ಭೀಮ್‌ ಆರ್ಮಿ ಚೀಫ್‌ ಚಂದ್ರಶೇಖರ್‌ ಆಜಾದ್‌ ಮೇಲೆ ಗುಂಡಿನ ದಾಳಿ!

Published : Jun 28, 2023, 06:34 PM ISTUpdated : Jun 28, 2023, 10:09 PM IST
ಭೀಮ್‌ ಆರ್ಮಿ ಚೀಫ್‌ ಚಂದ್ರಶೇಖರ್‌ ಆಜಾದ್‌ ಮೇಲೆ ಗುಂಡಿನ ದಾಳಿ!

ಸಾರಾಂಶ

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಅಪರಿಚಿತ ವ್ಯಕ್ತಿಗಳು ಬುಧವಾರ ಗುಂಡು ಹಾರಿಸಿದ್ದಾರೆ.  

ನವದೆಹಲಿ (ಜೂ. 28): ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬುಧವಾರ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆಜಾದ್‌ನ ಬೆಂಗಾವಲು ಪಡೆಯ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ದಾಳಿಕೋರರು ಹರಿಯಾಣದ ಪರವಾನಗಿ ಫಲಕದೊಂದಿಗೆ ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿದರು ಮತ್ತು ಚಂದ್ರಶೇಖರ್ ಆಜಾದ್ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. “ಚಂದ್ರಶೇಖರ್ ಆಜಾದ್ ಅವರ ಬೆಂಗಾವಲು ಪಡೆಗೆ ಕಾರಿನಲ್ಲಿ ಬಂದ ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದರು. ಒಂದು ಗುಂಡು ಅವರಿಗೆ ತಗುಲಿದೆ.. ಅವರು ಆರೋಗ್ಯವಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಎಸ್‌ಪಿ ಡಾ ವಿಪಿನ್ ತಾಡಾ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ದಾಳಿಯ ವೇಳೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಟೊಯೊಟಾ ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವಾಹನದ ಸೀಟ್ ಮತ್ತು ಡೋರ್ ಎರಡರಲ್ಲೂ ಬುಲೆಟ್ ಗುರುತುಗಳಿವೆ. ದಾಳಿಕೋರರು ಹಿಂದಿನಿಂದ ಕಾರನ್ನು ಸಮೀಪಿಸಿ ಅನೇಕ ಸುತ್ತು ಗುಂಡು ಹಾರಿಸಿದ್ದಾರೆ. ದಾಳಿಯ ಸಮಯದಲ್ಲಿ ಕನಿಷ್ಠ ನಾಲ್ಕು ಗುಂಡಿನ ಶಬ್ದಗಳು ಕೇಳಿಬಂದವು ಎಂದು ಸಮೀಪದಲ್ಲಿದ್ದ ವ್ಯಕ್ತಿಗಳು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳು, ಮಾರುತಿ ಸ್ವಿಫ್ಟ್‌ ಡಿಜೈರ್‌ ಕಾರಿನಲ್ಲಿ ಬಂದಿದ್ದರು. ಅವರ ಕಾರಿಗೆ ಹರಿಯಾಣ ರಾಜ್ಯದ ನಂಬರ್‌ ಪ್ಲೇಟ್‌ ಇದ್ದವು. ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಒಂದು ಗುಂಡು ಮಾತ್ರವೇ ಚಂದ್ರಶೇಖರ್‌ ಆಜಾದ್‌ಗೆ ತಾಗಿದೆ. ಅವರ ಬೆನ್ನಿನ ಭಾಗಕ್ಕೆ ಸಣ್ಣ ಗಾಯವಾಗಿದ್ದು, ಗಾಯ ಅಷ್ಟೇನೂ ಗಂಭೀರವಲ್ಲ ಎನ್ನಲಾಗಿದೆ.  ಕಾರ್‌ನಲ್ಲಿ ಒಟ್ಟು ಐದು ಜನರಿದ್ದೆವು. ಇದರಲ್ಲಿ ನನ್ನ ತಮ್ಮ ಕೂಡ ಇದ್ದ.ಈ ವೇಳೆ ದಾಳಿಯಾಗಿದೆ ಎಂದು ಚಂದ್ರಶೇಖರ್‌ ಆಜಾದ್‌ ತಿಳಿಸಿದ್ದಾರೆ.

UP Elections : ಗೋರಖ್ ಪುರದಲ್ಲಿ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಸ್ಪರ್ಧೆ!

ದಾಳಿ ಮಾಡಿದವರ ಮುಖ ಪರಿಚಯ ನನಗೆ ಇಲ್ಲ. ಆದರೆ, ನನ್ನೊಂದಿಗೆ ಪ್ರಯಾಣ ಮಾಡುತ್ತಿದ್ದವರು. ಈ ದಾಳಿಕೋರರನ್ನು ಗುರುತುಹಿಡಿಯಬಲ್ಲರು ಎಂದಿದ್ದಾರೆ. ಭೀಮ್ ಆರ್ಮಿ ಹೇಳಿಕೆಯಲ್ಲಿ ಚಂದ್ರಶೇಖರ್ ಆಜಾದ್ ಮೇಲಿನ ದಾಳಿಯು "ಬಹುಜನ ಮಿಷನ್ ಆಂದೋಲನವನ್ನು ನಿಲ್ಲಿಸಲು ಹೇಡಿತನದ ಕೃತ್ಯವಾಗಿದೆ" ಮತ್ತು ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.

Up Elections: ಚುನಾವಣಾ ಹೊಸ್ತಿಲಲ್ಲಿ ಅಖಿಲೇಶ್‌ಗೆ ಶಾಕ್‌ ಕೊಟ್ಟ 'ರಾವಣ'!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ