ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆ, ರಾಮನಮವಿ ಹಿಂಸಾಚಾರ NIA ತನಿಖೆಗೆ ಆದೇಸಿಸಿದ ಹೈಕೋರ್ಟ್!

By Suvarna News  |  First Published Apr 27, 2023, 1:58 PM IST

ರಾಮನವಿ ಆಚರಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ರಾಮ ಭಕ್ತರ ಮೇಲೆ ಕಲ್ಲು, ಇಟ್ಟಿಗೆ ತೂರಲಾಗಿತ್ತು. ಬಳಿಕ ಇಡೀ ಪಟ್ಟಣವೇ ಹೊತ್ತಿ ಉರಿದಿತ್ತು. ಈ ಪ್ರಕರಣದ ತನಿಖೆ ಕುರಿತು ಸಲ್ಲಿಸಿದ್ದ ಬಿಜೆಪಿ ಅರ್ಜಿ ಪುರಸ್ಕರಿಸಿದ ಕೋಲ್ಕತಾ ಕೋರ್ಟ್, ಎನ್ಐಎ ತನಿಖೆಗೆ ಆದೇಶಿಸಿದೆ. ಈ ಮೂಲಕ ಇದು ಬಿಜೆಪಿ ಹಾಗೂ ಬಜರಂಗದಳದ ಕೃತ್ಯ ಎಂದಿದ್ದ ಮಮತಾ ಬ್ಯಾನರ್ಜಿಗೆ ಹಿನ್ನಡೆಯಾಗಿದೆ.


ಕೋಲ್ಕತಾ(ಏ.27): ರಾಮನವಮಿ ಆಚರಣೆ ವೇಳೆ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳು ಹೊತ್ತಿ ಉರಿದಿತ್ತು. ರಾಮ ಭಕ್ತರ ಮೇಲೆ ಕಲ್ಲು, ಇಟ್ಟಿಗೆ ತೂರಲಾಗಿತ್ತು. ವಾಹನಗಳ ಬೆಂಕಿಗೆ ಆಹುತಿಯಾಗಿದ್ದವು. ಈ ಘಟನೆ ಬಳಿಕ ಬಂಗಾಳದಲ್ಲಿ ರಾಜಕೀಯ ಬಡಿದಾಟ ಜೋರಾಗಿತ್ತು. ಈ ಕೃತ್ಯದಿಂದ ಬಿಜೆಪಿ ಹಾಗೂ ಬಜರಂಗದಳದ ಕೈವಾಡವಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಪ್ರಕರಣದ ತನಿಖೆ ಹಳ್ಳ ಹಿಡಿಯುತ್ತಿದೆ ಎಂದು ಆರೋಪಿಸಿದ್ದ ಬಿಜೆಪಿ, ಘಟನೆಯಲ್ಲಿ ಉಗ್ರರ ಕೃತ್ಯವಿದೆ. ಹೀಗಾಗಿ ಈ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಬಿಜೆಪಿ ಅರ್ಜಿ ಪುರಸ್ಕರಿಸಿದೆ. ರಾಮನವಮಿ ಹಿಂಸಾಚರ ತನಿಖೆಯನ್ನು ಎನ್ಐಎಗೆ ವಹಿಸಲಾಗಿದೆ.

ರಾಮನವಮಿ ವೇಳೆ ಬಂಗಾಳದ ಹೂಗ್ಲಿ, ಹೌರಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆದ ಹಿಂಸಾಚರ ಪ್ರಕರಣ ತನಿಖೆಯನ್ನು ಬಂಗಾಳ ಪೊಲೀಸರು ಹಳ್ಳ ಹಿಡಿಸುತ್ತಿದ್ದಾರೆ. ಈ ಪ್ರಕರಣದ ಹಿಂದೆ ಭಯೋತ್ಪಾದಕರ ಕೈವಾಡವಿದೆ. ಹೀಗಾಗಿ ಎನ್ಐಎ ತನಿಖೆಗೆ ನೀಡಬೇಕು ಎಂದು ಹೈಕೋರ್ಟ್‌ಗೆ ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣದ ಗಂಭೀರತ ಮನಗಂಡು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ.

Tap to resize

Latest Videos

Watch: ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಶವವನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಬಂಗಾಳ ಪೊಲೀಸ್‌!

ಪಶ್ಚಿಮ ಬಂಗಾಳ ಪೊಲೀಸರು ಎಲ್ಲಾ ಮಾಹಿತಿಯನ್ನು ಎನ್ಐಎ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು. ಈ ಕುರಿತ ಸಿಸಿಟಿವಿ ದೃಶ್ಯ ಸೇರಿದಂತೆ ಕಲೆ ಹಾಕಿರುವ ದಾಖಲೆಗಳನ್ನು ಎನ್‌ಐಎಗೆ ವಹಿಸಬೇಕು ಎಂದು ಕೋರ್ಟ್ ಸೂಚಸಿದೆ.ಈ ಘಟನೆ ಬೆನ್ನಲ್ಲೇ ಬಂಗಾಳ ಬಿಜೆಪಿ ನಾಯಕರು ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮಮತಾ ಬ್ಯಾನರ್ಜಿ ಪ್ರಚೋದಿತ ಹೇಳಿಕೆಯಿಂದ ಗಲಭೆ ಸೃಷ್ಟಿಯಾಗಿದೆ ಎಂದಿತ್ತು. ಇದಕ್ಕೆ ಪ್ರತಿಯಾಗಿ ಮಮತಾ ಬ್ಯಾನರ್ಜಿ, ಇದು ಬಿಜೆಪಿ ಹಾಗೂ ಬಜರಂಗದಳದ ಕೃತ್ಯ ಎಂದು ಆರೋಪಿಸಿದ್ದರು.

ಹಿಂಸಾಚಾರಗಳಿಗೆ ಬಿಜೆಪಿಯೇ ನೇರ ಕಾರಣ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ‘ಹೌರಾದಲ್ಲಿ ನಡೆದಿರುವ ಘಟನೆ ದುರದೃಷ್ಟಕರವಾದುದು. ಆದರೆ ಈ ಹಿಂಸಾಚಾರದ ಹಿಂದೆ ಹಿಂದೂಗಳಾಗಲ್ಲ. ಮುಸ್ಲಿಮರಾಗಲೀ ಇಲ್ಲ ಇದರ ಹಿಂದೆ ಇರುವುದು ಬಿಜೆಪಿ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ಇದರಲ್ಲಿ ಬಿಜೆಪಿಯ ಯಾವುದೇ ಕೈವಾಡವಿಲ್ಲ. ಈ ಪ್ರಕರಣದ ಕುರಿತಾಗಿ ಎನ್‌ಐಎ ತನಿಖೆ ನಡೆಸಲಿ’ ಎಂದು ಹೇಳಿದೆ.

ನಾನು ಅಮಿತ್‌ ಶಾ ಗೆ ಕರೆ ಮಾಡಿರುವುದು ಸಾಬೀತಾದ್ರೆ ರಾಜೀನಾಮೆ ಕೊಡ್ತೇನೆ ಎಂದು ದೀದಿ ಹೇಳಿದ್ಯಾಕೆ?

ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಪಾಲ ಡಾ.ಆನಂದ ಬೋಸ್‌ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ್‌ ಮುಜುಂದಾರ್‌ ಅವರೊಂದಿಗೆ ಮಾತನಾಡಿದ್ದಾರೆ. ಅಲ್ಲದೇ ಈ ಘಟನೆಯ ಕುರಿತಾಗಿ ಮಾಹಿತಿ ಪಡೆದಿದ್ದರು. 
 

click me!