ದೇಶದ ಅತಿದೊಡ್ಡ ಏರ್‌ಪೋರ್ಟ್‌ನ ಹಂತ-1 ಲೋಕಾರ್ಪಣೆ

Kannadaprabha News   | Kannada Prabha
Published : Mar 29, 2026, 08:33 AM IST
noida international airport cargo hub

ಸಾರಾಂಶ

ದೇಶದ ಅತಿ ದೊಡ್ಡ ಏರ್‌ಪೋರ್ಟ್‌ ಎಂಬ ಖ್ಯಾತಿಗೆ ಭವಿಷ್ಯದಲ್ಲಿ ಭಾಜನವಾಗಲಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ1 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೋಯ್ಡಾ ಸನಿಹದ ಜೆವಾರ್‌ನಲ್ಲಿ ಉದ್ಘಾಟಿಸಿದರು.

ನೋಯ್ಡಾ (ಉ.ಪ್ರ.): ದೇಶದ ಅತಿ ದೊಡ್ಡ ಏರ್‌ಪೋರ್ಟ್‌ ಎಂಬ ಖ್ಯಾತಿಗೆ ಭವಿಷ್ಯದಲ್ಲಿ ಭಾಜನವಾಗಲಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ1 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೋಯ್ಡಾ ಸನಿಹದ ಜೆವಾರ್‌ನಲ್ಲಿ ಉದ್ಘಾಟಿಸಿದರು.

ಈ ವಿಮಾನ ನಿಲ್ದಾಣವು ದಿಲ್ಲಿಯ ಗಡಿಯಲ್ಲೇ ಇರುವ ಕಾರಣ ಹಾಗೂ ನೋಯ್ಡಾ ಕೂಡ ದೊಡ್ಡ ಔದ್ಯಮಿಕ ನಗರವಾಗಿರುವ ಕಾರಣ, ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವ ನಿರೀಕ್ಷೆ ಇದೆ.

ವಿಮಾನ ನಿಲ್ದಾಣದ ಮೊದಲ ಹಂತವನ್ನು ಅಂದಾಜು 11,200 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದನ್ನು ಬಹು ಮಾದರಿ ಸಾರಿಗೆ ಕೇಂದ್ರವಾಗಿ ವಿನ್ಯಾಸಗೊಳಿಸಲಾಗಿದ್ದು, ರಸ್ತೆ, ರೈಲು, ಮೆಟ್ರೋ ಮತ್ತು ಪ್ರಾದೇಶಿಕ ಸಾರಿಗೆ ವ್ಯವಸ್ಥೆಗಳ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಆರಂಭಿಕ ಹಂತದಲ್ಲಿ ಈ ವಿಮಾನ ನಿಲ್ದಾಣವು ವರ್ಷಕ್ಕೆ 1.2 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ನಿರೀಕ್ಷೆಯಿದ್ದು, ಭವಿಷ್ಯದಲ್ಲಿ ಈ ಸಾಮರ್ಥ್ಯವನ್ನು ವಾರ್ಷಿಕ 7 ಕೋಟಿ ಪ್ರಯಾಣಿಕರಿಗೆ ಹೆಚ್ಚಿಸಲಾಗುವುದು.

ನಿಲ್ದಾಣವು ವಾರ್ಷಿಕವಾಗಿ 2.5 ಲಕ್ಷ ಮೆಟ್ರಿಕ್ ಟನ್‌ ಸರಕು ನಿರ್ವಹಿಸಬಲ್ಲ ಸರಕು ಕೇಂದ್ರ ಒಳಗೊಂಡಿದೆ. ಇದನ್ನು ಸುಮಾರು 18 ಲಕ್ಷ ಮೆಟ್ರಿಕ್ ಟನ್‌ಗಳಿಗೆ ವಿಸ್ತರಿಸಬಹುದು.

ಏರ್‌ಪೋರ್ಟ್‌ ದಿಲ್ಲಿ ಮೇಲಿನ ಹೊರೆಯಷ್ಟೇ ಅಲ್ಲ ಆಗ್ರಾ, ಮಥುರಾ, ಅಲಿಗಢ, ಗಾಜಿಯಾಬಾದ್, ಮೇರಠ್‌, ಇಟಾವಾ, ಬುಲಂದ್‌ಶಹರ್, ಫರೀದಾಬಾದ್ ಜನರಿಗೂ ಪ್ರಯೋಜನ ನೀಡಲಿದೆ.

ಬೆಂಗಳೂರು ಸೇರಿ 6 ನಗರಗಳಿಗೆ ಸಂಪರ್ಕ

ಸದ್ಯಕ್ಕೆ ಮೊದಲ ಹಂತದಲ್ಲಿ ನೋಯ್ಡಾ ಏರ್‌ಪೋರ್ಟ್‌ನಿಂದ ಬೆಂಗಳೂರು, ಹೈದರಾಬಾದ್‌, ಮುಂಬೈ, ಚೆನ್ನೈ, ಲಖನೌ ಹಾಗೂ ಡೆಹ್ರಾಡೂನ್‌ಗೆ ವಿಮಾನ ಸಂಚಾರ ಆರಂಭವಾಗಲಿದೆ.

ಭವಿಷ್ಯದಲ್ಲಿ ದೇಶದ ಅತಿ ದೊಡ್ಡ ಏರ್‌ಪೋರ್ಟ್‌

ಸದ್ಯಕ್ಕೆ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 5,500 ಎಕರೆ ವ್ಯಾಪ್ತಿಯಲ್ಲಿದ್ದು, ದೇಶದ ದೊಡ್ಡ ವಿಮಾನ ನಿಲ್ದಾಣ ಎನ್ನಿಸಿಕೊಂಡಿದೆ. ನೋಯ್ಡಾ ಏರ್‌ಪೋರ್ಟ್‌ 7,200 ಎಕರೆಯಲ್ಲಿ ನಿರ್ಮಾಣ ಆಗುತ್ತಿದೆ. ಆದರೆ ಸದ್ಯ ಹಂತ-1 ಮಾತ್ರ ಉದ್ಘಾಟನೆ ಆಗಿರುವ ಕಾರಣ ಪೂರ್ಣ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಮುಂದಿನ ಹಂತಗಳ ನಿರ್ಮಾಣ ಪೂರ್ಣಗೊಂಡ ನಂತರ ದೇಶದ ಅತಿದೊಡ್ಡ ವಿಮಾನ ನಿಲ್ದಾಣ ಆಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಲ್ಲಿ ಯುದ್ಧ ಜಾಗತಿಕ ಬಿಕ್ಕಟ್ಟು. ಇದನ್ನು ನಾವು ತಾಳ್ಮೆ, ಒಗ್ಗಟ್ಟಿನಿಂದ ಎದುರಿಸಬೇಕು, ರಾಜಕೀಯಕ್ಕಾಗಿ ಟೀಕೆ ಬೇಡ: ವಿಪಕ್ಷಕ್ಕೆ ಮೋದಿ ಮನವಿ
India Latest News Live: ಕಾಲ್ತುಳಿತದ ಬಳಿಕ ಮೊದಲ ಅಗ್ನಿಪರೀಕ್ಷೆ ಗೆದ್ದ ಕೆಎಸ್‌ಸಿಎ! ಮೊದಲ ಪಂದ್ಯ ಯಶಸ್ವಿ ಆಯೋಜನೆ