ಇಂದು ಜಿ20 ವಿದೇಶಾಂಗ ಸಚಿವರ ಮಹತ್ವದ ಶೃಂಗ: ಜಂಟಿ ಘೋಷಣೆಯಲ್ಲಿ ಯುದ್ಧದ ವಿರುದ್ಧ ನಿರ್ಣಯ

Published : Mar 02, 2023, 09:04 AM IST
ಇಂದು ಜಿ20 ವಿದೇಶಾಂಗ ಸಚಿವರ ಮಹತ್ವದ ಶೃಂಗ:  ಜಂಟಿ ಘೋಷಣೆಯಲ್ಲಿ ಯುದ್ಧದ ವಿರುದ್ಧ ನಿರ್ಣಯ

ಸಾರಾಂಶ

ಜಿ20 ದೇಶಗಳ ವಿದೇಶಾಂಗ ಸಚಿವರ ಮಹತ್ವದ ಸಭೆಗೆ ಬುಧವಾರ ಇಲ್ಲಿ ಚಾಲನೆ ಸಿಕ್ಕಿದ್ದು, ಇಂದು ಮಹತ್ವದ ವಿಷಯಗಳ ಕುರಿತು ನಾಯಕರು ಸಮಾಲೋಚನೆ ನಡೆಸಲಿದ್ದಾರೆ.

ನವದೆಹಲಿ: ಜಿ20 ದೇಶಗಳ ವಿದೇಶಾಂಗ ಸಚಿವರ ಮಹತ್ವದ ಸಭೆಗೆ ಬುಧವಾರ ಇಲ್ಲಿ ಚಾಲನೆ ಸಿಕ್ಕಿದ್ದು, ಇಂದು ಮಹತ್ವದ ವಿಷಯಗಳ ಕುರಿತು ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ರಷ್ಯಾ-ಉಕ್ರೇನ್‌ ಸಂಘರ್ಷ 2ನೇ ವರ್ಷಕ್ಕೆ ಕಾಲಿಟ್ಟಿರುವ ಹೊತ್ತಿನಲ್ಲೇ ಆಯೋಜನೆಗೊಂಡಿರುವ ಈ ಸಮಾವೇಶದ ಜಂಟಿ ಹೇಳಿಕೆ ಬಿಡುಗಡೆ ವೇಳೆ ಯುದ್ಧ ಪದ ಬಳಕೆ ಕುರಿತು ರಷ್ಯಾ ಮತ್ತು ಚೀನಾದ ಸಹಮತವನ್ನು ಪಡೆಯಲು ಭಾರತ ತನ್ನ ತೀವ್ರ ಯತ್ನ ಮುಂದುವರೆಸಿದೆ.

ಸಭೆಯಲ್ಲಿ ಅಮೆರಿಕದ ಆ್ಯಂಟನಿ ಬ್ಲಿಂಕನ್‌ (Antony Blinken), ರಷ್ಯಾದ ಸೆರ್ಗೇಯ್‌ ಲಾವ್ರೋವ್‌(Sergey Lavrov), ಚೀನಾ ಖಿನ್‌ ಗ್ಯಾಂಗ್‌(Qin Gang) , ಫ್ರಾನ್ಸ್‌ನ ಕ್ಯಾಥರೀನ್‌ ಕೊಲೊನ್ನಾ(Catherine Colonna), ಜರ್ಮನಿಯ ಅನ್ನಲೀನಾ (Annalina), ಬ್ರಿಟನ್‌, ಜೇಮ್ಸ್‌ ಕ್ಲೆವರ್ಲಿ(James Cleverly) ಸೇರಿದಂತೆ ಜಿ20 ದೇಶಗಳ ವಿದೇಶಾಂಗ ಸಚಿವರು ಮತ್ತು ಕೆಲ ಆಹ್ವಾನಿತ ದೇಶಗಳ ಸಚಿವರು ಭಾಗಿಯಾಗಲಿದ್ದಾರೆ. ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ ಸಭೆ ಆಯೋಜನೆಗೊಂಡಿದೆ.

ಪ್ರಸ್ತುತ ಆರ್ಥಿಕತೆಗೆ ರಿಡ್ಯೂಸ್, ರಿಯೂಸ್, ರೀಸೈಕಲ್ ಎನರ್ಜಿ ನೀತಿಯನ್ನ ಜಿ 20 ರಾಷ್ಟ್ರಗಳು ಅನುಸರಿಸುವುದು ಅಗತ್ಯ - ಜೋಶಿ

ಈ ನಡುವೆ ಉಕ್ರೇನ್‌ ಮೇಲಿನ ರಷ್ಯಾದ (Russia)ದಾಳಿಯನ್ನು ಯುದ್ಧ ಎಂದು ಕರೆಯುವ ವಿಷಯದಲ್ಲಿ ಎಲ್ಲಾ ರಾಷ್ಟ್ರಗಳನ್ನು ಸಹಮತದ ವೇದಿಕೆಗೆ ಕರೆತರುವ ಯತ್ನವನ್ನು ಭಾರತ ಮಾಡಿದೆ. ಕಳೆದ ವರ್ಷ ನಡೆದ ಜಿ20 ದೇಶಗಳ ಸಮಾವೇಶದಲ್ಲಿ ಇಂಥದ್ದೊಂದು ಪದವನ್ನು ಬಳಕೆ ಮಾಡಲು ಬಹುತೇಕ ದೇಶಗಳು ಸಮ್ಮತಿಸಿದ್ದವು. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಿ20 ದೇಶಗಳ ಹಣಕಾಸು ಸಚಿವರ ಸಭೆಯಲ್ಲಿ ಇಂಥ ಪದ ಬಳಕೆಗೆ ಸಹಮತ ವ್ಯಕ್ತಪಡಿಸಲು ಚೀನಾ ಮತ್ತು ರಷ್ಯಾ ನಿರಾಕರಿಸಿದ್ದವು. ಹೀಗಾಗಿ ಸಭೆಯ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಬದಲು, ಭಾರತ ತನ್ನ ಅಧ್ಯಕ್ಷೀಯ ಹೇಳಿಕೆ ಮಾತ್ರವೇ ಬಿಡುಗಡೆ ಮಾಡಿತ್ತು.

ಆದರೆ ಉಕ್ರೇನ್‌-ರಷ್ಯಾ ಬಿಕ್ಕಟ್ಟಿನ ವಿಷಯದಲ್ಲಿ ವಿದೇಶಾಂಗ ಸಚಿವರ ಸಭೆ ಇನ್ನಷ್ಟು ಮಹತ್ವವಾದ ಕಾರಣ, ಸಭೆಯ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಅದರಲ್ಲಿ ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನು ಯುದ್ಧ ಎಂದು ಕರೆಯುವ ವಿಷಯದಲ್ಲಿ ಎಲ್ಲಾ ವಿಷಯಗಳನ್ನು ಒಮ್ಮತದ ವೇದಿಕೆಗೆ ಕರೆತರುವ ಯತ್ನವನ್ನು ಭಾರತ ನಡೆಸುತ್ತಿದೆ. ಆದರೆ ಇದಕ್ಕೆ ಬುಧವಾರ ರಷ್ಯಾ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯ ದಾಟಿಯು, ರಷ್ಯಾ ಒಮ್ಮತದ ವೇದಿಕೆಗೆ ಬರುವ ಸಾಧ್ಯತೆ ಇಲ್ಲ ಎಂಬ ಸುಳಿವು ನೀಡಿದೆ.

ಇದು ಯುದ್ಧದ ಯುಗವಲ್ಲ: ಭಾರತದ ಪುನರುಚ್ಚಾರ

ಯುದ್ಧಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ತನ್ನ ನಿಲುವನ್ನು ಪುನರುಚ್ಚರಿಸಿರುವ ಭಾರತ, ಇದು ಯುದ್ಧದ ಯುಗವಲ್ಲ ಎಂದು ತನ್ನ ಆಪ್ತಮಿತ್ರ ರಷ್ಯಾಕ್ಕೆ ಕಿವಿಮಾತು ಹೇಳಿದೆ.  ಜಿ20 ದೇಶಗಳ ವಿದೇಶಾಂಗ ಸಚಿವೆ ಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಆಗಮಿಸಿರುವ ರಷ್ಯಾ ವಿದೇಶಾಂಗ ಸಚಿವ ಸೆರ್ಗೇಯ್‌ ಲಾವ್ರೋವ್‌ ಬುಧವಾರ ಇಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಉಭಯ ನಾಯಕರು ದ್ವಿಪಕ್ಷೀಯ ಸಹಕಾರ, ಉಕ್ರೇನ್‌ ಬಿಕ್ಕಟ್ಟು ಮತ್ತು ಜಿ20ಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು ಎನ್ನಲಾಗಿದೆ.

ಜಾಗತಿಕ ಸಂಕಷ್ಟದ ಮಧ್ಯೆ ಭಾರತ ಉಜ್ವಲ; ಛಿದ್ರಗೊಂಡಿರುವ ವಿಶ್ವಕ್ಕೆ ಮೋದಿ ನಾಯಕತ್ವ ಅತ್ಯಂತ ನಿರ್ಣಾಯಕ: WEF ಮುಖ್ಯಸ್ಥ

ಚರ್ಚೆಯಲ್ಲಿ ಉಕ್ರೇನ್‌ ವಿಷಯ ಪ್ರಸ್ತಾಪವಾದ ವೇಳೆ ಪಾಶ್ಚಿಮಾತ್ಯ ದೇಶಗಳು ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಿವೆ. ಇಂಥ ಯತ್ನಗಳ ಮೇಲೆ ನಾವು ಗಮನ ಹರಿಸಲಿದ್ದೇವೆ. ಜೊತೆಗೆ ಸಾರ್ವಭೌಮ ದೇಶವೊಂದರ ವಿಷಯದಲ್ಲಿ ಹಿಂಸಾತ್ಮಕ ಮಧ್ಯಪ್ರವೇಶದ ಬಗ್ಗೆಯೂ ನಮ್ಮ ಹೋರಾಟ ಮುಂದುವರೆಸಲಿದ್ದೇವೆ ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೋವ್‌ ಉಕ್ರೇನ್‌ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳುವ ಯತ್ನ ಮಾಡಿದರು ಎನ್ನಲಾಗಿದೆ.

ಈ ವೇಳೆ ವಿದೇಶಾಂಗ ಸಚಿವ ಜೈಶಂಕರ್‌, ಇದು ಯುದ್ಧದ ಯುಗವಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಪುನರುಚ್ಚರಿಸಿದರು. ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ದಾರಿ ಎಂದು ಕಿವಿ ಮಾತು ಹೇಳಿದರು ಎನ್ನಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!