
ನವದೆಹಲಿ (ಡಿ.28) ದೇಶದ ಬಹುತೇಕ ಕಡೆಗಳಲ್ಲಿ ಭಾರಿ ಚಳಿ ವಾತಾವರಣ ನಿರ್ಮಾಣವಾಗಿದೆ. ಇದೀಗ ಭಾರತೀಯ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಅತೀವ ಚಳಿ ಕಾರಣ ಸುರಕ್ಷತಾ ಕ್ರಮಗಳ ಕುರಿತು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಇದೇ ವೇಳೆ ಹಲವು ರಾಜ್ಯಗಳಲ್ಲಿ ಹಿಮಪಾತವಾಗಲಿದೆ. ಹಲವು ದಶಕಗಳಲ್ಲಿ ಕಂಡು ಕೇಳರಿಯದ ಚಳಿ ಇರಲಿದೆ. ಹೀಗಾಗಿ ಇನ್ನು ನಾಲ್ಕು ದಿನ ಚಳಿ ಪ್ರಮಾಣ ಅತೀವವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಯಾವೆಲ್ಲಾ ರಾಜ್ಯದಲ್ಲಿ ಹಿಮಪಾತವಾಗಲಿದೆ, ಕರ್ನಾಟಕದಲ್ಲಿನ ಪರಿಸ್ಥಿತಿ ಏನು?
ಹವಾಮಾನ ಇಲಾಖೆ ವರದಿಯಂತೆ ಡಿಸೆಂಬರ್ 29ಕ್ಕೆ ಭಾರಿ ಚಳಿ ಇರಲಿದೆ ಎಂದಿದೆ. ಉತ್ತರ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಅಥೀವ ಚಳಿ ಗಾಳಿ, ಮಂಜು ಕವಿದ ವಾತಾವರಣ ಇರಲಿದೆ. ಸಂಜೆಯಿಂದ ಬೆಳಗ್ಗೆವರೆಗೆ ಈ ದಟ್ಟ ಮಂಜು ಇರಲಿದೆ. ಹಿಮಾಚಲ ಪ್ರದೇಶ, ಪಂಜಾಬ್, ಹರ್ಯಾಣ, ಚಂಡೀಘಟ, ಉತ್ತರ ಪ್ರದೇಶ, ಉತ್ತರಖಂಡ ಬಿಹಾರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಅತೀವ ಶೀತಗಾಳಿ ಇರಲಿದೆ. ಜನವರಿ 1ರ ವರೆಗೆ ಈ ವಾತಾವರಣ ಇರಲಿದೆ. ಬಳಿಕ ಶೀತದ ಪ್ರಮಾಣ ಕಡಿಮೆಯಾಗಲಿದೆ ಎಂದಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಹಿಮಾಲಯನ್ ವಲಯದಲ್ಲಿ ಭಾರಿ ಹಿಮಪಾತವಾಗಲಿದೆ ಎಂದಿದೆ. ಪ್ರಮಖವಾಗಿ ಜಮ್ಮು ಮತ್ತು ಕಾಶ್ಮೀರ, ಹಿಮಾಲಚಲ ಪ್ರದೇಶ, ಉತ್ತರಖಂಡ ರಾಜ್ಯಗಳಲ್ಲಿ ಹಿಮಪಾತವಾಗಲಿದೆ ಎಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಮೂರು ರಾಜ್ಯಕ್ಕೆ ಪ್ರವಾಸ ತೆರಳುತ್ತಿದ್ದಾರೆ. ಹೀಗಾಗಿ ಪ್ರವಾಸಿಗರು ಅತೀವ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಆರೋಗ್ಯದ ಕುರಿತು ಗಮನವಹಿಸುವಂತೆ ಐಎಂಡಿ ಸೂಚಿಸಿದೆ.
ದೆಹಲಿ ವಲಯದಲ್ಲಿ ಅತೀವ ಚಳಿ ಇರಲಿದೆ. ದೆಹಲಿಯಲ್ಲಿ ಈಗಾಗಲೇ ವಾಯು ಮಾಲಿನ್ಯದ ಪ್ರಮಾಣವೂ ಅತೀಯಾಗಿರುವ ಕಾರಣ ದಟ್ಟ ಮಂಜು ಕವಿದಿದೆ. ಮಂಜು ತೀವ್ರತೆ ಹೆಚ್ಚಾಗಲಿದೆ ಎಂದಿದೆ. ಈಗಾಗಲೇ ದೆಹಲಿಯಲ್ಲಿ ಮಂಜು ಕವಿದ ವಾತಾವರಣದ ಕಾರಣ ವಿಮಾನ ಪ್ರಯಾಣಗಳು ರದ್ದಾಗಿದೆ. ಹಲವು ರೈಲು ಸೇವೆಗಳು ವ್ಯತ್ಯಯವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಚಳಿ ಇರಲಿದೆ. ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಭಾರಿ ಚಳಿ ವಾತಾವರಣ ಇರಲಿದೆ. ಈಗಾಲೇ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಚಳಿ ತೀವ್ರಗೊಂಡಿದೆ. ಹೊಸ ವರ್ಷದ ಸಂಭ್ರಮ ಆಚರಿಸಲು ಪ್ರವಾಸಿಗರು ಈಗಾಗಲೇ ಕೊಡಗು,ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಪ್ರವಾಸ ತೆರಳಿದ್ದಾರೆ. ಪ್ರವಾಸಿಗರು ಚಳಿಯಿಂದ ರಕ್ಷಣೆ ಪಡೆಯಲು ಹವಾಮಾನ ಇಲಾಖೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ