ಮೇಡ್ ಇನ್ ಇಂಡಿಯಾ ಲಸಿಕೆ ಪ್ರಶ್ನಿಸಿದವರಿಗೆ ಉತ್ತರ ಸಿಕ್ಕಿದೆ, ಕೋವಿಡ್ ಸಂಕಷ್ಟ ಸಮಯ ನೆನೆದ ಮೋದಿ!

By Suvarna NewsFirst Published Apr 27, 2023, 4:59 PM IST
Highlights

ವಿದೇಶಗಳು ಲಸಿಕೆ ಅಭಿವೃದ್ಧಿಪಡಿಸುತ್ತದೆ. ಒಂದು ದಿನ ನಮಗೂ ಕೊಡುತ್ತಾರೆ. ಮತ್ಯಾಕೆ ಮೇಡ್ ಇನ್ ಇಂಡಿಯಾ ಲಸಿಕೆ ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದರು. ಆದರೆ ಭಾರತ ಆತ್ಮನಿರ್ಭರದ ಮೂಲಕ ಹೊಸ ಅಧ್ಯಾಯ ಬರೆದಿದೆ. ಇದರ ಪರಿಣಾಮ ಏನಾಗಿದೆ ಅನ್ನೋದು ಜಗತ್ತಿಗೆ ಅರಿವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿನ ದಿನಗಳನ್ನು ಮೋದಿ ನೆನೆದಿದ್ದಾರೆ.

ನವದೆಹಲಿ(ಏ.27): ಕೋವಿಡ್ ಉತ್ತುಂಗದಲ್ಲಿದೆ. ಇದರ ನಡುವೆ ಭಾರತದ ಲಸಿಕೆ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆಯಾ? ವಿದೇಶಗಳು ಲಸಿಕೆ ತಯಾರಿಸಿ ಒಂದು ದಿನ ನಮಗೂ ನೀಡುತ್ತಾರೆ ಎಂದು ಹಲವರು ಹೇಳಿದ್ದರು. ಆದರೆ ಈ ಸಂಕಷ್ಟದ ಸಮಯದಲ್ಲಿ ಭಾರತ ಆತ್ಮನಿರ್ಭರತೆ ದಾರಿಯನ್ನು ಆಯ್ಕೆ ಮಾಡಿಕೊಂಡಿತು. ಇದರ ಪರಿಣಾಮ ಏನಾಗಿದೆ ಅನ್ನೋದು ವಿಶ್ವಕ್ಕೆ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಿಪಬ್ಲಿಕ್ ಮಾಧ್ಯಮದ ಸಮ್ಮಿಟ್‌ನಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಕೋವಿಡ್ ಕಾಲದಲ್ಲಿನ ಸಂಕಷ್ಟದ ದಿನಗಳನ್ನು ನೆನೆದಿದ್ದಾರೆ.

ಕೋವಿಡ್ ಸಮಯದಲ್ಲಿ ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ ಅತ್ಯಂತ ಮುಖ್ಯವಾಗಿತ್ತು. ಅತೀವ ಒತ್ತಡ, ಹೊಸ ದಾರಿ, ಸವಾಲುಗಳ ನಡುವೆ ದೇಶದ ಹಿತಕ್ಕಾಗಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನಡೆದಿದ್ದೇನೆ. ಈ ವೇಳೆ ರಾಜಕೀಯ ಭವಿಷ್ಯದ ಕುರಿತು ಯಾವುದೇ ಆಲೋಚನೆ ಮಾಡಿಲ್ಲ. ಕೇವಲ ದೇಶದ ಹಿತ ಮಾತ್ರ ನನ್ನ ಮುಂದಿತ್ತು ಎಂದು ಮೋದಿ ಹೇಳಿದ್ದಾರೆ. ಆದರೆ ಲಸಿಕೆ ಮಾರುಕಟ್ಟೆಗೆ ಬಂದ ಬೆನ್ನಲ್ಲೇ ಹಲವರು ವಿದೇಶಿ ಲಸಿಕೆಯನ್ನು ಶ್ಲಾಘಿಸಿದರು. ಭಾರತದ ಲಸಿಕೆ ಕುರಿತು ಯಾವೆಲ್ಲಾ ಮಾತುಗಳನ್ನು ಆಡಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿದೆ ಎಂದು ಮೋದಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ, ಸಂವಾದದಲ್ಲಿ ಮೋದಿ ಮಾತು!

ಭಾರತ 2 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಗೆ ಬರಲು 60 ವರ್ಷ ತೆಗೆದುಕೊಂಡಿದೆ. ಕಳೆದ 9 ವರ್ಷದಲ್ಲಿ ಭಾರತ 3.5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಿದೆ. ವಿಶ್ವದ 10ನೇ ಅರ್ಥವ್ಯವಸ್ಥೆಯಿಂದ ಇದೀಗ 5ನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದೇವೆ. ಇದು ಸಂಕಷ್ಟದ ಸಮಯದಲ್ಲೂ ನಾವು ಸಾಧನೆ ಮಮಾಡಿದ್ದೇವೆ. ಪರಿವರ್ತನೆ ಜಗತ್ತಿನ ಮುಂದಿದೆ ಎಂದು ಮೋದಿ ಹೇಳಿದ್ದಾರೆ.

ಪ್ರತಿ ನೀತಿ ರೂಪಿಸುವ ಮೂದಲು ತಳಮಟ್ಟದ ಜನಸಾಮಾನ್ಯನಿಗೆ ಇದರಿಂದ ಆಗುವ ಪ್ರಯೋಜನಗಳು, ಸಾವಲುಗಳ ಕುರಿತು ಚರ್ಚಿಸಿ ನಿರ್ಧಾರಕೈಗೊಳ್ಳಲಾಗುತ್ತದೆ. ದೇಶದ ಅಭಿವೃದ್ಧಿಗ ಹೊಸ ವೇಗ ನೀಡಿದ್ದೇವೆ. ಕೆಲ ಯೋಜನೆಗಳನ್ನು ಆರಂಭಿಸಿದಾಗ ಕೆಲವರು ಟೀಕೆ ಮಾಡಿದ್ದರು. ಆದರೆ ಇದೀಗ ಅದೇ ಯೋಜನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ದಲಿತರು, ಬಡವರರು, ರೈತರು, ತುಳಿತಕ್ಕೊಳಗಾದವರು, ಮಧ್ಯಮವರ್ಗ ಸೇರಿದಂತೆ ಎಲ್ಲಾ ವರ್ಗದ ಜನರು ನಮ್ಮ ಸರ್ಕಾರದ ಲಾಭ ಪಡೆಯುತ್ತಿದ್ದಾರೆ. ತುಷ್ಠೀಕರಣ ರಾಜಕಾರಣ ಬಿಟ್ಟು ಸಂತುಷ್ಠಿಕರಣಕ್ಕೆ ಆದ್ಯತೆ ನೀಡಿದ್ದೇವೆ ಎಂದರು.

ಮೇ 2ರಂದು ಸಿಂಧನೂರಿಗೆ ಮೋದಿ: ಪ್ರಧಾನಿಯೊಬ್ಬರು ಆಗಮಿಸುತ್ತಿರುವುದು ಇದೇ ಮೊದಲು!

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಈ ದೇಶದ ಬಡವರ ನೆಮ್ಮದಿಗೆ ಕಾರಣವಾದ ಯೋಜನೆ. ಕೊರೋನಾ ಸಮಯದಲ್ಲಿ ಭಾರತದ ಬಡವರು ಹಸಿವಿನಿಂದ ಇರಬಾರದು ಎಂದು ಆರಂಭಗೊಂಡ ಈ ಯೋಜನೆ ವಿಸ್ತರಣೆಗೊಳ್ಳುತ್ತಲೇ ಬಂದಿದೆ. ಇಂದ ಬಡವರ ಹಕ್ಕಾಗಿ ಬದಲಾಗಿದೆ. ಇದರಿಂದ ಬಡವರು ಯಾವುದೇ ಚಿಂತೆಯಿಲ್ಲದೆ ಬದುಕು ಸಾಗಿಸಲು ಸಾಧ್ಯವಿದೆ.
 

click me!