ಮೋದಿ ಮೇಲೆ ಕೆಸಿಆರ್‌ಗೆ ದಿಢೀರ್ ಪ್ರೀತಿ| ನೂತನ ಸಂಸತ್ ಭವನ ಶಂಕುಸ್ಥಾಪನೆಗೆ ಮೆಚ್ಚುಗೆ
ನವದೆಹಲಿ(ಡಿ.10): ಇತ್ತೀಚೆಗೆ ನಡೆದ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನಿರಂತರ ಟೀಕಾಪ್ರಹಾರ ನಡೆಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಗುರುವಾರ ಶಂಕುಸ್ಥಾಪನೆ ನೆರವೇರಲಿರುವ ಹೊಸ ಸಂಸತ್ ಭವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದೊಂದು ರಾಷ್ಟ್ರೀಯ ಮಹತ್ವದ ಯೋಜನೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಡಿ.10ಕ್ಕೆ ಹೊಸ ಸಂಸತ್ ಭವನದ ಶಿಲಾನ್ಯಾಸ, ಇದು ಆತ್ಮನಿರ್ಭರ್ ಭಾರತದ ಧ್ಯೋತಕ ಎಂದ ಸ್ಪೀಕರ್!
undefined
ಕ್ರಿಯಾಶೀಲ, ವಿಶ್ವಾಸಯುತ ಹಾಗೂ ಬಲಿಷ್ಠ ಭಾರತಕ್ಕೆ ಹೊಸ ಸಂಸತ್ತು ಒಳಗೊಂಡ ಸೆಂಟ್ರಲ್ ವಿಸ್ತಾ ಯೋಜನೆ ಪ್ರತಿಷ್ಠೆ, ರಾಷ್ಟ್ರೀಯ ಹೆಮ್ಮೆ ಮತ್ತು ಆತ್ಮ ಗೌರವದ ಸಂಕೇತ. ಈ ಯೋಜನೆ ಬೇಗ ಪೂರ್ಣಗೊಳ್ಳಲಿ ಎಂದು ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ. ಸೆಂಟ್ರಲ್ ವಿಸ್ತಾ ಬಹುಕಾಲದ ಬೇಡಿಕೆಯಾಗಿತ್ತು. ದೆಹಲಿಯಲ್ಲಿ ಹಾಲಿ ಇರುವ ಸರ್ಕಾರಿ ಮೂಲಸೌಕರ್ಯ ಸಾಕಾಗುತ್ತಿಲ್ಲ. ವಸಾಹುತು ಹಿನ್ನೆಲೆಯೊಂದಿಗೆ ಅದು ಬೆರೆತಿದೆ ಎಂದು ಹೇಳಿದ್ದಾರೆ.
ಭಾರತ ಬಂದ್‌ಗೆ ಭಾರೀ ಬೆಂಬಲ: ರೈತರ ಹೋರಾಟಕ್ಕೆ 15 ವಿಪಕ್ಷಗಳ ಸಾಥ್!
ಹೈದರಾಬಾದ್‌ನಲ್ಲಿ 150 ವರ್ಷ ಹಳೆಯ ಸೆಕ್ರೆಟರಿಯೇಟ್ ಕಟ್ಟಡವನ್ನು ಕೆಡವಿ, 600 ಕೋಟಿ ರು. ವೆಚ್ಚದಲ್ಲಿ 6 ಅಂತಸ್ತಿನ ಹೊಸ ಕಟ್ಟಡವೊಂದನ್ನು ಕೆಸಿಆರ್ ವಾಸ್ತು ಪ್ರಕಾರ ನಿರ್ಮಾಣ ಮಾಡಿಸುತ್ತಿದ್ದಾರೆ. ಅವರ ಅದೃಷ್ಟಸಂಖ್ಯೆ 6 ಎಂಬ ಕಾರಣಕ್ಕಾಗಿಯೇ 6 ಮಹಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕೊರೋನಾ ಕಾಲದಲ್ಲಿ ಈ ರೀತಿ ದುಂದು ವೆಚ್ಚ ಮಾಡುತ್ತಿರುವುದು ಎಷ್ಟುಸರಿ ಎಂದು ಬಿಜೆಪಿ ವಾಗ್ದಾಳಿ ನಡೆಸಿತ್ತು. ಆದರೆ ಕೆಸಿಆರ್ ಅವರು ಹೊಸ ಸಂಸತ್ ನಿರ್ಮಾಣ ಬೆಂಬಲಿಸುವ ಮೂಲಕ ಬಿಜೆಪಿ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಇತ್ತೀಚಿನ ಹೈದ್ರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೀಡಿದ ಶಾಕ್ ಕೂಡಾ ಇಂಥದ್ದೊಂದು ಬೆಳವಣಿಗೆಗೆ ಕಾರಣ ಎನ್ನಲಾಗಿದೆ.