2024ರ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆ: ಉ.ಪ್ರ. ಸರ್ಕಾರ

By Anusha KbFirst Published May 25, 2023, 8:31 AM IST
Highlights

ಮುಂದಿನ ವರ್ಷ ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಭಕ್ತರಿಗೆ ತೆರೆಯಲಿದ್ದು ಈ ಹಿನ್ನೆಲೆಯಲ್ಲಿ ಅಯೋಧ್ಯೆ ನಗರದಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳ ವಿಸ್ತರಣೆ ಸೇರಿದಂತೆ ಮೂಲ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ಲಖನೌ: ಮುಂದಿನ ವರ್ಷ ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಭಕ್ತರಿಗೆ ತೆರೆಯಲಿದ್ದು ಈ ಹಿನ್ನೆಲೆಯಲ್ಲಿ ಅಯೋಧ್ಯೆ ನಗರದಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳ ವಿಸ್ತರಣೆ ಸೇರಿದಂತೆ ಮೂಲ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ಸಹದತ್‌ಗಂಜ್‌ ನಿಂದ ನಯಾ ಘಾಟ್‌ ವರೆಗಿನ 13 ಕಿ.ಮೀ ರಸ್ತೆಯ ಕಾರಿಡಾರ್‌ ‘ರಾಮ ಪಥ’ ಕಾಮಗಾರಿಯೂ ಪ್ರಗತಿಯಲ್ಲಿದ್ದು ಉಳಿದಂತೆ ‘ಭಕ್ತಿ ಪಥ’ (ಹನುಮಾನ್‌ ಗರ್ಹಿ ದೇವಾಲಯಕ್ಕೆ 14 ಮೀ. ಹಾದಿ) ಮತ್ತು ‘ರಾಮಜಾನಕಿ ಪಥ’ (ಶ್ರೀರಾಮ ಜನ್ಮಭೂಮಿಗೆ 30 ಮೀ. ಮಾರ್ಗ) ಕಾರಿಡಾರ್‌ ರೂಪುರೇಷೆಯು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪಥಗಳು ಭಕ್ತಾದಿಗಳ ಸಂಚಾರಕ್ಕೆ ಅನುಕೂಲವಾಗಲಿವೆ. ರಾಮಮಂದಿರ ತೆರೆಯುವ ಸಮಾರಂಭಕ್ಕೆ ಆಗಮಿಸುವಂತೆ ಜನರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಹ್ವಾನಿಸಿದ್ದಾರೆ. ಅಲ್ಲದೇ ಪ್ರಗತಿ ಕೆಲಸಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಸರ್ಕಾರದ ಪ್ರಕಟಣೆ ಹೇಳಿದೆ.

Latest Videos

ಅಯೋಧ್ಯೆ ರಾಮ ಮಂದಿರದ ಹಿಂದಿನ ಸೂತ್ರಧಾರರು ಇವರೇ: ಮಂದಿರ ನಿರ್ಮಾಣದ ಹಿಂದಿನ ಕತೆ ಹೀಗಿದೆ..

ಭವ್ಯರೂಪ ತಾಳುತ್ತಿದೆ ಅಯೋಧ್ಯೆ ರಾಮ ಮಂದಿರದ ಗರ್ಭಗೃಹ; ಇಲ್ಲಿದೆ ನೋಡಿ ಫಸ್ಟ್ ಲುಕ್

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರೂಪುಗೊಳ್ಳುತ್ತಿರುವ ರಾಮಮಂದಿರದ ತಾಜಾ ಚಿತ್ರವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಂಚಿಕೊಂಡಿದ್ದಾರೆ. ಅದರಂತೆ ಗರ್ಭಗೃಹದ ಕಾಮಗಾರಿಯ ಝಲಕ್ ಕಾಣಬಹುದಾಗಿದ್ದು, ಬಿಳಿಯ ಅಮೃತಶಿಲೆಯ ಗೋಡೆಗಳ ತುಂಬಾ ಮನ ಸೆಳೆವ ಕಲಾರಚನೆಗಳನ್ನು ಕಾಣಬಹುದಾಗಿದೆ. ದೇವಾಲಯ ಈಗ ಭವ್ಯ ರೂಪ ಪಡೆಯುತ್ತಿದೆ.

ಗರ್ಭ ಗೃಹದ ಫಸ್ಟ್ ಲುಕ್
 ದೇವಾಲಯದ ಟ್ರಸ್ಟ್ ಸದಸ್ಯ ಮಹಂತ್ ಕಮಲ್ ನಯನ್ ದಾಸ್ ಅವರು ಮುಂದಿನ ವರ್ಷ (2024) ಜನವರಿ 14 ಮತ್ತು 15 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಭಕ್ತರಿಗಾಗಿ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ. ಈ ಮಧ್ಯೆ ಅಯೋಧ್ಯೆಗೆ ಆಧ್ಯಾತ್ಮಿಕ ನಗರ ಎಂಬ ಗುರುತನ್ನು ನೀಡಲು ಸರ್ಕಾರ ಮುಂದಾಗಿದೆ. ದೇವಾಲಯದ ಪಟ್ಟಣದ ಪ್ರಮುಖ ಬೀದಿಗಳಿಗೆ ವಿನ್ಯಾಸಗಳು, ಕಲಾಕೃತಿಗಳು ಮತ್ತು ಪರಿಕಲ್ಪನೆಗಳನ್ನು ಒದಗಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳಿಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ಸ್ಪರ್ಧೆಯನ್ನು ಏರ್ಪಡಿಸಿದೆ.

ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಈಗ ಯಾವ ಹಂತದಲ್ಲಿದೆ ಇಲ್ನೋಡಿ..

ದೇವಾಲಯದ ಟ್ರಸ್ಟ್ ಪ್ರಕಾರ ಅಂತಿಮ ವಿನ್ಯಾಸವು ದೇವಾಲಯದ ಸ್ಥಳದಲ್ಲಿ ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವಾಲಯಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ.

click me!