ಸಾವಿನಲ್ಲೂ ಐವರಿಗೆ ಬದುಕು ಕೊಟ್ಟ ಎರಡೂವರೆ ವರ್ಷದ ಕಂದಮ್ಮ

By Suvarna NewsFirst Published Dec 17, 2020, 5:46 PM IST
Highlights

ಹುಟ್ಟು ಸಾವು ಮನುಷ್ಯನ ಶಕ್ತಿಗೂ ಮೀರಿದ್ದು. ಎರಡೂವರೆ ವರ್ಷದ ಕಂದಮ್ಮ ಸಾವಿನಲ್ಲೂ ಐವರ ಬದುಕು ಬೆಳಗಿದ ಘಟನೆ ಇದು

ಸೂರತ್(ಡಿ.17): ಎರಡೂವರೆ ವರ್ಷದ ಕಂದ ಸಾವಿನಲ್ಲೂ ಸಾರ್ಧಕತೆ ಮೆರೆದ ಘಟನೆ ಸೂರತ್‌ನಲ್ಲಿ ನಡೆದಿದೆ. ಈ ಪುಟ್ಟ ಕಂದ ಸಾವಿನಲ್ಲೂ 7 ಜನರ ಬದುಕು ಬೆಳಗಿಸಿದೆ. ಕಂದನ ಅಂಗಾಗ ದಾನದಿಂದಾಗಿ ರಷ್ಯಾ, ಉಕ್ರೈನ್ ಸೇರಿದಂತೆ 2, 4 ವರ್ಷದ ಮಕ್ಕಳು ಸೇರಿ 7 ಜನ ಜೀವನಕ್ಕೆ ಮರಳಿದ್ದಾರೆ. ಸಾವಿನಲ್ಲಿ ಈ ಕಂದ ಕೊಟ್ಟ ಬದುಕಿನ ಉಡುಗೊರೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಡಿಸೆಂಬರ್ 9ರಂದು ಜಶ್ ಓಝಾ ಎಂಬ ಮಗು ಹತ್ತಿರದ ಮನೆಯ ಸೆಕೆಂಡ್ ಫ್ಲೋರ್‌ ಬಾಲ್ಕನಿಯಿಂದ ಕೆಳಗೆ ಬಿದ್ದಿತ್ತು. ಸೂರತ್‌ನ ಭಟರ್ ಏರಿಯಾದಲ್ಲಿ ಶಾಂತಿ ಪ್ಯಾಲೇಸ್‌ನಲ್ಲಿ ವಾಸವಿದ್ದರು.

ದೆಹಲಿಯಲ್ಲಿ ಕೊರೆಯುವ ಚಳಿ: ಪ್ರತಿಭಟನೆ ನಡೆಸುತ್ತಿದ್ದ ರೈತ ಸಾವು

ಮಗುವಿಗಾದ ಗಾಯದಿಂದ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು ಕೀವು ತುಂಬಿದೆ ಎಂದು ವೈದ್ಯರು ಹೇಳಿದ್ದರು. ಡಿಸೆಂಬರ್ 14ರಂದು ಬ್ರೈನ್ ಡೆಡ್ ಎಂದು ವೈದ್ಯರು ತಿಳಿಸಿದ್ದಾರೆ. ಜಶ್‌ನ ಹೃದಯ, ಲಿವರ್, ಶ್ವಾಸಕೋಶ, ಎರಡು ಕಿಡ್ನಿ, ಕಣ್ಣುಗಳನ್ನು ಮಗುವಿನ ತಂದೆ ತಾಯಿಯ ಒಪ್ಪಿಗೆಯೊಂದಿಗೆ ದಾನ ಮಾಡಲಾಗಿದೆ.

ಮಗುವಿನ ಹೃದಯ ಮತ್ತು ಶ್ವಾಸಕೋಶವನ್ನು 160 ನಿಮಿಷದಲ್ಲಿ ಚೆನ್ನೈಗೆ ತಲುಪಿಸಲಾಗಿದ್ದು, ರಷ್ಯಾದ 4 ವರ್ಷದ ಕಂದನಿಗೆ ಹೃದಯ ನೀಡಲಾಗಿದೆ. ಶ್ವಾಸಕೋಶವನ್ನುಉಕ್ರೈನ್‌ನ 4 ವರ್ಷದ ಮಗುವಿಗೆ ಜೋಡಿಸಲಾಗಿದೆ.

ಅಯೋಧ್ಯೆ ಮಸೀದಿ ಶಂಕುಸ್ಥಾಪನೆಗೆ ಡೇಟ್ ಫಿಕ್ಸ್, ಇದು ಬಾಬ್ರಿ ಮಸೀದಿಗಿಂತಲೂ ದೊಡ್ಡದು

ಕಿಡ್ನಿಯನ್ನು ಅಹಮದಾಬಾದ್ ಕಿಡ್ನಿ ಸಂಶೋಧನಾ ಕೇಂದ್ರಕ್ಕೆ ಸಾಗಿಸಲಾಗಿದೆ. 265 ಕಿಮೀ ದೂರವನ್ನು 180 ನಿಮಿಷದಲ್ಲಿ ಕ್ರಮಿಸಲಾಗಿದೆ. ಒಂದು ಕಿಡ್ನಿಯನ್ನು 13 ವರ್ಷದ ಹುಡುಗಿಗೆ ನೀಡಲಾಗಿದ್ದು, ಇನ್ನೊಂದನ್ನು ಸೂರತ್‌ನ 17 ವರ್ಷದ ಹುಡುಗಿಗೆ ನೀಡಲಾಗಿದೆ.

ಮಗು ಮಮ್ಮಿ ಎಂದು ಕರೆದಾಗ ತಾಯಿ ಅರ್ಚನಾ ಮಗು ಬದುಕಬಹುದೆಂದು ನಿರೀಕ್ಷಿಸಿದ್ದರು. ಆದರೆ ವೈದ್ಯರು ಬ್ರೈನ್ ಡೆಡ್‌ನ ಬಗ್ಗೆ ವಿವರಿಸಿದ್ದಾರೆ. ಸ್ಥಳೀಯ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುವ ಮಗುವಿನ ತಂದೆ ಸಂಜೀವ್ ಕಷ್ಟದ ಸಂದರ್ಭದಲ್ಲಿಯೂ ಅಂಗಾಗ ದಾನಕ್ಕೆ ಒಪ್ಪಿದ್ದಾರೆ. ಈ ದಂಪತಿಗೆ 6 ವರ್ಷದ ಮಗಳಿದ್ದಾಳೆ.

click me!