ಕೇಂದ್ರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಅತ್ಯಂತ ಹಳೆಯ ಬಂಡುಕೋರ ಗುಂಪು!

Published : Nov 29, 2023, 06:09 PM IST
ಕೇಂದ್ರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಅತ್ಯಂತ ಹಳೆಯ ಬಂಡುಕೋರ ಗುಂಪು!

ಸಾರಾಂಶ

ಮಣಿಪುರದ ಹಿಂಸಾಚಾರದ  ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಮಣಿಪುರದ ಅತ್ಯಂತ ಹಳೆಯ ಬಂಡುಕೋರ ಗುಂಪು ಯುಎನ್‌ಎಲ್‌ಎಫ್‌ ಜೊತೆ ಭಾರತ ಸರ್ಕಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ.

ನವದೆಹಲಿ (ನ.29): ಮಣಿಪುರದ ಅತ್ಯಂತ ಹಳೆಯ ಬಂಡುಕೋರ ಗುಂಪುಗಳಲ್ಲಿ ಒಂದಾದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್) ಕೇಂದ್ರ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ. ಶಾಂತಿ ಒಪ್ಪಂದವನ್ನು ಪ್ರಕಟಿಸಿದ ಅಮಿತ್ ಶಾ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದು"ಮಣಿಪುರದ ಅತ್ಯಂತ ಹಳೆಯ ಕಣಿವೆ ಮೂಲದ ಸಶಸ್ತ್ರ ಗುಂಪು UNLF ಹಿಂಸಾಚಾರವನ್ನು ತ್ಯಜಿಸಲು ಮತ್ತು ಮುಖ್ಯವಾಹಿನಿಗೆ ಸೇರಲು ಒಪ್ಪಿಕೊಂಡಿದೆ. ನಾನು ಅವರನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಸ್ವಾಗತಿಸುತ್ತೇನೆ ಮತ್ತು ಶಾಂತಿ ಮತ್ತು ಪ್ರಗತಿಯ ಹಾದಿ ಅವರ ಪ್ರಯಾಣದಲ್ಲಿ ಅವರಿಗೆ ಶುಭ ಹಾರೈಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಬಂಡುಕೋರ ಗುಂಪು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಯುಎನ್‌ಎಲ್‌ಎಫ್ ಕಾರ್ಯಕರ್ತರು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವ ವೀಡಿಯೊವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡ ನಂತರ ಕಣಿವೆ ಮೂಲದ ನಿಷೇಧಿತ ಸಂಘಟನೆಯು ಸರ್ಕಾರದೊಂದಿಗೆ ಶಾಂತಿ ಮಾತುಕತೆಗೆ ಪ್ರವೇಶಿಸಿದ ಮೊದಲ ಘಟನೆ ಇದಾಗಿದೆ.

ನವೆಂಬರ್ 13 ರಂದು, ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಅಡಿಯಲ್ಲಿ ಎಂಟು "ಮೈಟೇಯಿ ಉಗ್ರಗಾಮಿ ಸಂಘಟನೆಗಳ" ಮೇಲೆ ಅಸ್ತಿತ್ವದಲ್ಲಿರುವ ನಿಷೇಧವನ್ನು ವಿಸ್ತರಿಸಿತು ಮತ್ತು ಅವುಗಳನ್ನು "ಕಾನೂನುಬಾಹಿರ ಸಂಘಗಳು" ಎಂದು ಘೋಷಿಸಿತು. ಈ ನಿಷೇಧಿತ ಗುಂಪುಗಳಲ್ಲಿ ಯುಎನ್‌ಎಲ್‌ಎಫ್ ಕೂಡ ಸೇರಿತ್ತು.
ಅದಾದ ಕೆಲವು ದಿನಗಳ ನಂತರ ನವೆಂಬರ್ 26 ರಂದು, ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜ್ಯ ಸರ್ಕಾರವು ಯುಎನ್‌ಎಲ್‌ಎಫ್‌ನೊಂದಿಗೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಅಂಚಿನಲ್ಲಿದೆ ಎಂದು ಘೋಷಿಸಿದರು.

ಮಣಿಪುರದಲ್ಲಿನ 9 ಉಗ್ರಗಾಮಿ ಗುಂಪು ನಿಷೇಧಿಸಿದ ಕೇಂದ್ರ ಸರ್ಕಾರ, ಶಾಂತಿ ಸುವ್ಯವಸ್ಥೆಗೆ ಮಹತ್ವದ ಕ್ರಮ!

ಮಂಗಳವಾರ, ಗೃಹ ಸಚಿವಾಲಯವು ಮಣಿಪುರದ ಮೈತೆಯ್ ಉಗ್ರಗಾಮಿ ಗುಂಪುಗಳ ಮೇಲೆ ನಿಷೇಧವನ್ನು ಜಾರಿಗೊಳಿಸಲು ಸಾಕಷ್ಟು ಆಧಾರವಿದೆಯೇ ಮತ್ತು ನಿರ್ಬಂಧಗಳನ್ನು ಮುಂದುವರಿಸಬೇಕೆ ಎಂದು ನಿರ್ಧರಿಸಲು ನ್ಯಾಯಮಂಡಳಿಯನ್ನು ರಚಿಸಿದೆ ಎಂದು ಘೋಷಿಸಿತು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ನ್ಯಾಯಮಂಡಳಿ, ಗೌಹಾಟಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕುಮಾರ್ ಮೇಧಿ ಅವರನ್ನು ಒಳಗೊಂಡಿದ್ದು, ಗುಂಪುಗಳನ್ನು "ಕಾನೂನುಬಾಹಿರ ಸಂಘಗಳು" ಎಂದು ಘೋಷಿಸಲು ಮತ್ತು ಅವುಗಳನ್ನು ನಿಷೇಧಿಸಲು ಸಾಕಷ್ಟು ಕಾರಣವಿದೆಯೇ ಎಂದು ನಿರ್ಧಾರ ಮಾಡಲಿದೆ.

RSS Vijayadashami Utsav: ಮಣಿಪುರ ಹಿಂಸಾಚಾರದ ಹಿಂದೆ ವಿದೇಶಿ ಶಕ್ತಿಗಳ ಕೈವಾಡ, ಸರಸಂಘಚಾಲಕ ಮೋಹನ್‌ ಭಾಗವತ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ