Maharashtra, Jharkhand election results: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ, ಹಲವು ರಾಜ್ಯಗಳಲ್ಲಿ ಉಪಚುನಾವಣೆಗಳ ಮತಎಣಿಕೆ ಇಂದು ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ, ಮಹಾಯುತಿ ಮೈತ್ರಿಕೂಟವು ಮಹಾ ವಿಕಾಸ್ ಅಘಾಡಿ ವಿರುದ್ಧ ಸ್ಪರ್ಧಿಸಿದ್ದರೆ, ಜಾರ್ಖಂಡ್‌ನಲ್ಲಿ, JMM ಮತ್ತು ಅದರ ಮಿತ್ರಪಕ್ಷಗಳು NDA ವಿರುದ್ಧ ಮುಖಾಮುಖಿಯಾಗಿವೆ.
ನವದೆಹಲಿ (ನ.23): ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮಹಾರಾಷ್ಟ್ರದಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಲೋಕಸಭಾ ಚುನಾವಣೆಯಲ್ಲಿ ಇದೇ ರಾಜ್ಯದಲ್ಲಿ ಎದುರಿಸಿದ್ದ ಹೀನಾಯ ಪ್ರದರ್ಶನವನ್ನು ಎನ್‌ಡಿಎ ಹಿಮ್ಮೆಟ್ಟಿಸಿದ್ದು ಆರಂಭಿಕ ಟ್ರೆಂಡ್‌ಲ್ಲಿ ಗೋಚರವಾಗಿದೆ. ಆದರೆ, ಜಾರ್ಖಂಡ್‌ನಲ್ಲಿ ಆಡಳಿತಾರೂಢ ಜೆಎಂಎಂ ಹಾಗೂ ಕಾಂಗ್ರೆಸ್ ಮೈತ್ರಿಕೂಟವನ್ನು ಅಲುಗಾಡಿಸಲು ಎನ್‌ಡಿಎ ಸಾಧ್ಯವಾಗಿಲ್ಲ. ಜಾರ್ಖಂಡ್ ರಾಜ್ಯದಲ್ಲಿ ಎನ್‌ಡಿಎ ಹಿನ್ನಡೆ ಕಂಡಿರುವುದು ಟ್ರೆಂಡ್‌ನಲ್ಲಿ ಗೋಚರವಾಗಿದೆ.
ಮಹಾರಾಷ್ಟ್ರದಲ್ಲಿ, ಬಿಜೆಪಿ, ಅಜಿತ್ ಪವಾರ್ ಅವರ ಎನ್‌ಸಿಪಿ ಬಣ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ ಒಳಗೊಂಡಿರುವ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಇಲ್ಲಿಯವರೆಗೂ 233 ಸ್ಥಾನ ಪಡೆಯುವ ಹಾದಿಯಲ್ಲಿದೆ. ಈಗಾಗಲೇ 189 ಸ್ಥಾನಗಳಲ್ಲಿ ಗೆದ್ದಿದ್ದು, 44 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 288 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) 49 ಸ್ಥಾನ ಪಡೆಯುವ ಸಾಧ್ಯತೆ ಇದೆ. 39ರಲ್ಲಿ ಗೆಲುವು ಕಂಡಿದ್ದರೆ, 10ರಲ್ಲಿ ಮುನ್ನಡೆಯಲ್ಲಿದೆ. ಇಲ್ಲಿ ಬಹುಮತ ಸಾಧಿಸಲು 145 ಇಲ್ಲಿ ಮ್ಯಾಜಿಕ್ ನಂಬರ್ ಆಗಿದೆ.
ಜಾರ್ಖಂಡ್‌ನಲ್ಲಿ ಹೇಮಂತ್ ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಐಎನ್‌ಡಿಐಎ 55 ಕ್ಷೇತ್ರ ಗೆಲ್ಲುವ ಹಾದಿಯಲ್ಲಿದೆ 53ರಲ್ಲಿ ಗೆಲುವು ಕಂಡಿದ್ದರೆ, 2 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಎನ್‌ಡಿಎ 25 ಕ್ಷೇತ್ರ ಗೆಲ್ಲುವ ಹಾದಿಯಲ್ಲಿದ್ದು, 22ರಲ್ಲಿ ಗೆಲುವು ಕಂಡಿದ್ದರೆ, 3ರಲ್ಲಿ ಮುನ್ನಡೆಯಲ್ಲಿದೆ.
ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟ ಜಾರ್ಖಂಡ್ ಅನ್ನು ಉಳಿಸಿಕೊಳ್ಳಲು ಮತ್ತು ಮಹಾರಾಷ್ಟ್ರದಲ್ಲಿ ಮಹಾಯುತಿಯನ್ನು ಸೋಲಿಸುವ ನಿರೀಕ್ಷೆಯಲ್ಲಿತ್ತು. ಈ ನಡುವೆ, ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸಾಧನೆಯಿಂದ ಉತ್ತೇಜಿತವಾಗಿರುವ ಬಿಜೆಪಿ, ಎರಡೂ ರಾಜ್ಯಗಳಲ್ಲಿ ನಿರ್ಣಾಯಕ ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಚನ್ನಪಟ್ಟಣ ಫಲಿತಾಂಶದ ಕುತೂಹಲ: ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ರದ್ದು
ಇದರೊಂದಿಗೆ 13 ರಾಜ್ಯಗಳಾದ್ಯಂತ 48 ವಿಧಾನಸಭಾ ಉಪಚುನಾವಣೆಗಳು ಮತ್ತು ಎರಡು ಪ್ರಮುಖ ಸಂಸದೀಯ ಕ್ಷೇತ್ರಗಳಾದ ಮಹಾರಾಷ್ಟ್ರದ ನಾಂದೇಡ್ ಹಾಗೂ ಕೇರಳದ ವಯನಾಡ್ ಕ್ಷೇತ್ರದ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ವಯನಾಡ್ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಯುದ್ಧವಾಗಿದೆ, ಈ ಹಿಂದೆ ಲೋಕಸಭೆಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರ ಸಹೋದರ ರಾಹುಲ್ ಗಾಂಧಿ ಅವರು ಸ್ಥಾನವನ್ನು ತೆರವು ಮಾಡಿದ ನಂತರ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು ಸುಲಭ ಗೆಲುವಿನ ಹಾದಿಯಲ್ಲಿದ್ದಾರೆ.
ವಯನಾಡ್ ಉಪಚುನಾವಣೆ ಫಲಿತಾಂಶ: ಇಂದಿರಾ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಭಾರೀ ಮುನ್ನಡೆ!
ವಿಧಾನಸಭಾ ಚುನಾವಣೆಗಳ ಆರಂಭಿಕ ಟ್ರೆಂಡ್
ಮಹಾರಾಷ್ಟ್ರ; ಬಹುಮತ 145
ಒಕ್ಕೂಟ | ಲೀಡ್ | ಗೆಲುವು | ಒಟ್ಟು |
ಎನ್‌ಡಿಎ | 47 | 186 | 233 |
ಐಎನ್‌ಡಿಎಐ | 10 | 39 | 49 |
ಇತರೇ | 1 | 5 | 6 |
ಜಾರ್ಖಂಡ್; ಬಹುಮತ 42
ಒಕ್ಕೂಟ | ಲೀಡ್ | ಗೆಲುವು | ಒಟ್ಟು |
ಐಎನ್‌ಡಿಐಎ | 2 | 53 | 55 |
ಎನ್‌ಡಿಎ | 3 | 22 | 25 |
ಇತರೇ | 0 | 1 | 1 |