದೆ. ಬುಕ್ಕಿಂಗ್ ಮಾಡಿಕೊಂಡು ಬಂದು ಸ್ವಂತ ವಾಹನದಲ್ಲೇ ಹೋಗೋಕೆ ಹಣ ಪಾವತಿಸಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!