ಕರ್ನಾಟಕ ಸೇರಿ ಚೆಟ್ಟಿನಾಡ್‌ ಗ್ರೂಪ್‌ನ 60 ಕಡೆ ದಾಳಿ: 7 ಕೋಟಿ ನಗದು ವಶ!

By Suvarna NewsFirst Published Dec 10, 2020, 8:44 AM IST
Highlights

ಕರ್ನಾಟಕ ಸೇರಿ ಚೆಟ್ಟಿನಾಡ್‌ ಗ್ರೂಪ್‌ನ 60 ಕಡೆ ದಾಳಿ: 7 ಕೋಟಿ ನಗದು ವಶ| ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಹಾಗೂ ಆಂಧ್ರಪ್ರದೇಶದಲ್ಲಿರುವ 60 ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ 

ನವದೆಹಲಿ(ಡಿ.10): ತಮಿಳುನಾಡು ಮೂಲದ ಚೆಟ್ಟಿನಾಡ್‌ ಸಮೂಹ ಸಂಸ್ಥೆಗಳ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಹಾಗೂ ಆಂಧ್ರಪ್ರದೇಶದಲ್ಲಿರುವ 60 ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ ಮಾಡಲಾಗಿದ್ದು, ಸುಮಾರು ಏಳು ಕೋಟಿ ನಗದು ವಶಕ್ಕೆ ಪಡೆಯಲಾಗಿದೆ.

ನೂರು ವರ್ಷಗಳಷ್ಟುಹಳೆಯದಾಗಿರುವ ಈ ಸಂಸ್ಥೆಯ ಮೇಲೆ ತೆರಿಗೆ ವಂಚನೆ ಆರೋಪ ಕೇಳಿ ಬಂದಿದ್ದು, ಹೀಗಾಗಿ ಐಟಿ ಇಲಾಖೆ ದಾಳಿ ಮಾಡಿದೆ. ಪ್ರಕರಣ ಸಂಬಂಧ ಈವರೆಗೆ ಯಾವುದೇ ಬಂಧನವಾಗಿಲ್ಲ. ಸಿಮೆಂಟ್‌, ವಿದ್ಯುತ್‌,ಗಣಿ, ಹೋಟೆಲ್‌ ಸೇರಿ ಹಲವು ವ್ಯವಹಾರಗಳಲ್ಲಿ ಚೆಟ್ಟಿನಾಡ್‌ ತೊಡಗಿಸಿಕೊಂಡಿದೆ.

ಇದೇ ವರ್ಷದ ಆಗಸ್ಟ್‌ನಲ್ಲಿ ಚೆಟ್ಟಿನಾಡ್‌ ಬಿಲ್ಡರ್ಸ್‌ ಅನ್ನು ಜಿಂದಾಲ್‌ ನೇತೃತ್ವದ ಜೆಎಸ್‌ಡಬ್ಲ್ಯೂ ಇನ್‌ಫ್ರಾಸ್ಟ್ರಕ್ಚರ್‌ಗೆ ಮಾರಾಟ ಮಾಡಿತ್ತು. ಕರ್ನಾಟಕದ ಬೆಂಗಳೂರು, ಮಂಗಳೂರು, ವಿಜಯಪುರ, ತುಮಕೂರು ಹೊಸದುರ್ಗದಲ್ಲಿ ಚೆಟ್ಟಿನಾಡ್‌ ಸಮೂಹದ ಹಲವು ಕೈಗಾರಿಕೆಗಳಿವೆ. ಈ ಸಮೂಹದ ಅಧ್ಯಕ್ಷರಾಗಿದ್ದ ಎಂ.ಎ.ಎಂ ರಾಮಸ್ವಾಮಿ 2004ರಿಂದ 2010ರ ವರೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

click me!