
ನವದೆಹಲಿ(ಮೇ.04): ಕೊರೋನಾ ವೈರಸ್ ಸ್ಥಿತಿಗೆ ದೇಶವೇ ತತ್ತರಿಸಿದೆ. ಆಕ್ಸಿಜನ್ ಸಮಸ್ಯೆ, ಐಸಿಯು ಬೆಡ್ ಸಮಸ್ಯೆ, ಲಸಿಕೆ, ಔಷಧಿ ಸೇರಿದಂತೆ ಭಾರತದ ಆರೋಗ್ಯ ಕ್ಷೇತ್ರ ಒಂದರ ಮೇಲೊಂದರಂತೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ ಸೋಂಕಿತರ ಚಿಕಿತ್ಸೆ ಸವಾಲಾಗಿ ಪರಿಣಮಿಸಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಕೇಂದ್ರ ಸರ್ಕಾರ ವಿದೇಶಗಳಿಂದ ಆಕ್ಸಿಜನ್, ವೈದ್ಯಕೀಯ ಸಲಕರಣೆ ಆಮದು ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ಹಲವು ದೇಶಗಳು ಭಾರತಕ್ಕೆ ನೆರವು ಘೋಷಿಸಿದೆ. ಇದೀಗ ವಿದೇಶಗಳಿಂದ ಭಾರತಕ್ಕೆ ಆಗಮಿಸಿದ ಆಕ್ಸಿಜನ್ ಕಂಟೈನರ್‌ಗಳನ್ನು ತಕ್ಷಣವೇ ದೆಹಲಿ ಸೇರಿದಂತೆ ಉತ್ತರ ಭಾರತಕ್ಕೆ ಪೂರೈಕೆ ಮಾಡಲಾಗಿದೆ.
ಕೊರೋನಾ ನಿಯಂತ್ರಣಕ್ಕೆ ನೌಕಾಪಡೆ ಕಾರ್ಯಾಚರಣೆ ಪರಿಶೀಲಿಸಿದ ಪ್ರಧಾನಿ ಮೋದಿ!
ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈ ಹೋರಾಟಕ್ಕೆ ಹಲವು ದೇಶಗಳು ಭಾರತಕ್ಕೆ ನೆರವು ಹಾಗೂ ಬೆಂಬಲ ಘೋಷಿಸಿದೆ. ವಿದೇಶಗಳಿಂದ ವೈದ್ಯಕೀಯ ಉಪಕರಣಗಳು, ಔಷಧಿಗಳು, ಆಮ್ಲಜನಕ ಕಂಟೈನರ್, ವೆಂಟಿಲೇಟರ್ ಸೇರಿದಂತೆ ಅನೇಕ ದೇಶಗಳು ಒದಗಿಸುತ್ತಿವೆ.
ವಿದೇಶಗಳಿಂದ ಆಗಮಿಸಿದ ವೈದ್ಯಕೀಯ ಸಲಕರಣೆಗಳನ್ನು ತ್ವರಿತವಾಗಿ ದೇಶದಲ್ಲಿ ಅತೀ ಅಗತ್ಯವಿರುವ ರಾಜ್ಯ ಹಾಗೂ ಕೇಂದ್ರಾಡಳಿತಕ್ಕೆ ಪ್ರದೇಶಕ್ಕೆ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುತ್ತಿದೆ.
ಯೂರೋಪಿಯನ್ ಅಧ್ಯಕ್ಷರ ಜೊತೆ ಮಾತುಕತೆ; ಬೆಂಬಲಕ್ಕೆ ಧನ್ಯವಾದ ಹೇಳಿದ ಮೋದಿ !
ವಿದೇಶದಿಂದ ಸಲಕರಣೆ ಆಮದು ಮಾಡಿಕೊಳ್ಳಲು ಕಸ್ಟಮ್ ಡ್ಯೂಟಿ, ರಾಜ್ಯಗಳಲಿಲಿ ಜಿಎಸ್‌ಟಿ ಸೇರಿದಂತೆ ಹಲವು ತೆರಿಗೆಗಳನ್ನು ಮುಕ್ತ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ