ಲಡಾಖ್‌ನಲ್ಲಿ ಕೇವಲ 150 ಮೀ. ದೂರದಲ್ಲಿ ಭಾರತ- ಚೀನಾ ಪೋಸ್ಟ್‌!

By Kannadaprabha NewsFirst Published Jun 30, 2021, 8:02 AM IST
Highlights

* ಪೂರ್ವ ಲಡಾಖ್‌ನಲ್ಲಿ ಯುದ್ಧ ಸನ್ನದ್ಧ ಸ್ಥಿತಿಗೆ ತಲುಪಿ ಬಳಿಕ ಅಲ್ಲಿಂದ ಹಿಂದಕ್ಕೆ ಸರಿಯಲು ಒಪ್ಪಿಕೊಂಡಿದ್ದ ಭಾರತ ಮತ್ತು ಚೀನಾ ಸೇನೆಗಳು

* ಒಪ್ಪಂದಕ್ಕೂ ಮೊದಲಿನ ಫೋಟೋಗಳು ಲಭ್ಯ

* ಲಡಾಖ್‌ನಲ್ಲಿ ಕೇವಲ 150 ಮೀ. ದೂರದಲ್ಲಿ ಭಾರತ- ಚೀನಾ ಪೋಸ್ಟ್‌

* ದಕ್ಷಿಣ ಪ್ಯಾಂಗಾಂಗ್‌ ತೀರದ ಫೆ.11ರ ಉಪಗ್ರಹ ಚಿತ್ರ ಇದೀಗ ಲಭ್ಯ

ನವದೆಹಲಿ(ಜೂ.30): ಪೂರ್ವ ಲಡಾಖ್‌ನಲ್ಲಿ ಯುದ್ಧ ಸನ್ನದ್ಧ ಸ್ಥಿತಿಗೆ ತಲುಪಿ ಬಳಿಕ ಅಲ್ಲಿಂದ ಹಿಂದಕ್ಕೆ ಸರಿಯಲು ಒಪ್ಪಿಕೊಂಡಿದ್ದ ಭಾರತ ಮತ್ತು ಚೀನಾ ಸೇನೆಗಳು, ಇಂಥ ಒಪ್ಪಂದಕ್ಕೂ ಮುನ್ನ ಕೇವಲ 150 ಮೀಟರ್‌ ಅಂತರದಲ್ಲಿ ಪರಸ್ಪರ ಸೇನಾ ಪೋಸ್ಟ್‌ಗಳನ್ನು ಸ್ಥಾಪಿಸಿಕೊಂಡಿದ್ದವು ಎಂಬ ವಿಷಯ ಬೆಳಕಿಗೆ ಬಂದಿದೆ.

ಮುಂಚೂಣಿ ನೆಲೆಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು 2021ರ ಫೆ.10ಕ್ಕೆ ಭಾರತ- ಚೀನಾ ಒಪ್ಪಿದ್ದವು. ಅದರ ಮಾರನೇ ದಿನ ಅಂದರೆ ಫೆ.11ರಂದು ದಕ್ಷಿಣ ಪ್ಯಾಂಗಾಗ್‌ ಸರೋವರದ ತೀರದಲ್ಲಿ ಉಭಯ ದೇಶಗಳ ಸೇನಾ ಪೋಸ್ಟ್‌ಗಳು ಇದ್ದ ಚಿತ್ರಗಳನ್ನು ಉಪಗ್ರಹಗಳು ಸೆರೆಹಿಡಿದಿದ್ದು, ಅದೀಗ ಗೂಗಲ್‌ ಅಥ್‌ರ್‍ ಪ್ರೋನಲ್ಲಿ ಅಪ್‌ಲೋಡ್‌ ಆಗಿದೆ.

ಈ ದೃಶ್ಯಗಳ ಅನ್ವಯ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನೆ ಪೋಸ್ಟ್‌ ಕಂಡುಬರುತ್ತಿದ್ದರೆ, ಅಲ್ಲಿಂದ ಕೇವಲ 150 ಮೀ. ದೂರದಲ್ಲಿ ಚೀನಾ ಪೋಸ್ಟ್‌ಗಳು ಕಾಣಿಸುತ್ತಿವೆ.

ಇನ್ನು ಆ ಸಮಯದಲ್ಲಿ ಸ್ಥಳದಲ್ಲಿದ್ದ ಕೆಲ ಅಧಿಕಾರಿಗಳ ಪ್ರಕಾರ ಕೈಲಾಸ ಪರ್ವತ ಶ್ರೇಣಿಗಳ ವಲಯದಲ್ಲಿ ಉಭಯ ದೇಶಗಳ ಟ್ಯಾಂಕ್‌ಗಳು ಕೇವಲ 50 ಮೀಟರ್‌ ಅಂತರದಲ್ಲೇ ಮುಖಾಮುಖಿಯಾಗಿ ನಿಯೋಜನೆಗೊಂಡಿದ್ದವು. ಇದು ಪರಿಸ್ಥಿತಿ ಯಾವ ಹಂತಕ್ಕೆ ತಲುಪಿತ್ತು ಎಂಬುದನ್ನು ಸಾರುತ್ತವೆ ಎಂದು ಮೂಲಗಳನ್ನು ಉಲ್ಲೇಖಿಸಿ ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಈ ಪ್ರದೇಶದಲ್ಲಿ ಉಭಯ ದೇಶಗಳು ಸರ್ವಋುತು ರಸ್ತೆ ನಿರ್ಮಿಸಿಕೊಂಡಿದ್ದು, ತಮ್ಮ ಸೇನಾ ಪಡೆ, ಶಸ್ತಾ್ರಸ್ತ್ರಗಳ ನಿಯೋಜನೆ ಮಾಡಿದ್ದನ್ನು ಉಪಗ್ರಹ ಚಿತ್ರಗಳು ಸೆರೆಹಿಡಿದಿವೆ.

2020ರ ಆಗಸ್‌ನಲ್ಲ ಚೀನಾ ಸೇನೆ ಪೂರ್ವ ಲಡಾಖ್‌ನಲ್ಲಿ ಅತಿಕ್ರಮಣಕ್ಕೆ ಯತ್ನಿಸಿತ್ತು. ಇದನ್ನು ತಡೆದ ಭಾರತ ಚೀನಾಕ್ಕೆ ತಿರುಗೇಟು ನೀಡಿತ್ತು. ಬಳಿಕ ಪರಿಸ್ಥಿತಿ ದಿನೇ ದಿನೇ ವಿಷಮವಾಗಿ ಉಭಯ ದೇಶಗಳು ಕ್ರಮವಾಗಿ ಲಕ್ಷದಷ್ಟುಸೈನಿಕರು, ಭಾರೀ ಪ್ರಮಾಣದ ಶಸ್ತಾ್ರಸ್ತ್ರಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದವು. ಹೀಗಾಗಿ ಯುದ್ಧದ ಸ್ಥಿತಿ ನಿರ್ಮಾಣವಾಗಿತ್ತು.

click me!