
ಸಿಕ್ಕಿಂ(ಜ.25): ಪೂರ್ವ ಲಡಾಖ್‌ನಲ್ಲಿ LAC ಬಳಿ ಚೀನಾ ಹಾಗೂ ಭಾರತೀಯ ಯೋಧರ ನಡುವೆ ಘರ್ಷಣೆಯಾಗಿದೆ. ಮಾಧ್ಯಮ ವರದಿಗಳನ್ವಯ ಚೀನಾ ಸೈನಿಕರು ಎಲ್‌ಎಸಿ ಯಥಾಸ್ಥಿತಿ ಬದಲಾಯಿಸಲು ಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲ ಚೀನೀ ಸೈನಿಕರು ಭಾರತದ ಗಡಿ ದಾಟಲು ಯತ್ನಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಯೋಧರು ಅವರನ್ನು ತಡೆದಿದ್ದಾರೆ. ಉಭಯ ರಾಷ್ಟ್ರದ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, ಇದರಲ್ಲಿ ನಾಲ್ವರು ಭಾರತೀಯ ಹಾಗೂ 20 ಚೀನಾ ಯೋಧರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಮೂರು ದಿನಗಳ ಹಿಂದೆ ನಾಕುಲಾದಲ್ಲಿ ನಡೆದಿತ್ತು ಜಗಳ
ಇನ್ನು ಈ ಘರ್ಷಣೆ ಮೂರು ದಿನಗಳ ಹಿಂದೆ ಸಿಕ್ಕಿಂನ ನಾಕುಲಾ ಸೆಕ್ಟರ್‌ನಲ್ಲಿ ನಡೆದಿತ್ತೆಂದು ವರದಿಗಳು ಉಲ್ಲೇಖಿಸಿವೆ. ಗಡಿ ದಾಟಲು ಯತ್ನಿಸಿದ ಚೀನಾದ ಸೈನಿಕರನ್ನು ತಮ್ಮ ಕಾರ್ಯಾಚರಣೆ ಮೂಲಕ ಭಾರತೀಯ ಸೈನಿಕರು ತಡೆದಿದ್ದಾರೆ.
ಜೂನ್ 16ರಂದೂ ಸೈನಿಕರ ನಡುವೆ ನಡೆದಿತ್ತು ಘರ್ಷಣೆ
15-16 ಜೂನ್‌ನಲ್ಲಿ ಲಡಾಖ್‌ನ ಗಲ್ವಾನ್ ಕಣಿವೆಯ ಎಲ್‌ಎಸಿಯಲ್ಲೂ ಉಭಯ ರಾಷ್ಟ್ರದ ಸಐನಿಕರ ನಡುವೆ ಸಂಘರ್ಷ ನಡೆದಿತ್ತು. ಇದರಲ್ಲಿ ಭಾರತೀಯ ಸೇನೆಯ ಕರ್ನಲ್ ಸೇರಿ ಇಪ್ಪತ್ತು ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಈ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಚೀನಾಗೆ ತಕ್ಕ ಪಾಠ ಕಲಿಸಿದ್ದರೆನ್ನಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ