ಚೀನಾ ಗಡಿ ತಂಟೆ ಬೆನ್ನಲ್ಲೇ ನಾಳೆ ಲಡಾಖ್‌ಗೆ ರಾಜನಾಥ್ ಸಿಂಗ್ ಭೇಟಿ!

Published : Jun 26, 2021, 04:08 PM IST
ಚೀನಾ ಗಡಿ ತಂಟೆ ಬೆನ್ನಲ್ಲೇ ನಾಳೆ ಲಡಾಖ್‌ಗೆ ರಾಜನಾಥ್ ಸಿಂಗ್ ಭೇಟಿ!

ಸಾರಾಂಶ

ಭಾರತದ ಗಡಿಯಲ್ಲಿ ಚೀನಾ ತಂಟೆ ಮತ್ತೆ ಆರಂಭ ಮಹತ್ವದ ಬೆಳವಣಿಗೆ ನಡುವೆ ಲಡಾಖ್‌ಗೆ ರಾಜನಾಥ್ ಸಿಂಗ್ ಭೇಟಿ ತೀವ್ರ ಕುತೂಹಲ ಮೂಡಿಸಿದ ರಕ್ಷಣಾ ಸಚಿವರ ಭೇಟಿ

ನವದೆಹಲಿ(ಜೂ.26):  ಸತತ ಮಾತುಕತೆ, ತಕ್ಕ ತಿರುಗೇಟುಗಳಿಂದ ಕಳೆದ ವರ್ಷ ಚೀನಾ ಆರಂಭಿಸಿದ ಗಡಿ ತಂಟೆ ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಚೀನಾ ಗಡಿಯಲ್ಲಿ ರಸ್ತೆ ಅಭಿವೃದ್ಧಿ, ಯುದ್ದವಿಮಾನಗಳ ಹಾರಾಟ ಸೇರಿದಂತೆ ಹಲವು ಕಸರತ್ತು ನಡೆಸುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಾಳೆ(ಜೂ.27) ಲಡಾಖ್‌ಗೆ ಭೇಟಿ ನೀಡಲಿದ್ದಾರೆ.

ಲಡಾಖ್‌ ಗಡಿ ಬಳಿ ಮತ್ತೆ ಚೀನಾ ತಾಲೀಮು ತಂಟೆ: 22 ಸಮರ ವಿಮಾನಗಳಿಂದ ಶಕ್ತಿ ಪ್ರದರ್ಶನ!

BRO ಮೂಲಸಕೌರ್ಯ ಅಭಿವೃದ್ಧಿ ಪರಿಶೀಲನೆ ಸೇರಿದಂತೆ ಕೆಲ ಮಹತ್ವದ ಕಾರಣಕ್ಕಾಗಿ ರಾಜನಾಥ್ ಸಿಂಗ್ ಲಡಾಖ್ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಕಾರ್ಯಕ್ರಮದ ನಡುವೆ ರಾಜನಾಥನ್ ಸಿಂಗ್ LAC(ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಭೇಟಿ ನೀಡುವ ಸಾಧ್ಯತೆಯನ್ನು ಕೇಂದ್ರ ರಕ್ಷಣಾ ಇಲಾಖೆ ತಳ್ಳಿ ಹಾಕಿಲ್ಲ.

ಕಳೆದ ವರ್ಷ ಮಾತುಕತೆ ಬಳಿಕವೂ ಗೋಗ್ರಾ ಹಾಗೂ ಹಾಟ್ ಸ್ಪ್ರಿಂಗ್ ವಲಯದಲ್ಲಿನ ಚೀನಾ ಸೇನಾ ಹಿಂದೆ ಸರಿಯದೆ ಕಿರಿಕ್ ಮಾಡಿತ್ತು. ಗೋಗ್ರಾ ಹಾಗೂ ಹಾಟ್‌ಸ್ಪ್ರಿಂಗ್‌ನಿಂದ ಚೀನಾ ಸೇನೆ ಹಿಂದೆ ಸರಿಯದೆ ಮೊಂಡುತನ ಮಾಡಿತ್ತು. ಈಗಲೂ ಇದೇ ವಲಯದಲ್ಲಿ ಚೀನಾ ತಂಟೆ ನಡೆಸುತ್ತಲೇ ಇದೆ.  

ಪೂರ್ವ ಲಡಾಖ್‌ನಲ್ಲಿ ಭಾರತದ ಮೇಲೆ ಚೀನಾ ದಾಳಿ: 2020ರ ದೊಡ್ಡ ತಪ್ಪು!

ಪರಿಸ್ಥಿತಿ ಕೈಮೀರುತ್ತಿದ್ದಂತೆ, ಚೀನಾ ವಿದೇಶಾಂಗ ಸಚಿವಾಲಯ ಈ ಸಂದರ್ಭಕ್ಕೆ ಭಾರತವೇ ಕಾರಣ ಎಂದಿತ್ತು. ಭಾರತ ಗಡಿಯುದ್ದಕ್ಕೂ ನಿಯಮ ಉಲ್ಲಂಘಿಸುತ್ತಿದೆ. ಶಾಂತಿ ಕಾಪಾಡುವ ಬದ್ಧತೆಯನ್ನು ತಳ್ಳಿ ಹಾಕಿದೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿತ್ತು. ಈ ಬೆಳವಣಿಗೆ ಬಳಿಕ ಇದೀಗ ರಾಜನಾಥ್ ಸಿಂಗ್ ಲಡಾಖ್‌ಗೆ ತೆರಳುತ್ತಿರುವುದು ಮಹತ್ವ ಪಡೆದುಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್