ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ನಿರ್ಬಂಧ ವಿಸ್ತರಿಸಿದ ಭಾರತ!

By Suvarna NewsFirst Published Feb 26, 2021, 10:38 PM IST
Highlights

ಕೊರೋನಾ ವೈರಸ್ 2ನೇ ಅಲೆ ಭೀತಿ ಆವರಿಸಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಐದು ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಕೆಲ ರಾಜ್ಯಗಳ ಜಿಲ್ಲೆಗಳು, ನಗರಗಳಲ್ಲಿ ನೈಟ್ ಕರ್ಫ್ಯೂ, ಲಾಕ್‌ಡೌನ್ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಲ್ಲಿದೆ. ಇದೀಗ ಭಾರತ ವಿಮಾನಯಾನ ಸಚಿವಾಲಯದ ಮಹತ್ವದ ಪ್ರಕಟಣೆ ಹೊರಡಿಸಿದೆ.

ನವದೆಹಲಿ(ಫೆ26): ಭಾರತದಲ್ಲಿ ಕೊರೋನಾ 2ನೇ ಅಲೆ ಭೀತಿ ಎದುರಾಗಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ 5 ರಾಜ್ಯಗಳಲ್ಲಿ ಕೊರೋನಾ ಪರಿಸ್ಥಿತಿ ಕೈಮೀರುತ್ತಿದೆ. ಇದರಿಂದ ನೆರೆ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲೂ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಭಾರತೀಯ ವಿಮಾನಯಾನ ಸಚಿವಾಲಯ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ನಿರ್ಬಂಧವನ್ನು ಮಾರ್ಚ್31ರ ವರೆಗೆ ವಿಸ್ತರಿಸಿದೆ.

ಕೆಂಪೇಗೌಡ ಏರ್‌ಪೋರ್ಟ್‌ಲ್ಲಿ ನಿಷ್ಕ್ರೀಯ ವಿಮಾನ ತೆರವುಗೊಳಿಸಲು ‘ರಿಕವರಿ ಕಿಟ್‌’

ವಾಣಿಜ್ಯ ವಿಮಾನಕ್ಕೆ ನಿರ್ಬಂಧ ಮುಂದುವರಿಸಲಾಗಿದೆ. ಆದರೆ ಸರಕು ವಿಮಾನ, ಹಾಗೂ DGCA ಅನುಮೋದಿಸಿದ ನೀಡಿದ ವಿಮಾನಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವಾಲಯ ಹೇಳಿದೆ. 

 

pic.twitter.com/gCmviBPKcW

— DGCA (@DGCAIndia)

ಆದರೆ ಕೆಲ ಆಯ್ದ ಮಾರ್ಗಗಳಲ್ಲಿ ಈಗಾಗಲೇ ನಿಗದಿಪಡಿಸಿರುವ ಕೆಲ ವಿಮಾನಗಳು ಹಾರಾಟ ನಡೆಸಲು DGCA ಅವಕಾಶ ನೀಡಲಿದೆ. ಕೊರೋನಾ ಕಾರಣ ಮತ್ತೆ ವಿಮಾನಯಾನ ಸೇವೆಗಳು ಸೇರಿದೆತೆ ಹಲವು ಸೇವೆಗಳು ಒಂದರ ಮೇಲೊಂದರಂತೆ ನಿರ್ಬಂಧಕ್ಕೆ ಒಳಪಡುತ್ತಿದೆ. ಮುಂಬೈನ ಅಮರಾವತಿ ಜಿಲ್ಲೆ ಮತ್ತೆ ಲಾಕ್‌ಡೌನ್ ಆಗಿದೆ. 

ಪುಣೆ ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ.  ಕೊರೋನಾ ನಿಯಂತ್ರಿಸಲು ಆಯಾ ರಾಜ್ಯ ಸರ್ಕಾರಗಳು ಹರಸಹಾಸ ಮಾಡುತ್ತಿದೆ. 

click me!