ಭಾರತದಲ್ಲಿ ಮಹಿಳಾ ಉಗ್ರ ದಾಳಿಗೆ ಮಲೇಷ್ಯಾ ಸಂಘಟನೆ ಸಂಚು!

By Suvarna NewsFirst Published Dec 14, 2020, 8:42 AM IST
Highlights

ಭಾರತದಲ್ಲಿ ಮಹಿಳಾ ಉಗ್ರ ದಾಳಿಗೆ ಮಲೇಷ್ಯಾ ಸಂಘಟನೆ ಸಂಚು| ದಿಲ್ಲಿ, ಅಯೋಧ್ಯೆ, ಬೋಧಗಯಾ, ಶ್ರೀನಗರ ಉಗ್ರರ ಟಾರ್ಗೆಟ್‌| ಮಹಿಳಾ ತಂಡದ ನೇತೃತ್ವದಲ್ಲಿ ದೇಶದೆಲ್ಲೆಡೆ ದಾಳಿಗೆ ಉಗ್ರರ ಸಂಚು| ವಿದೇಶಿ ಉಗ್ರರಿಗೆ ಭಾರತದಲ್ಲಿ ಪಿಎಫ್‌ನಿಂದ ನೆರವು ಸಾಧ್ಯತೆ| ಸಂಚಲ್ಲಿ ಝಾಕಿರ್‌ ನಾಯ್‌್ಕ, ರೋಹಿಂಗ್ಯ ಮುಖಂಡ ನಾಸಿರ್‌ ಭಾಗಿ

ನವದೆಹಲಿ(ಡಿ.14): ದಿಲ್ಲಿ, ಅಯೋಧ್ಯೆ, ಬೋಧಗಯಾ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ಕೃತ್ಯ ಕೈಗೊಳ್ಳಲು ಮಲೇಷ್ಯಾ ಮೂಲದ ಸಂಘಟನೆಯೊಂದು ಸಂಚು ರೂಪಿಸಿರುವ ಆತಂಕಕಾರಿ ವಿಷಯ ಬಯಲಾಗಿದೆ. ಈ ಕುರಿತು 2 ಲಕ್ಷ ಡಾಲರ್‌ ಹಣಕಾಸು ವ್ಯವಹಾರ ನಡೆದಿರುವುದನ್ನು ಭಾರತದ ಗುಪ್ತಚರ ಸಂಸ್ಥೆಯಾದ ‘ರೀಸಚ್‌ರ್‍ ಆ್ಯಂಡ್‌ ಅನಾಲಿಸಿಸ್‌ ವಿಂಗ್‌’ (ರಾ) ಪತ್ತೆ ಹಚ್ಚಿದೆ.

ಈ ವ್ಯವಹಾರಗಳ ಮೂಲವನ್ನು ಹುಡುಕಿದಾಗ, ಅವು ಕೌಲಾಲಂಪುರ ಮೂಲದ ರೋಹಿಂಗ್ಯ ಮುಸ್ಲಿಂ ಮುಖಂಡ ಮೊಹಮ್ಮದ್‌ ನಾಸಿರ್‌ ಹಾಗೂ ಭಾರತದಿಂದ ಪರಾರಿಯಾಗಿ ಮಲೇಷ್ಯಾಗೆ ಹೋಗಿ ನೆಲೆಸಿರುವ ವಿವಾದಿತ ಇಸ್ಲಾಮಿಕ್‌ ಧರ್ಮಬೋಧಕ ಝಾಕಿರ್‌ ನಾಯ್‌್ಕಗೆ ಸಂಬಂಧಿಸಿದ ವಹಿವಾಟುಗಳು ಎಂದು ಗೊತ್ತಾಗಿದೆ. ಉಗ್ರ ಸಂಘಟನೆಯ 2 ಲಕ್ಷ ಡಾಲರ್‌ ಹಣದಲ್ಲಿ ಒಂದು ಭಾಗವು ಚೆನ್ನೈ ಮೂಲದ ಹವಾಲಾ ಡೀಲರ್‌ ಒಬ್ಬನಿಗೆ ಬಂದಿದೆ. ಇನ್ನೊಂದು ಆತಂಕಕಾರಿ ವಿಷಯವೆಂದರೆ ಈ ಬಾರಿ ದಾಳಿಗೆ ಮಹಿಳೆಯೊಬ್ಬರಿಗೆ ನೇತೃತ್ವದ ನೀಡಿರುವುದು. ಭಾರತದಲ್ಲಿ ಉಗ್ರ ದಾಳಿಗೆ ಮಹಿಳೆಯೊಬ್ಬರ ನೇತೃತ್ವ ನೀಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಮಹಿಳೆಗೆ ದಾಳಿ ಹೊಣೆ!

ದಾಳಿಯ ಹೊಣೆ ವಹಿಸಲಾಗಿರುವ ಮಹಿಳೆಯೊಬ್ಬರಿಗೆ ಮಲೇಷ್ಯಾದ ಉಗ್ರ ಸಂಘಟನೆಯು ಮ್ಯಾನ್ಮಾರ್‌ನಲ್ಲಿ ಭಯೋತ್ಪಾದನೆ ತರಬೇತಿ ನೀಡಿದೆ. ಈಕೆಯ ನೇತೃತ್ವದಲ್ಲೇ ಗುಂಪು ರಚಿಸಿ ಭಾರತದಲ್ಲಿ ದಾಳಿಗೆ ಸಂಚು ರೂಪಿಸಲಾಗಿದೆ. ಬಾಂಗ್ಲಾದೇಶ ಅಥವಾ ನೇಪಾಳ ಗಡಿಯ ಮೂಲಕ ಡಿಸೆಂಬರ್‌ ಮಧ್ಯಭಾಗದಲ್ಲಿ ಉಗ್ರರ ಗುಂಪು ಭಾರತದಲ್ಲಿ ನುಸುಳಲು ಯೋಜನೆ ಹಾಕಿಕೊಂಡಿದೆ. ಮುಂದಿನ ಕೆಲವು ವಾರಗಳಲ್ಲಿ ಈ ಗುಂಪು ಭಾರತದಲ್ಲಿ ದಾಳಿ ನಡೆಸಬಹುದು ಎಂಬ ಮಾಹಿತಿ ‘ರಾ’ಗೆ ಲಭಿಸಿದೆ.

ದಾಳಿಗೆ ಪಿಎಫ್‌ಐ ನೆರವು

ಈ ದಾಳಿಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ), ಬೆಂಬಲ ದೊರಕಬಹುದು ಎಂದು ಗುಪ್ತಚರ ದಳವು ರಾಜ್ಯಗಳಿಗೆ ಮಾಹಿತಿ ನೀಡಿದೆ. ಈ ಮಾಹಿತಿಯ ಹಿನ್ನೆಲೆಯಲ್ಲಿ ದಿಲ್ಲಿ, ಹರ್ಯಾಣ, ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಟ್ಟೆಚ್ಚರ ಸಾರಲಾಗಿದೆ

click me!