ವಿಪತ್ತು ನಿರ್ವಹಣೆಯಲ್ಲಿ ಭಾರತ ವಿಶ್ವಕ್ಕೆ ಮಾದರಿ; ಬಿಪೊರ್‌ಜಾಯ್ ಎದುರಿಸಿದ ರೀತಿಗೆ ಮೋದಿ ಮೆಚ್ಚುಗೆ!

Published : Jun 20, 2023, 05:45 PM IST
ವಿಪತ್ತು ನಿರ್ವಹಣೆಯಲ್ಲಿ ಭಾರತ ವಿಶ್ವಕ್ಕೆ ಮಾದರಿ; ಬಿಪೊರ್‌ಜಾಯ್ ಎದುರಿಸಿದ ರೀತಿಗೆ ಮೋದಿ ಮೆಚ್ಚುಗೆ!

ಸಾರಾಂಶ

ಬಿಪೊರ್‌ಜಾಯ್ ಚಂಡಮಾರುತವನ್ನು ಭಾರತ ಯಶಸ್ವಿಯಾಗಿ ಎದುರಿಸಿದೆ. ಕಚ್ ಜಿಲ್ಲೆಗೆ ಅಪ್ಪಳಿಸಿದ ಚಂಡಮಾರುತವನ್ನು ಭಾರತ ಎದುರಿಸಿದ ರೀತಿಗೆ ಪ್ರಧಾನಿ ಮೋದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಸಾವು ನೋವಿಲ್ಲದ ಭೀಕರ ಚಂಡಮಾರುತವನ್ನು ಭಾರತ ನಿಭಾಯಿಸಿದೆ ಎಂದು ಮೋದಿ, ಭಾರತದ ವಿಪತ್ತು ನಿರ್ವಹಣಾ ರೀತಿಯನ್ನು ಪ್ರಶಂಸಿಸಿದ್ದಾರೆ.

ನವದೆಹಲಿ(ಜೂ.20): ಬಿಪೊರ್‌ಜಾಯ್ ಚಂಡಮಾರುತ ಗುಜರಾತ್‌ನ ಕಚ್ ಜಿಲ್ಲಿಗೆ ಅತೀ ಹೆಚ್ಚಿನ ಹಾನಿ ಮಾಡಿದೆ. 150 ಕಿಲೋಮೀಟರ್ ವೇಗದಲ್ಲಿ ಬೀಸಿದ ಈ ಚಂಡಮಾರುತ ಹೆಚ್ಚಿನ ಹಾನಿ ಮಾಡಲು ವಿಪತ್ತು ನಿರ್ವಹಣಾ ತಂಡ ಅವಕಾಶ ನೀಡಿಲ್ಲ. ಅಪಾಯದ ಸ್ಥಳದಿಂದ ಜನರನ ಸ್ಥಳಾಂತರ, ಮೀನುಗಾರರು, ಕಾರ್ಮಿಕರಿಗೆ ವಿಶೇಷ ಸೂಚನೆ ಸೇರಿದಂತೆ ಹಲವು ಮುಂಜಾಗ್ರತ ಕ್ರಮಗಳಿಂದ ಭಾರತ ಬಿಪೊರ್‌ಜಾಯ್ ಚಂಡಮಾರುತವನ್ನು ಯಶಸ್ವಿಯಾಗಿ ಎದುರಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್‌ನಲ್ಲಿ ಉಲ್ಲೇಖಿಸಿದ್ದಾರೆ.  ಭಾರತ ವರ್ಷದಿಂದ ವರ್ಷಕ್ಕೆ ವಿಪತ್ತು ನಿರ್ವಹಣೆಯಲ್ಲಿ ಯಶಸ್ಸು ಸಾಧಿಸುತ್ತಾ ಬಂದಿದೆ. ಇದು ಮಾದರಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ವಿಪತ್ತು ನಿರ್ವಹಣಾ ತಂಡ, ಗುಜರಾತ್ ಸರ್ಕಾರ ಸೇರಿದಂತೆ ಹಲವು ಇಲಾಖೆಗಳನ್ನು ಪ್ರಶಂಸಿದ ಮೋದಿ, ಇದೇ ವೇಳೆ ಕಚ್ ಸೇರಿದಂತೆ ಚಂಡಮಾರುತ ಅಪ್ಪಳಿಸಿದ ಕರಾವಳಿ ತೀರ ಪ್ರದೇಶದ ಜನರನ್ನು ಹೊಗಳಿದ್ದಾರೆ. ಕಚ್ ಜಿಲ್ಲೆಯ ಜನರು ಬಿಪೊರ್‌ಜಾಯ್ ಚಂಡಮಾರುತವನ್ನು ಯಶಸ್ವಿಯಾಗಿ ಎದುರಿಸುತ್ತಾರೆ ಅನ್ನೋ ವಿಶ್ವಾಸ ನನಗಿತ್ತು. ಕಾರಣ ದಶಕಗಳ ಹಿಂದೆ ಇದೇ ಕಚ್ ಜನರು ಭೀಕರ ಭೂಕಂಪವನ್ನು ಎದುರಿಸಿದ್ದರು. ಇದೀಗ ಅದಕ್ಕಿಂತವೂ ವೇಗವಾಗಿ ಚಂಡಮಾರುತದ ಪರಿಣಾಮದಿಂದ ಹೊರಬರಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಪ್ರವಾಹ, ಉತ್ತರ ಗುಜರಾತ್‌ನಲ್ಲಿ ಭಾರಿ ಮಳೆ

ಚಂಡ​ಮಾ​ರು​ತದ ಮುನ್ಸೂ​ಚನೆ ಅರಿತು 1 ಲಕ್ಷ ಜನ​ರನ್ನು ಮೊದಲೇ ತೆರ​ವು​ಗೊ​ಳಿಸಿ ಶೂನ್ಯ ಸಾವು ದಾಖ​ಲಾ​ಗಿ​ರು​ವು​ದನ್ನು ತಮ್ಮ ಮನ್ ಕಿ ಬಾತ್‌ನಲ್ಲಿ ಮೋದಿ ಪ್ರಸ್ತಾ​ಪಿ​ಸಿ​ದ​ರು. ‘2 ದಶಕಗಳ ಹಿಂದೆ ಕಛ್‌ ಭೀಕರ ಭೂಕಂಪಕ್ಕೆ ತುತ್ತಾದಾಗ, ಆ ಅನಾಹುತದಿಂದ ಎಂದಾದರೂ ಕಛ್‌ ಚೇತರಿಸಿಕೊಳ್ಳಲಿದೆಯೇ ಎಂದು ಜನರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಕಛ್‌ನ ಜನರು ಆ ಭೀಕರ ವಿಪತ್ತಿನಿಂದ ಚೇತರಿಸಿಕೊಂಡರು. ಕಳೆದ ಕೆಲ ವರ್ಷಗಳಲ್ಲಿ ಭಾರತದ ವಿಪತ್ತು ನಿರ್ವಹಣಾ ಸಾಮರ್ಥ್ಯ ಹಲವು ಪಟ್ಟು ಸುಧಾರಿಸಿದ್ದು, ನಾವು ಇತರರಿಗೆ ಮಾದರಿಯಾಗಿ ಹೊರಹೊಮ್ಮಿದ್ದೇವೆ’ ಎಂದು ಇತ್ತೀಚಿನ ಚಂಡಮಾರುತವನ್ನು ಗುಜರಾತ್‌ ಅದರಲ್ಲೂ ವಿಶೇಷವಾಗಿ ಕಛ್‌ ಪ್ರದೇಶ ಯಶಸ್ವಿಯಾಗಿ ಎದುರಿಸಿದ್ದನ್ನು ಮೋದಿ ಶ್ಲಾಘಿಸಿದರು.

ಇತ್ತೀಚೆಗೆ ಚಂಡಮಾರುತ ಅಪ್ಪಳಿಸಿ ಹಾನಿಯುನ್ನುಂಟು ಮಾಡಿದ ತೀರ ಪ್ರದೇಶಗಳಿಗೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದರು. ಈ ವೇಳೆ ನಿರ್ವಹಣೆ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಿಪೋರ್‌ಜಾಯ್ ಚಂಡಮಾರುತಕ್ಕೆ ಯಾರೂ ಬಲಿಯಾಗದಂತೆ ನಿರ್ವಹಣಾ ತಂಡ ನೋಡಿಕೊಡಿಂದೆ. ಇದು ಸಮಾಧಾನಕರ ಎಂದು ಅಮಿತ್ ಶಾ ಹೇಳಿದ್ದರು.

ಸಹಜ ಸ್ಥಿತಿಗೆ ಗುಜ​ರಾ​ತ್‌: ರಾಜ​ಸ್ಥಾ​ನ​ಕ್ಕೆ ಈಗ ಚಂಡ​ಮಾ​ರುತ ಲಗ್ಗೆ, ಭಾರಿ ಮಳೆ

ಕೇಂದ್ರ ಗೃಹ ಸಚಿವಾಲಯ, ಗುಜರಾತ್ ಸರ್ಕಾರ, ವಿವಿಧ ಇಲಾಖೆಗಳ ಜೊತೆ ಪ್ರಧಾನಿ ಮೋದಿ ನಿರಂತರ ಸಂಪರ್ಕದಲ್ಲಿದ್ದರು. ಹಲವು ಮಾರ್ಗದರ್ಶವನ್ನು ನೀಡಿದ್ದರು. ಮೋದಿ ಸೂಚನೆಯಂತೆ ಕೆಲಸ ಮಾಡಲಾಗಿತ್ತು. ಇದರಿಂದ ಹಾನಿ ಪ್ರಮಾಣ ಕಡಿಮೆಯಾಗಿದೆ ಎಂದು ಅಮಿತ್ ಶಾ ಹೇಳಿದ್ದರು. ಚಂಡ​ಮಾ​ರು​ತ​ದಿಂದ ಹೆಚ್ಚು ಬಾಧೆಗೆ ಒಳ​ಗಾದ ಜಖಾವು ಬಂದರು ಹಾಗೂ ಮಾಂಡ್ವಿ ಬಂದ​ರಿಗೆ ಶನಿ​ವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ನೀಡಿ​ದ್ದರು. ಬಳಿಕ ಭುಜ್‌​ನಲ್ಲಿ ಅಧಿ​ಕಾ​ರಿ​ಗಳ ಜತೆ ಸಭೆ ನಡೆ​ಸಿದ ಅವರು, ಪರಿ​ಹಾರ ಹಾಗೂ ರಕ್ಷಣಾ ಕಾರ್ಯಾ​ಚ​ರಣೆ, ಮರು​ನಿ​ರ್ಮಾ​ಣ ಕಾರ್ಯ​ಗಳ ಮಾಹಿತಿ ಪಡೆದು ಅಗತ್ಯ ಸಲ​ಹೆ-ಸೂಚ​ನೆ​ಗ​ಳನ್ನು ನೀಡಿ​ದ​ರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ
ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು