ಬೆಂಗಳೂರಿನಲ್ಲಿ ಭಾರತದ ಮೊದಲ ಬುಟೆಲ್ ಟ್ರೈನ್ ತಯಾರಿ, ಗಂಟೆಗೆ 250 ರಿಂದ 280 ಕಿ.ಮೀ ವೇಗ!

By Chethan Kumar  |  First Published Sep 21, 2024, 11:00 AM IST

ಬೆಂಗಳೂರು ಮತ್ತೊಂದು ಹಿರಿಗೆ ಪಾತ್ರವಾಗಿದೆ. ಇದೀಗ ಭಾರತದ ಮೊಟ್ಟ ಮೊದಲ ಬುಲೆಟ್ ಟ್ರೈನ್ ತಯಾರಿ ಬೆಂಗಳೂರಿನಲ್ಲಿ ಆರಂಭಗೊಳ್ಳುತ್ತಿದೆ. 250 ರಿಂದ 280 ಕಿ.ಮೀ ವೇಗದ ಈ ರೈಲು 174 ಸೀಟುಗಳನ್ನು ಹೊಂದಿದೆ.


ಬೆಂಗಳೂರು(ಸೆ.21) ಭಾರತದ ಮೊದಲ ಬುಲೆಟ್ ಟ್ರೈನ್ ಬೆಂಗಳೂರಿನಲ್ಲಿ ತಯಾರಾಗಲಿದೆ. ಗಂಟೆಗೆ ಬರೋಬ್ಬರಿ 250 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ಈ ಬುಲೆಟ್ ರೈಲನ್ನು ಬೆಂಗಳೂರಿನ ಬಿಇಎಂಎಲ್ ಉತ್ಪಾದಿಸಲಿದೆ. ಗರಿಷ್ಠ 280 ಕಿ.ಮೀ ವೇಗವಾಗಿದ್ದರೆ, 250 ಕಿ.ಮೀ ಸಾಮಾನ್ಯ ವೇಗ ಹೊಂದಿರುವ ಈ ರೈಲು ಭಾರತದ ಮೊದಲ ಬುಲೆಟ್ ರೈಲು ಮಾತ್ರವಲ್ಲ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೈಸ್ಪೀಡ್ ರೈಲು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಲಿದೆ.

ಜಪಾನ್‌ನಲ್ಲಿ ಬರೋಬ್ಬರಿ 320 ಕಿ.ಮೀ ವೇಗದಲ್ಲಿ ಸಂಚರಿಸುವ ಬುಲೆಟ್ ರೈಲನ್ನು ಭಾರತದಲ್ಲೂ ಜಾರಿಗೊಳಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ತರಲು ಮುಂದಾಗಿತ್ತು. ಆದರೆ ಜಪಾನ್ ಕಂಪನಿಗಳು ದುಬಾರಿ ಬೆಲೆ ನೀಡಿದ್ದ ಕಾರಣ ಈ ಯೋಜನೆ ಕೈಬಿಡಲಾಯಿತು. ಹೀಗಾಗಿ ಸ್ಥಳೀಯವಾಗಿ ಬುಲೆಟ್ ರೈಲು ನಿರ್ಮಾಣಕ್ಕೆ ಭಾರತ ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಸೆಪ್ಟೆಂಬರ್ 5 ಟೆಂಡರ್ ಬಿಡ್ ಸಲ್ಲಿಸಲು ಅಂತಿಮ ದಿನವಾಗಿತ್ತು. ಮೊದಲ ಹಂತದಲ್ಲಿ 2 ರೈಲುಗಳನ್ನು ಉತ್ಪಾದಿಸಿ ಪ್ರಯೋಗ ನಡೆಸಲು ಮುಂದಾಗಿರುವ ಕಾರಣ ಹಲವು ಕಂಪನಿಗಳು ಹಿಂದೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿತ್ತು. ಕೇವಲ 2 ರೈಲು ಉತ್ಪಾದನೆ ವೆಚ್ಚ ಹೆಚ್ಚಾಗಲಿದೆ ಅನ್ನೋ ಕಾರಣಕ್ಕೆ ಹಲವು ಕಂಪನಿಗಳು ಟೆಂಡರ್ ಕರೆಯದೇ ಯೋಜನೆಯಿಂದ ದೂರ ಸರಿದಿತ್ತು.

Tap to resize

Latest Videos

ಈ ರೈಲು ನಿಲ್ದಾಣದಲ್ಲಿ ವರ್ಷದ 15 ದಿನ ಮಾತ್ರ ಟ್ರೈನ್ ನಿಲುಗಡೆ, ಇನ್ನುಳಿದ ದಿನ ಹಾಳುಕೊಂಪೆ!

ಬಿಇಎಂಎಲ್ ಸಂಸ್ಥೆ ಏಕಾಂಗಿಯಾಗಿ ಬಿಡ್ ಸಲ್ಲಿಸಿತ್ತು. ಇತರ ಯಾವುದೇ ಪ್ರತಿಸ್ಪರ್ಧಿಗಳಿಲ್ಲದ ಕಾರಣ ಇದೀಗ ಬಿಇಎಂಲ್ ಟೆಂಡರ್ ಅಂತಿಮಗೊಂಡಿದೆ. ಬಿಇಎಂಲ್‌ನಲ್ಲಿರುವ ಅತ್ಯಾಧುನಿಕ ಕಾರ್ಬೋಡಿಂಗ್ ಬಿಲ್ಡಿಂಗ್ ಎಕ್ಸ್‌ಪರ್ಟ್ ಹಾಗೂ ಮೆಧಾ ಪ್ರೊಪಲ್ಶನ್ ಸಿಸ್ಟಮ್ ಇದೀಗ ಈ ಹೈಸ್ಪೀಡ್ ರೈಲು ನಿರ್ಣಾದ ಜವಾಬ್ದಾರಿ ಹೊತ್ತುಕೊಂಡಿದೆ. ಇದೇ ಮಾದರಿಯಲ್ಲಿ ವಂದೇ ಭಾರತ್ ರೈಲು ಎಂಜಿನ್ ರೂಪಿಸಲಾಗಿದೆ. 160 ಕಿ.ಮೀ ವೇಗದಲ್ಲಿ ವಂದೇ ಭಾರತ್ ರೈಲು ಸಂಚರಿಸಲಿದೆ. ಇದೀಗ ಇದರ ಮುಂದುವರಿದ ಹಾಗೂ ಅಭಿವೃದ್ಧಿಪಡಿಸಿದ ಪ್ರೊಪೆಲ್ಶನ್ ಎಂಜಿನ್ ಬುಲೆಟ್ ರೈಲಿನಲ್ಲಿ ಕಾರ್ಯನಿರ್ವಹಿಸಲಿದೆ.

ಬಿಇಎಂಲ್ ಹಾಗೂ ಮೇಧಾ ಜಂಟಿಯಾಗಿ ಭಾರತದ ಮೊದಲ ಬುಲೆಟ್ ರೈಲು ಉತ್ಪಾದನೆ ಮಾಡಲಾಗಿದೆ. ಯೂರೋಪಿಯನ್ ಎಂಜಿನಿಯರ್ ಸೇರಿದಂತೆ ವಿಶ್ವದ ಅತ್ಯುತ್ತಮ ದರ್ಜೆ ಎಂಜಿನಿಯರ್ ಸಹಾಯ ಪಡೆದು ಈ ಬುಲೆಟ್ ರೈಲು ಉತ್ಪಾದನೆ ಮಾಡಲು ತಯಾರಿ ನಡೆಯುತ್ತಿದೆ. ಈ ರೈಲು ಕೋಚ್‌ಗಳು 2 ಪ್ಲಸ್ 2 ಹಾಗೂ 3 ಪ್ಲಸ್ 3 ಆಸನದ ಸೀಟುಗಳನ್ನು ಹೊಂದಿರುತ್ತದೆ. ಈ ಪೈಕಿ 3 ಪ್ಲಸ್ 2 ಆಸನದ 7 ಕೋಚ್ ಹಾಗೂ 2 ಪ್ಲಸ್ 2 ಆಸನದ ಒಂದು ಕೋಚ್ ಸೇರಿದಂತೆ ಒಟ್ಟು174 ಸೀಟು ಸಾಮರ್ಥ್ಯ ಹೊಂದಿದೆ. 

ಬೆಂಗಳೂರಿನ ಬಿಇಎಂಲ್ ಘಟಕದಲ್ಲಿ ಈ ರೈಲು ಉತ್ಪಾದನೆ ಹಾಗೂ ಪ್ರಯೋಗಿಕ ಪರೀಕ್ಷೆ ನಡೆಯಲಿದೆ. ಬಳಿಕ ಈ ಬುಲೆಟ್ ರೈಲು ಮುಂಬೈ ಅಹಮ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಸಂಚರಿಸಲಿದೆ. ಭಾರತದಲ್ಲಿನ ರೈಲು ಹಳಿಗಳನ್ನು ಹೈಸ್ಪೀಡ್ ರೈಲು ಓಡಿಸುವ ಹಳಿಗಳಾಗಿ ಮೇಲ್ದರ್ಜೆಗೆ ಏರಿಸುವ ಕೆಲಸಗಳು ನಡೆಯುತ್ತಿದೆ. 

ಬಿಇಎಂಎಲ್‌ಗೆ 2.5 ವರ್ಷ ಅವಧಿಯನ್ನು ನೀಡಲಾಗಿದೆ. ಈ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಗುಣಟ್ಟದ ಬುಲೆಟ್ ರೈಲು ಉತ್ಪಾದಿಸಲು ತಯಾರಿಗಳು ಆರಂಭಗೊಂಡಿದೆ. 2026ರ ವೇಳೆಗೆ ಭಾರತದ ಮೊದಲ ಬುಲೆಟ್ ರೈಲು ಭಾರತದಲ್ಲಿ ಸಂಚರಿಸಲಿದೆ.

ರೈಲು ಪ್ರಯಾಣದಲ್ಲಿ ಇನ್ನು ಊಟ-ತಿಂಡಿ ತಲೆ ಬಿಸಿ ಇಲ್ಲ; ಕುಳಿತಲ್ಲಿಗೆ ಜೊಮ್ಯಾಟೋ ಡೆಲಿವರಿ!

click me!