Gujarat Rape Case: ಧ್ವನಿ ಮೂಲಕ ಅತ್ಯಾಚಾರಿಯನ್ನು ಗುರುತಿಸಿದ ದೃಷ್ಟಿಹೀನ ಮಹಿಳೆ!

By Suvarna NewsFirst Published Dec 28, 2021, 4:30 PM IST
Highlights

* ಗುಜರಾತ್‌ನಲ್ಲೊಂದು ಅತ್ಯಾಚಾರ ಕೆಸ್

* ಅಂಧ ಮಹಿಳೆ ಮೇಲೆ ಅತ್ಯಾಚಾರ

* ಧ್ವನಿ ಮೂಲಕ ಆರೋಪಿ ಗುರುತಿಸಿದ ಗಟ್ಟಿಗಿತ್ತಿ

ಅಹಮದಾಬಾದ್(ಡಿ.28): ಗುಜರಾತ್ ನಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಅತ್ಯಾಚಾರ ಪ್ರಕರಣಗಳು ಬೆ:ಳಕಿಗೆ ಬರುತ್ತಿವೆ. ಮಂಗಳವಾರ ಅಹಮದಾಬಾದ್‌ನ ಬಾವ್ಲಾದಲ್ಲಿ ಅಂಧ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ನಾರ್ದಮ್ ರಿಕ್ಷಾ ಚಾಲಕ ಅಂಧ ಮಹಿಳೆಗೆ ಲಿಫ್ಟ್ ಕೊಡುವ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ, ಅಂಧ ಮಹಿಳೆಯ ದೂರಿನ ಮೇರೆಗೆ ಅಹಮದಾಬಾದ್ ಗ್ರಾಮಾಂತರ ಪೊಲೀಸರು ಕೆಲವೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

2017 ರಲ್ಲಿ ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ಅಭಿನಯದ 'ಕಾಬಿಲ್' ಚಿತ್ರವನ್ನು ನೀವು ನೋಡಿದ್ದರೆ, ಈ ಘಟನೆಯ ಕಥೆಯೂ ಅದೇ ರೀತಿ ನಡೆದಿದೆ. ಚಿತ್ರದಲ್ಲಿ ಹಾಘೂ ಈ ಘನಟೆಯಲ್ಲಿ ಕಮಡು ಬರುವ ವ್ಯತ್ಯಾಸವೆಂದರೆ ಸಿನಿಮಾದಲ್ಲಿ ಸಂತ್ರಸ್ತೆ ಅತ್ಯಾಚಾರದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ ಬವ್ಲಾದ ಈ ಮಹಿಳೆ ಅತ್ಯಾಚಾರಕಕ್ಒಳಗಾದರೂ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ಅಂಧ ಮಹಿಳೆ ಮತ್ತು ಆಕೆಯ ಅಂಧ ಪತಿಯ ಧೈರ್ಯದಿಂದ ಅವರು ಅಂತಿಮವಾಗಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಲಭ್ಯವಾದ ಮಾಹಿತಿ ಅನ್ವಯ, ಬಾವ್ಲಾ ತಾಲೂಕಿನಲ್ಲಿ ವಾಸಿಸುವ ಅಂಧ ಮಹಿಳೆ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಅಹಮದಾಬಾದ್‌ನ ಅಂಧಜನ್ ಮಂಡಲಕ್ಕೆ ಹೋಗಿದ್ದರು. ಮನೆಗೆ ಹೋಗಲು ತಡವಾಯಿತು, ಆದ್ದರಿಂದ ಮಹಿಳೆ ಬಾವ್ಲಾಗೆ ರಿಕ್ಷಾವನ್ನು ಮಾಡಿದ್ದಾಳೆ. ಆದರೆವ ಮಹಿಳೆ ರಿಕ್ಷಾದಲ್ಲಿ ಒಬ್ಬಳೇ ಇದ್ದುದನ್ನು ಕಂಡ ಆರೋಪಿಗಳು ಲಾಭ ಮಾಡಿಕೊಂಡಿದ್ದಾರೆ. ಮಹಿಳೆಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಇದನ್ನು ವಿರೋಧಿಸಿದ ಮಹಿಳೆ ಸಹಾಯಕ್ಕಾಗಿ ಕೂಗಿದ್ದಾಳೆ. ಇದರಿಂದ ಭಯಗೊಂಡ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಹೆಂಡತಿಗೆ ಧೈರ್ಯ ತುಂಬಿದ ಗಂಡ

ಆದರೆ, ಈ ವಿಷಯವನ್ನು ಮಹಿಳೆ ತನ್ನ ಪತಿ ಹಾಗೂ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾಳೆ. ನಂತರ ಆಕೆಯ ಪತಿ ಮಹಿಳೆಗೆ ಧೈರ್ಯ ತುಂಬಿ ಚಂಗೋದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ಪ್ರಕರಣದ ಆರೋಪಿಗಳನ್ನು ಬಂಧಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಮಹಿಳೆ ದೃಷ್ಟಿಹೀನಳಾಗಿದ್ದು, ರಿಕ್ಷಾ ಮತ್ತು ಆರೋಪಿ ಹೇಗಿದ್ದರೆಂಬುವುದು ವಿವರಿಸಲು ಆಕೆಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅಹಮದಾಬಾದ್ ಗ್ರಾಮಾಂತರ ಪೊಲೀಸರು 3 ವಿವಿಧ ತಂಡಗಳನ್ನು ರಚಿಸಿದರು ಮತ್ತು ಸರ್ಖೇಜ್‌ನಿಂದ ಬಾವ್ಲಾವರೆಗಿನ ಅನೇಕ ರಿಕ್ಷಾ ಚಾಲಕರನ್ನು ವಿಚಾರಣೆಗೆ ಒಳಪಡಿಸಿದರು ಮತ್ತು ಕೆಲವು ಶಂಕಿತರನ್ನು ಹಿಡಿದಿದ್ದಾರೆ.

ಧ್ವನಿಯಿಂದ ಆರೋಪಿ ಗುರುತಿಸಿದ ಮಹಿಳೆ

ನಂತರ ಪೊಲೀಸರು ಎಲ್ಲಾ ಆರೋಪಿಗಳನ್ನು ಅಂಧ ಮಹಿಳೆಯೊಂದಿಗೆ ಮಾತನಾಡುವಂತೆ ಮಾಡಿದರು. ದೂರುದಾರ ಮಹಿಳೆ ಪ್ರಮುಖ ಆರೋಪಿಯ ಧ್ವನಿಯನ್ನು ಗುರುತಿಸಿದ್ದಾಳೆ. ಬಳಿಕ ಪೊಲೀಸ್ ತನಿಖೆಯಲ್ಲಿ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿಗಳು ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದು, ಮಹಿಳೆಯೊಂದಿಗೆ ಸುಳ್ಳು ಹೆಸರು ಹೇಳಿ ಸಂವಹನ ನಡೆಸಿದ್ದರು. ಅಂಧ ಮಹಿಳೆ ಆರೋಪಿಯ ಧ್ವನಿಯಿಂದ ಆರೋಪಿಯನ್ನು ಗುರಿತಿಸಿದರೆ, ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಶಂಕಿತ ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ.

click me!