
ಅಹಮ್ಮದಾಬಾದ್(ಮಾ.12): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ಮತ್ತೆ ಮುಂದುವರಿದಿದೆ. ಇದೀಗ ಟಿ20 ಸರಣಿಯಲ್ಲಿ ನಾಯಕ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಷ್ಟೇ ಅಲ್ಲ ಇದಕ್ಕಾಗಿ ಕೊಹ್ಲಿ ಟ್ರೋಲ್ ಆಗಿದ್ದಾರೆ.
INDvsENG 1ನೇ ಟಿ20: ಇಂಗ್ಲೆಂಡ್‌ಗೆ ಸುಲಭ ಗುರಿ ನೀಡಿದ ಟೀಂ ಇಂಡಿಯಾ!
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ಡಕ್ ಸಂಪಾದಿಸಿದ್ದಾರೆ. ಹೀಗಾಗಿ ಸರಣಿ ಮುಗಿದ ಬಳಿಕ ಡಕ್ ಮೃಗಾಲಯ ಆರಂಭಿಸಲು ಸಾಧ್ಯವಿದೆ ಎಂದು ಟ್ರೋಲ್ ಮಾಡಿದ್ದಾರೆ. ಟ್ರೋಲಿಗರು ಕೊಹ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ಟೀಕಿಸಿದ್ದಾರೆ.
5 ಎಸೆತ ಎದುರಿಸಿದ ವಿರಾಟ್ ಕೊಹ್ಲಿ ಒಂದು ರನ್ ಸಿಡಿಸದೇ ಔಟಾಗಿದ್ದಾರೆ. ಕೊಹ್ಲಿ ಸೇರಿದಂತೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ವೈಫಲ್ಯದಿಂದ ಟೀಂ ಇಂಡಿಯಾ ಕೇವಲ 124 ರನ್ ಸಿಡಿಸಿ ಸುಲಭ ಗುರಿ ನೀಡಿತು. ಶ್ರೇಯಸ್ ಅಯ್ಯರ್ ಹೊರತು ಪಡಿಸಿದರೆ ಇನ್ಯಾವ ಬ್ಯಾಟ್ಸ್‌ಮನ್ ಕೂಡ ಟೀಂ ಇಂಡಿಯಾ ಪರ ಅಬ್ಬರಿಸಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ