ಛತ್ತೀಸಗಢ: ಬ್ರಾಹ್ಮಣರ ಅವಹೇಳನ ಕೇಸಲ್ಲಿ ಸಿಎಂ ತಂದೆ ಬಂಧನ

Kannadaprabha News   | Asianet News
Published : Sep 08, 2021, 10:59 AM ISTUpdated : Sep 08, 2021, 11:33 AM IST
ಛತ್ತೀಸಗಢ:  ಬ್ರಾಹ್ಮಣರ ಅವಹೇಳನ ಕೇಸಲ್ಲಿ  ಸಿಎಂ ತಂದೆ ಬಂಧನ

ಸಾರಾಂಶ

ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ ಪ್ರಕರಣ ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರ ತಂದೆ ನಂದಕುಮಾರ್‌ ಬಾಘೇಲ್‌ ಬಂಧನ

ರಾಯ್‌ಪುರ್‌ (ಸೆ.08):  ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ ಪ್ರಕರಣದಲ್ಲಿ ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರ ತಂದೆ ನಂದಕುಮಾರ್‌ ಬಾಘೇಲ್‌ ಅವರನ್ನು ರಾಯ್‌ಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಳಿಕ ಅವರನ್ನು ಕೋರ್ಟ್‌ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ನಂದಕುಮಾರ್‌ ಬ್ರಾಹ್ಮಣರನ್ನು ಕುರಿತು ‘ಅವರು ಹೊರಗಿನಿಂದ ಬಂದವರು ಅವರು ಶುದ್ಧೀಕರಣಗೊಳ್ಳಬೇಕು’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ‘ನಂದಕುಮಾರ್‌ ಅವರು ಸಮಾಜದಲ್ಲಿ ದ್ವೇಷ ಹರಡುತ್ತಿದ್ದಾರೆ’ ಎಂದು ಆರೋಪಿಸಿ ಛತ್ತೀಸ್‌ಗಢ ಬ್ರಾಹ್ಮಣ ಸಮಿತಿ ಡಿಡಿ ನಗರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ರಾಯ್‌ಪುರ ಪೊಲೀಸರು ದೆಹಲಿಯಲ್ಲಿ ಅವರನ್ನು ಬಂಧಿಸಿದರು.

ಹೆಂಡತಿ ಭಾಷಣ ಕೇಳಲಾರದೆ ಪೊಲೀಸ್ ಚೌಕಿಗೆ ಬೆಂಕಿ ಇಟ್ಟು ಬೇಕಂತಲೇ ಅರೆಸ್ಟ್ ಆದ!

ತಂದೆಯ ಬಂಧನಕ್ಕೆ ಪ್ರತಿಕ್ರಿಯಿಸಿರುವ ಭೂಪೇಶ್‌ ಬಾಘೇಲ್‌ ‘ಮಗನಾಗಿ ಅವರ ಬಗ್ಗೆ ಗೌರವವಿದೆ ಆದರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಸಮಾಜದಲ್ಲಿ ಅಶಾಂತಿ ಮೂಡಿಸುವವರನ್ನು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರೆಂಡ್ ಆದ ಬಿಜೆಪಿ ಸಂಸದನ ಹೊಸವರ್ಷ ಶುಭಾಶಯ,ಗ್ರೆಗೋರಿಯನ್ ಕ್ಯಾಲೆಂಡರ್ ತೆರೆದಿಟ್ಟ ತ್ರಿವೇದಿ
ವಿಂಜೋ ಕಚೇರಿಗಳಲ್ಲಿ ಇಡಿ ಶೋಧ, ₹190 ಕೋಟಿ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್, ಎಫ್‌ಡಿಆರ್‌, ಮ್ಯೂಚುವಲ್ ಫಂಡ್‌ ಫ್ರೀಜ್!