ದೇಶದಲ್ಲಿ 10 ಲಕ್ಷ ಸೋಂಕಿತರು ಗುಣಮುಖ..! ಇನ್ನೂ ಹೆಚ್ಚಾಗಲಿದೆ ಸೋಂಕಿತರ ಸಂಖ್ಯೆ

By Suvarna NewsFirst Published Jul 30, 2020, 2:22 PM IST
Highlights

ಕೊರೋನಾ ಸಂಕಷ್ಟದ ಮಧ್ಯೆ ದೇಶದಲ್ಲಿ 10 ಲಕ್ಷ ಸೋಂಕಿರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ.

ನವದೆಹಲಿ(ಜು.30): ಕೊರೋನಾ ಸಂಕಷ್ಟದ ಮಧ್ಯೆ ದೇಶದಲ್ಲಿ 10 ಲಕ್ಷ ಸೋಂಕಿರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಸಂಬಂಧ ಟ್ವೀಟ್ ಮಾಡಿದ್ದು, 10 ಲಕ್ಷ ಜನ ಸೋಂಕಿತರು ಗುಣಮುಖರಾಗಿದ್ದು, ಇದರ ಹಿರಿಮೆ ವೈದ್ಯರು ಹಾಗೂ ಫ್ರಂಟ್‌ ಲೈನ್ ಆರೋಗ್ಯ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಬಡವರಿಗಾಗಿ ಕಚೇರಿಯನ್ನೇ ಕೋವಿಡ್‌ ಕೇಂದ್ರವಾಗಿಸಿದ!

ಭಾರತದಲ್ಲಿ ಇಲ್ಲಿಯಬರೆಗೂ 10 ಲಕ್ಷ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ವೈದ್ಯರೂ, ಫ್ರಂಟ್‌ಲೈನ್‌ ಕಾರ್ಯಕರ್ತರೂ, ನರ್ಸ್‌ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ. ಅವರ ನಿಸ್ವಾರ್ಥ ಸೇವೆ, ತ್ಯಾಗವೇ ಇದಕ್ಕೆ ಕಾರಣ ಎಂದು ಟ್ವೀಟ್ ಮಾಡಲಾಗಿದೆ.

ಮರಣ ಪ್ರಮಾಣವೂ ಕಡಿಮೆಯಾಗಿದೆ. ಬೇರೆ ದೇಶಗಳ ಕೊರೋನಾ ಮರಣ ಪ್ರಮಾಣಕ್ಕೆ ಹೋಲಿಸಿದಲ್ಲಿ ಭಾರತದಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಜೂನ್ 19ಕ್ಕೆ ಶೇ.3.3 ರಷ್ಟು ಇದ್ದ ಮರಣ ಪ್ರಮಾಣ ಬುಧವಾರ ಜುಲೈ.29ಕ್ಕೆ 2.23ಕ್ಕೆ ಇಳಿದಿದೆ. ಇದೀಗ ಪ್ರತಿ ದಿನ ದೇಶದಲ್ಲಿ 30 ಸಾವಿರ ಜನ ಸೋಂಕಿತರು ಗುಣಮುಖರಾಗುತ್ತಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ.

ಅತಿಯಾದ ಸ್ಯಾನಿಟೈಸರ್‌ ಬಳಸುತ್ತೀರಾ? ಎಚ್ಚರ...! ಮತ್ತೊಂದು ಸಮಸ್ಯೆಗೆ ಇದು ದಾರಿ!

ಭಾರತದಲ್ಲಿ ಕಳೆದ 6 ತಿಂಗಳಲ್ಲಿ 16 ಲಕ್ಷ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ನಮ್ಮಲ್ಲಿ ಪ್ರಕರಣ ಇನ್ನಷ್ಟು ಹೆಚ್ಚಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಮುಂಬೈ ಮತ್ತು ದೆಹಲಿಯಲ್ಲಿಯೂ ಕೊರೋನಾ ಸಾವಿನ ಸಂಖ್ಯೆ ಇಳಿಕೆಯಾಗಿದೆ.  ಕೊರೋನಾ ಸೋಂಕಿತರು ಗುಣಮುಖರಾಗುವ ಪ್ರಮಾಣ ಶೇ.64.51ರಷ್ಟು ಹೆಚ್ಚಿದೆ.

click me!