
ನವದೆಹಲಿ(ಮೇ.09) ಭಾರತ ಹಾಗೂ ಪಾಕಿಸ್ತಾನ ನಡುವಿನ ದಾಳಿ ಪ್ರತಿ ದಾಳಿ ಜೋರಾಗಿದೆ. ಪಾಕಿಸ್ತಾನ ಮಿಸೈಲ್ ದಾಳಿ, ಡ್ರೋನ್ ದಾಳಿ ನಡೆಸುತ್ತಿದೆ. ಇತ್ತ ಗಡಿಯಲ್ಲಿ ನಾಗರೀಕರ ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಆಧರೆ ಭಾರತೀಯ ಸೇನೆ ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ತಿರುಗೇಟು ನೀಡಿದೆ. ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸುತ್ತಾ ಬಂದಿದೆ. ಇದರ ನಡುವೆ ಪಾಕಿಸ್ತಾನ ಎರಡು ಫೈಟರ್ ಜೆಟ್‌ನ್ನು ಭಾರತ ಹೊಡೆದುರುಳಿಸಿದೆ. ಇಷ್ಟೇ ಅಲ್ಲ ಪಾಕಿಸ್ತಾನ ಫೈಟರ್ ಜೆಟ್‌ನ ಇಬ್ಬರು ಪೈಲೆಟ್‌ಗಳನ್ನು ಜೀವಂತವಾಗಿ ಭಾರತ ಸೆರೆ ಹಿಡಿದಿದೆ.
ಭಾರತೀಯ ಸೇನಾ ವಶದಲ್ಲಿ ಇಬ್ಬರು ಪಾಕ್ ಪೈಲೆಟ್
ರಾಜಸ್ಥಾನದ ಜೈಸಲ್ಮೇರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಬಳಿ ಪಾಕಿಸ್ತಾನದ ಎಫ್ 16 ಹಾಗೂ ಎಫ್ 17 ಫೈಟರ್ ಜೆಟ್‌ನ್ನು ಭಾರತದ ಹೊಡೆದುರುಳಿಸಿದೆ. ಈ ವೇಳೆ ಫೈಟರ್ ಜೆಟ್‌ನಿಂದ ಹೊರಕ್ಕೆ ಜಿಗಿದ ಪಾಕಿಸ್ತಾನ ಪೈಲೆಟ್ ಭಾರತದ ಭೂ ಪ್ರದೇಶದಲ್ಲಿ ಲ್ಯಾಂಡ್ ಆಗಿದ್ದಾರೆ. ಪಾಕಿಸ್ತಾನದ ಪೈಲೆಟ್ ಲ್ಯಾಂಡ್ ಆಗುತ್ತಿದ್ದಂತೆ ಭಾರತೀಯ ಸೇನೆ ವಶಕ್ಕೆ ಪಡೆದಿದೆ. ರಾಜಸ್ಥಾನದ ಜೆೈಸಲ್ಮೇರ್‌ನಲ್ಲಿ ಮೊದಲುು ಪಾಕಿಸ್ತಾನ ಪೈಲೆಟ್ ವಶಕ್ಕೆ ಪಡೆದಿದ್ದರೆ, ಇತ್ತ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಬಳಿಕ ಮತ್ತೊಬ್ಬ ಪೈಲೆಟ್‌ನ್ನು ಜೀವಂತವಾಗಿ ಸೆರೆ ಹಿಡಿದಿದೆ.
1971ರ ಯುದ್ಧ ಬಳಿಕ ಭಾರತ ನೌಕಾಪಡೆಯಿಂದ ಪಾಕಿಸ್ತಾನ ಕರಾಚಿ ಬಂದರು ಮೇಲೆ ದಾಳಿ
ಭಾರತೀಯ ಏರ್ ಢಿಪೆನ್ಸ್ ಸಿಸ್ಟಮ್‌ನಿಂದ ದಾಳಿ
ಭಾರತದ ಮೇಲೆ ದಾಳಿ ಮಾಡುತ್ತಾ ಬಂದ ಪಾಕಿಸ್ತಾನ ಫೈಟರ್ ಜೆಟ್ ಭಾರತದ ಗಡಿ ಪ್ರವೇಶಿಸುತ್ತಿದ್ದಂತೆ ಏರ್ ಡಿಫೆನ್ಸ್ ಸಿಸ್ಟಮ್ ಪ್ರತಿ ದಾಳಿ ನಡೆಸಿದೆ. ಆಟೋಮ್ಯಾಟಿಕ್ ಡಿಫೆನ್ಸ್ ಸಿಸ್ಟಮ್, ಪಾಕಿಸ್ತಾನ ಸೇನಾ ವಿಮಾನದ ಮೇಲೆ ದಾಳಿ ಮಾಡಿ ಹೊಡೆದುರಳಿಸಿದೆ. ಅತ್ಯಾಧುನಿಕ ಏರ್ ಡಿಫೆನ್ಸ್ ಸಿಸ್ಟಮ್‌ನಿಂದ ಪಾಕಿಸ್ತಾನ ಫೈಟರ್ ಜೆಟ್ ಮಾತ್ರವಲ್ಲ, 8ಕ್ಕೂ ಹೆಚ್ಚೂ ಮಿಸೈಲ್ ದಾಳಿಯನ್ನು ಏರ್ ಢಿಪೆನ್ಸ್ ಮೂಲಕ ವಿಫಲಗೊಳಿಸಲಾಗಿದೆ. ಇದೇ ವೇಳೆ ಪಾಕಿಸ್ತಾನದ ಡ್ರೋನ್ ದಾಳಿಯನ್ನು ಹೊಡೆದುರುಳಿಸಲಾಗಿದೆ.
ಗಡಿಯಲ್ಲಿ ಪಾಕಿಸ್ತಾನದಿಂದ ನಿರಂತರ ದಾಳಿ
ಪೆಹಲ್ಗಾಂ ಘಟನೆ ನಡೆದ ಬಳಿಕ ಪಾಕಿಸ್ತಾನ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಬಂದಿದೆ. ಆದರೆ ಭಾರತ ಪ್ರತಿ ದಾಳಿ ನಡೆಸಿತ್ತು. ಆದರೆ ಆಪರೇಶನ್ ಸಿಂದೂರ್ ಬಳಿಕ ಪರಿಸ್ಥಿತಿ ಬದಲಾಗಿದೆ. ಪಾಕಿಸ್ತಾನದ ಪ್ರತಿ ದಾಳಿ ತಡೆಯಲು ಭಾರತ ಸತತ ದಾಳಿ ನಡೆಸುತ್ತಿದೆ. ಪಾಕಿಸ್ತಾನದ ಗಡಿಯಲ್ಲಿ ದಾಳಿ ಮಾಡಿದೆ. ಪಾಕಿಸ್ತಾನ ನಾಗರೀಕರ ಗುರಿಯಾಗಿಸಿ ದಾಳಿ ಮಾಡಿದೆ.
Breaking ಪಾಕಿಸ್ತಾನ ಪ್ರಧಾನಿ ಷರೀಫ್, ಸೇನಾ ಮುಖ್ಯಸ್ಥ ಆಸಿಮ್ ನಿವಾಸದ ಬಳಿ ಸ್ಫೋಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ