ಇಂಡಿಯಾ ಮೈತ್ರಿ ಒಕ್ಕೂಟದ ಮೊದಲ ಚುನಾವಣಾ ರ‍್ಯಾಲಿ ಘೋಷಣೆ, ಭೋಪಾಲ್‌ನಿಂದ ಆರಂಭ!

Published : Sep 13, 2023, 08:07 PM ISTUpdated : Sep 14, 2023, 11:28 AM IST
ಇಂಡಿಯಾ ಮೈತ್ರಿ ಒಕ್ಕೂಟದ ಮೊದಲ ಚುನಾವಣಾ ರ‍್ಯಾಲಿ ಘೋಷಣೆ, ಭೋಪಾಲ್‌ನಿಂದ ಆರಂಭ!

ಸಾರಾಂಶ

ಇಂಡಿಯಾ ಮೈತ್ರಿ ಒಕ್ಕೂಟ ಇಂದು ನಡೆಸಿದ ಮಹತ್ವದ ಸಭೆಯಲ್ಲಿ ಹಲವು ವಿಚಾರ ಚರ್ಚೆ ನಡೆಸಿದೆ. ಈ ವೇಳೆ ಇಂಡಿಯಾ ಒಕ್ಕೂಟದ ಮೊದಲ ಚುನಾವಣಾ ರ‍್ಯಾಲಿ ಘೋಷಿಸಿದೆ.  

ನವದೆಹಲಿ(ಸೆ.13) ಲೋಕಸಭಾ ಚುನಾವಣೆಗೆ ತಯಾರಿ ಚುರುಕುಗೊಳಿಸಿರುವ ಇಂಡಿಯಾ ಮೈತ್ರಿ ಒಕ್ಕೂಟ ಇದೀಗ ಮೊದಲ ಚುನಾವಣಾ ರ‍್ಯಾಲಿ ಘೋಷಿಸಿದೆ. ಶರತ್  ಪವಾರ್ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ನಿರ್ಧಾರ ಘೋಷಿಸಲಾಗಿದೆ. ಭೋಪಾಲ್‌ನಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದ ಮೊದಲ ಚುನಾವಣಾ ರ‍್ಯಾಲಿ ಆಯೋಜಿಸಲಾಗಿದೆ.  ಅಕ್ಟೋಬರ್ ಮೊದಲ ವಾರದಲ್ಲೇ ಮೈತ್ರಿ ಪಕ್ಷಗಳು ರ‍್ಯಾಲಿ ನಡೆಸಲಿದೆ. 

ಇಂಡಿಯಾ ಒಕ್ಕೂಟದ ಸಮನ್ವಯ ಸಮಿತಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಯಾ ರಾಜ್ಯದಲ್ಲಿ ಸೀಟು ಹಂಚಿಕೆ ಕುರಿತು ಚರ್ಚಿಸಿ ನಿರ್ಧಾರ ತೆಗದುಕೊಳ್ಳಲು ಸಮಿತಿ ರಚಿಸಲಾಗಿದೆ. ಪಂಜಾಬ್ ಸೇರಿ ಆರರಿಂದ ಏಳು ರಾಜ್ಯಗಳಲ್ಲಿ ರಾಜ್ಯ ಸಮಿತಿಗಳ‌ ರಚನೆ ಮಾಡಲಾಗಿದೆ. ಈ ಸಮಿತಿಗಳು ಸೀಟು ಹಂಚಿಕೆ ಮಾಡಲಾಗಿದೆ.  ಸಮಿತಿ ವರದಿ ಆಧರಿಸಿ ಅಂತಿಮವಾಗಿ ಇಂಡಿಯಾ ಒಕ್ಕೂಟ ನಾಯಕರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.  

ಸನಾತನ ಧರ್ಮ ಅಂತ್ಯಗೊಳಿಸುವುದೇ ಇಂಡಿಯಾ ಮೈತ್ರಿ ಒಕ್ಕೂಟದ ಉದ್ದೇಶ, ಬಿಜೆಪಿ ವಾಗ್ದಾಳಿ!

ಶರದ್ ಪವಾರ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.   ಮುಂಬೈನಲ್ಲಿ ನಡೆದ ಮೈತ್ರಿಕೂಟದ ಹಿಂದಿನ ಸಭೆಯ ವೇಳೆ 14 ಸದಸ್ಯರ ಈ ಸಮನ್ವಯ ಸಮಿತಿ ರಚಿಸಲಾಗಿತ್ತು. ಈ ವೇಳೆ ಸೆ.30ರೊಳಗೆ ನಾವು ಸೀಟು ಹಂಚಿಕೆ ವಿಷಯದಲ್ಲಿ ಬಹುತೇಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಮೈತ್ರಿಕೂಟದ ನಾಯಕರು ಹೇಳಿದ್ದರು.

ಅದರ ನಡುವೆಯೇ ಇತ್ತೀಚೆಗೆ 6 ರಾಜ್ಯಗಳ 7 ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ 4 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು, ಬಿಜೆಪಿಗೆ 3 ಸೀಟು ಒಲಿದಿತ್ತು. ಇದು ದೇಶದ ಅಭಿಪ್ರಾಯ ತಮ್ಮ ಕಡೆಗೆ ಇದೆ ಎಂಬುದರ ಸೂಚಕ ಎಂಬುದು ಇಂಡಿಯಾ ಮೈತ್ರಿಕೂಟದ ನಾಯಕರ ಅಭಿಮತ. ಈ ಸಂಭ್ರಮದಲ್ಲೇ ಇದೀಗ ಮಹತ್ವದ ಸಮನ್ವಯ ಸಮಿತಿ ಸಭೆ ನಿಗದಿಯಾಗಿದೆ.

ಸನಾತನ ಧರ್ಮ ನಿರ್ಮೂಲನೆಗೆಂದೇ I.N.D.I.A ಬಣ ರಚಿಸಲಾಗಿದೆ: ಮತ್ತೊಬ್ಬ ಡಿಎಂಕೆ ಸಚಿವನ ವಿಡಿಯೋ ವೈರಲ್‌

ಇಂಡಿಯಾ ಒಕ್ಕೂಟವು ವಿವಿಧ ಭಾಷೆಗಳಲ್ಲಿ ‘ಜುಡೇಗಾ ಭಾರತ್‌, ಜೀತೇಗಾ ಇಂಡಿಯಾ’ ಘೋಷಣೆಯಡಿ ಪ್ರಚಾರ ರಾರ‍ಯಲಿಗಳನ್ನು ನಡೆಸಲಿದೆ. ಕೇಂದ್ರದಲ್ಲಿರುವ ಸರ್ವಾಧಿಕಾರಿ ಸರ್ಕಾರದ ಅಂತಿಮ ದಿನಗಳು ಶುರುವಾಗಿವೆ. ಒಂದು ದೇಶ ಒಂದು ಚುನಾವಣೆಗೆ ಸಮಿತಿ ರಚಿಸುವುದರೊಂದಿಗೆ ಕೇಂದ್ರ ಸರ್ಕಾರದ ‘ದೇಶದ ಗಮನ ಬೇರೆಡೆ ಸೆಳೆಯುವ’ ತಂತ್ರಗಾರಿಕೆ ಶುರುವಾಗಿದೆ. ಆದರೆ ಜನರಿಗೆ ಇನ್ನಷ್ಟುಮೋಸ ಮಾಡಲು ಸಾಧ್ಯವಿಲ್ಲ. ಇಂಡಿಯಾ ಒಕ್ಕೂಟದ ಶಕ್ತಿ ನೋಡಿ ಮೋದಿ ಸರ್ಕಾರಕ್ಕೆ ಭಯ ಆರಂಭವಾಗಿದೆ. ಹೀಗಾಗಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ದ್ವೇಷದ ರಾಜಕಾರಣ ಮಾಡಿಯೇ ಮಾಡುತ್ತಾರೆ. ಇನ್ನಷ್ಟುಕೇಸು ಹಾಕಿಸಿಕೊಳ್ಳಲು ಹಾಗೂ ಜೈಲಿಗೆ ಹೋಗಲು ನಾವು ಸಿದ್ಧರಿರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್