ಮಲೇಷ್ಯಾಗೆ 18 ತೇಜಸ್‌ ವಿಮಾನ ಮಾರಾಟಕ್ಕೆ ಭಾರತ ಆಫರ್‌

Published : Aug 06, 2022, 07:53 PM IST
ಮಲೇಷ್ಯಾಗೆ 18 ತೇಜಸ್‌ ವಿಮಾನ ಮಾರಾಟಕ್ಕೆ ಭಾರತ ಆಫರ್‌

ಸಾರಾಂಶ

ಭಾರತವು ಮಲೇಷ್ಯಾಕ್ಕೆ 18 ದೇಶೀಯ ಲಘು ಯುದ್ಧ ವಿಮಾನ ‘ತೇಜಸ್‌’ ಅನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ನವದೆಹಲಿ (ಆ.6): ಭಾರತವು ಮಲೇಷ್ಯಾಕ್ಕೆ 18 ದೇಶೀಯ ಲಘು ಯುದ್ಧ ವಿಮಾನ ‘ತೇಜಸ್‌’ ಅನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ಹೇಳಿದೆ. ಅರ್ಜೆಂಟಿನಾ, ಆಸ್ಪ್ರೇಲಿಯಾ, ಈಜಿಪ್ಟ್,  ಅಮೆರಿಕ, ಇಂಡೋನೇಷ್ಯಾ ಹಾಗೂ ಫಿಲಿಪ್ಪಿನ್ಸ್‌ ದೇಶಗಳು ಕೂಡಾ ಏಕ ಎಂಜಿನ್‌ ಜೆಟ್‌ನಲ್ಲಿ ಆಸಕ್ತಿ ತೋರಿಸಿವೆ ಎಂದು ಸಚಿವಾಲಯ ಹೇಳಿದೆ. ವಿದೇಶಿ ರಕ್ಷಣಾ ಸಾಧನಗಳ ಮೇಲೆ ಭಾರತದ ಅವಲಂಬನೆ ಕಡಿಮೆ ಮಾಡಲು ಪ್ರೋತ್ಸಾಹಿಸಿದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ, ಈಗ ದೇಶೀಯ ಜೆಟ್‌ಗಳ ಮಾರಾಟಕ್ಕೂ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ. ಕೇಂದ್ರ ಸರ್ಕಾರವು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ಗೆ 83 ದೇಶೀಯ ಲಘು ಯುದ್ಧ ವಿಮಾನ ‘ತೇಜಸ್‌’ ಉತ್ಪಾದನೆ ಮಾಡಲು 47.6 ಸಾವಿರ ಕೋಟಿ ರು.ಗಳ ಕಾಂಟ್ರಾಕ್ಟ್ ನೀಡಿತ್ತು. 2023ರಿಂದ ಈ ಯುದ್ಧವಿಮಾನದ ಪೂರೈಕೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ರಾಯಲ್‌ ಮಲೇಷ್ಯನ್‌ ವಾಯುಪಡೆ 18 ಜೆಟ್‌ಗಳ ಖರೀದಿಗಾಗಿ ಸಲ್ಲಿಸಿದ ಮನವಿಯನ್ನು ಹಿಂದೂಸ್ತಾನ ಏರೋನಾಟಿಕ್ಸ್‌ ಅಂಗೀಕರಿಸಿದೆ ಎಂದು ರಕ್ಷಣಾ ಸಚಿವಾಲಯ ಸಂಸತ್ತಿಗೆ ಹೇಳಿಕೆ ನೀಡಿದೆ.

ಮಲೇಷ್ಯಾ ಹೊರತುಪಡಿಸಿ  ಎಲ್‌ಸಿಎ ವಿಮಾನಗಳಲ್ಲಿ ಆಸಕ್ತಿ ತೋರಿದ ಇತರ ದೇಶಗಳೆಂದರೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಈಜಿಪ್ಟ್, ಯುಎಸ್‌ಎ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಎಂದು ರಾಜ್ಯ ರಕ್ಷಣಾ ಸಚಿವ ಅಜಯ್ ಭಟ್ ಮಾಹಿತಿ ನೀಡಿದ್ದಾರೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ತೇಜಸ್, ಏಕ ಎಂಜಿನ್ ಹೊಂದಿರುವ ಬಹುಪಾತ್ರ ಯುದ್ಧ ವಿಮಾನವಾಗಿದ್ದು, ಕಠಿಣ ವಾಯು ಪರಿಸರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ, ಭಾರತೀಯ ವಾಯುಪಡೆಗೆ 83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗಾಗಿ ರಕ್ಷಣಾ ಸಚಿವಾಲಯವು ಎಚ್‌ಎಎಲ್‌ನೊಂದಿಗೆ 48,000 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಂಡಿತು. ರಷ್ಯಾದ MiG-29 ಯುದ್ಧ ವಿಮಾನಗಳ ಹಳೆಯ ಫ್ಲೀಟ್ ಅನ್ನು ಬದಲಿಸಲು ಮಲೇಷ್ಯಾ ವಿಮಾನವನ್ನು ಸಂಗ್ರಹಿಸುತ್ತಿದೆ.  ಮಲೇಷ್ಯಾ ಖರೀದಿಸಲು ನೋಡುತ್ತಿರುವ ವಿಮಾನಗಳ ಸಂಖ್ಯೆ ಎಷ್ಟೆಂಬುದು ಸ್ಪಷ್ಟವಾಗಿಲ್ಲ.

ಕಳೆದ ತಿಂಗಳು, ಎಚ್‌ಎಎಲ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್ ಮಾಧವನ್ ಅವರು ತೇಜಸ್ ವಿಮಾನವು ಮಲೇಷ್ಯಾಕ್ಕೆ ಅಗ್ರ ಆಯ್ಕೆಯಾಗಿ ಹೊರಹೊಮ್ಮಿದೆ ಎಂದು ಹೇಳಿದ್ದರು.  

ಸರ್ಕಾರವು ಸ್ಟೆಲ್ತ್ ಫೈಟರ್ ಜೆಟ್ ತಯಾರಿಸಲು ಪ್ರಸ್ತಾಪಿಸುತ್ತದೆಯೇ ಎಂಬ ಪ್ರತ್ಯೇಕ ಪ್ರಶ್ನೆಗೆ,  ಅಜಯ್ ಭಟ್  ಅವರು "ಹೌದು" ಎಂದು ಹೇಳಿದರು ಮತ್ತು "ಸ್ವಾಯತ್ತ ಹಾರುವ ವಿಂಗ್ ತಂತ್ರಜ್ಞಾನ ಪ್ರದರ್ಶನಕಾರ" ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಹೇಳಿದರು.

ಗಲ್ವಾನ್ ಘರ್ಷೆಣೆಯಲ್ಲಿ ಭಾರತಕ್ಕೆ ನೆರವಾಗಿದ್ದು 1948ರಲ್ಲಿ ನಿರ್ಮಾಣವಾದ ಏರ್‌ಸ್ಟ್ರಿಪ್!

ವಾಯುಸೀಮೆ ಉಲ್ಲಂಘನೆ ತಡೆಗೆ ಭಾರತ ಚೀನಾ ಮಾತುಕತೆ
ಲೇಹ್‌: ಲಡಾಖ್‌ ಪ್ರಾಂತ್ಯದಲ್ಲಿ ಭಾರತೀಯ ವಾಯುಸೀಮೆಯೊಳಗೆ ಯಾವುದೇ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಭಾರತೀಯ ವಾಯುಪಡೆ ಹಿರಿಯ ಅಧಿಕಾರಿಗಳು ಶುಕ್ರವಾರ ಚೀನಾದೊಂದಿಗೆ ಸೇನಾ ಮಾತುಕತೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಚೀನಾದ ಯುದ್ಧವಿಮಾನ ವಾಸ್ತವಿಕ ಗಡಿ ರೇಖೆ ವ್ಯಾಪ್ತಿಯ 10 ಕಿ.ಮೀ. ಅಂತರದಲ್ಲಿ ಪ್ರಯಾಣ ಮಾಡಿದ ಬೆನ್ನಲ್ಲೇ ವಾಯುಪಡೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಒಪ್ಪಂದದ ಪ್ರಕಾರ 10 ಕಿ.ಮೀ. ವ್ಯಾಪ್ತಿಯಲ್ಲಿ ವಿಮಾನ ಹಾರಿಸುವಂತಿಲ್ಲ. ಇಂತಹ ಘಟನೆಗಳ ಮರುಕಳಿಸುವಿಕೆಯನ್ನು ತಡೆಗಟ್ಟಲು ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲ ತಿಂಗಳುಗಳಿಂದ ಚೀನಾ ಟಿಬೆಟ್‌ ಪ್ರಾಂತ್ಯದಲ್ಲಿ ವ್ಯಾಪಕ ಮಿಲಿಟರಿ ತಾಲೀಮು ನಡೆಸುತ್ತಿದೆ. ಅಲ್ಲದೇ ಟಿಬೆಟ್‌ನಲ್ಲಿ ಚೀನಾ ತನ್ನ ವಾಯುನೆಲೆಯನ್ನು ಸ್ಥಾಪಿಸಿದೆ.

ಬೆಂಗಳೂರು ಏರ್‌ಪೋರ್ಟ್‌ಗೆ 5 ಹೆಚ್ಚುವರಿ ಮೆಮು ರೈಲು ಸಂಚಾರ

ಇದರೊಂದಿಗೆ ಅಮೆರಿಕದ ಸ್ಪೀಕರ್‌ ನಾನ್ಸಿ ಪೆಲೋಸಿ ತೈವಾನ್‌ ಭೇಟಿ ಹಿನ್ನೆಲೆಯಲ್ಲಿ ಚೀನಾ ತೈವಾನ್‌ ಗಡಿಯಲ್ಲಿ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಿಂದ ದಾಳಿ ನಡೆಸುತ್ತಿದೆ. ಈ ಉದ್ವಿಗ್ನ ಪರಿಸ್ಥಿತಿಯಲ್ಲಿ ಭಾರತ ಚೀನಾದೊಂದಿಗೆ ಮಾತುಕತೆಗೆ ಮುಂದಾಗಿದೆ.

ಜೂ. 25ರಂದು ಚೀನಾದ ಯುದ್ಧ ವಿಮಾನ ಪೂರ್ವ ಲಡಾಖ್‌ನ ವಾಸ್ತವಿಕ ಗಡಿ ರೇಖೆಯೊಳಗೆ ಮುಂಜಾನೆ ಸುಮಾರು 4 ಗಂಟೆಗೆ ಹಾರಾಟ ನಡೆಸಿತ್ತು. ಯುದ್ಧವಿಮಾನ ಮಿರಾಜ್‌ 2000 ಹಾಗೂ ಮಿಗ್‌-29 ಅನ್ನು ಸನ್ನದ್ಧ ಸ್ಥಿತಿಯಲ್ಲಿ ಲಡಾಖ್‌ನಲ್ಲಿ ಇರಿಸುವ ಮೂಲಕ ವಾಯುಪಡೆ ಇದಕ್ಕೆ ಪ್ರತಿಕ್ರಿಯೆ ನೀಡಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!