
ನವದೆಹಲಿ(ಏ.06): ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. 475 ಕ್ಷೇತ್ರಗಳಿಗೆ ಒಟ್ಟು 1,53,538 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನವಾಗಿದೆ. ಇದರಲ್ಲಿ ಅಸ್ಸಾಂನಲ್ಲಿ ನಡೆದ 3ನೇ ಹಾಗೂ ಅಂತಿಮ ಹಂತದಲ್ಲಿ ಶೇಕಡಾ 82.33 ರಷ್ಟು ಮತದಾನವಾಗಿದೆ. ಈ ಮೂಲಕ ಗರಿಷ್ಠ ಮತದಾನದ ದಾಖಲೆ ಬರೆದಿದೆ.
'ಒಡೆದಾಳುವ ಮಾತಿನಿಂದ ಮುಸ್ಲಿಂ ಮತಗಳು ನಿಮ್ಮಿಂದ ದೂರವಾಗಿವೆ'
ಪಂಚ ರಾಜ್ಯಗಳಲ್ಲಿ ಇಂದು(ಏ.06) ನಡೆದ ಮತದಾನದ ವಿವರ:
ಅಸ್ಸಾಂ =81.66%
ಕೇರಳ = 69.94%
ತಮಿಳುನಾಡು = 65.19%
ಪಶ್ಚಿಮ ಬಂಗಾಳ =77.68%
ಪುದುಚೇರಿ = 77.90%
ಕೇರಳ, ತಮಿಳುನಾಡು ಹಾಗೂ ಪುದುಚೇರಿ ಒಂದೇ ಹಂತದಲ್ಲಿ ಮತದಾನ ಮುಕ್ತಾಯಗೊಂಡಿದೆ. ಅಸ್ಸಾಂ 3ನೇ ಹಂತದೊಂದಿಗೆ ಅಂತ್ಯಗೊಂಡಿದೆ. ಆದರೆ ಪಶ್ಚಿಮ ಬಂಗಾಳ 3ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಇನ್ನು 5 ಹಂತದ ಮತದಾನ ಬಾಕಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ