ಸೆಪ್ಟೆಂಬರ್‌ನಲ್ಲಿ ಮತ್ತೆ ಭೀಕರ ಭೂಕುಸಿತ, ಪ್ರವಾಹ ಎಚ್ಚರಿಕೆ: ದುರಂತ ಬೆನ್ನಲ್ಲೇ ಲಾ ನಿನಾ ಮಾರುತ!

By Chethan Kumar  |  First Published Aug 2, 2024, 1:34 PM IST

ವಯನಾಡು ಭೂಕುಸಿತ, ಶಿರೂರು ಗುಡ್ಡ, ಹಿಮಾಚಲ ಪ್ರದೇಶ, ಉತ್ತರಖಂಡ ಪ್ರವಾಹ ಭೀಕರತೆ ಇನ್ನು ಮಾಸಿಲ್ಲ. ಇನ್ನು ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ನೀಡಿದೆ. ಅಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಭೀಕರ ಭೂಕುಸಿತ, ಪ್ರವಾಹ ಸಾಧ್ಯತೆ ದಟ್ಟವಾಗಿದೆ ಎಂದಿದೆ.
 


ನವದೆಹಲಿ(ಆ.03) ಅಂಕೋಲಾದ ಶಿರೂರಿನ ಗುಡ್ಡ ಕುಸಿದ ಭೀಕರತೆ ಜೊತಗೆ ಕರ್ನಾಟಕದಲ್ಲಿ ಹಲವು ದುರಂತಗಳು ಸಂಭವಿಸಿದೆ. ಕೇರಳದ ವಯಾನಾಡು ಭೂಕುಸಿತಕ್ಕೆ ಸಾವಿನ ಸಂಖ್ಯೆ 300 ದಾಟಿದೆ. ಹಿಮಾಚಲ ಪ್ರದೇಶ, ಉತ್ತರಖಂಡದಲ್ಲೂ ಭಾರಿ ಮಳೆಯಿದಂ ಭೂಕುಸಿತ, ಪ್ರವಾಹ ಸಂಭವಿಸಿ ಹಲವರು ಮೃತಪಟ್ಟಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ದುರಂತ ಸಂಭವಿಸಿದೆ. ಇದರ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಪರಿಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ, ಅಷ್ಟರಲ್ಲೇ ಹವಾಮಾನ ಇಲಾಖೆಯಿಂದ ಮತ್ತೊಂದು ಎಚ್ಚರಿಕೆ ಬಂದಿದೆ. ಅಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಭೀಕರ ಭೂಕುಸಿತ, ಪ್ರವಾಹ ಸಾಧ್ಯತೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಲಾ ಲಿನಾ ಮಾರುತ ರೂಪುಗೊಳ್ಳಲಿದೆ. ಇದು ಭಾರಿ ಮಳೆಯನ್ನೇ ತರಿಸಲಿದೆ. ಈ ಮಳೆಗೆ ಮತ್ತಷ್ಟು ಗುಡ್ಡಗಳು ಕುಸಿಯುವ ಸಾಧ್ಯತೆ ಇದೆ. ಅಗಸ್ಟ್ ಮೊದಲ ವಾರಾಂತ್ಯಕ್ಕೆ ಮಳೆ ಕಡಿಮೆಯಾಗಲಿದೆ. ಇದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲು ಅನುವು ಮಾಡಿಕೊಡಲಿದೆ. ಆದರೆ ಆಗಸ್ಟ್ ಅಂತ್ಯ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಲಾ ನಿನಾ ಮಾರುತ ರೂಪುಗೊಂಡು ಅವಾಂತರ ಸೃಷ್ಟಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Latest Videos

undefined

ವಯನಾಡು ರಕ್ಷಣಾ ಕಾರ್ಯಕ್ಕೆ BSNL ನೆರವು; ಕರೆ, ಇಂಟರ್ನೆಟ್, SMS ಎಲ್ಲವೂ ಉಚಿತ!

ಲಾ ನಿನಾ ಮಾರುತದಿಂದ ಒಂದೇ ಭಾರಿ ಭಾರಿ ಮಳೆ ಸುರಿಯುವ ಕಾರಣ ಹಲವು ಅವಘಡ ಸಂಭವಿಸುವ ಸಾಧ್ಯತೆ ಇದೆ. ಪ್ರಮುಖವಾಗಿ ಬೆಟ್ಟದ ತಪ್ಪಲಿನ ಪ್ರದೇಶ, ನದಿ ಪಾತ್ರದ ಪ್ರದೇಶಗಳಲ್ಲಿ ಅಪಾಯ ಹೆಚ್ಚು. ಅಪಾಯಾಕಾರಿ ಬೆಟ್ಟ, ಪರ್ವತಗಳು ಕುಸಿಯುವ ಭೀತಿ ಹೆಚ್ಚಾಗಿದೆ. ಇನ್ನು ನದಿಗಳು ಉಕ್ಕಿ ಹರಿಯಲಿದೆ. ಈ ವೇಳೆ ಭೂಕುಸಿತ ಸಂಭವಿಸಿದರೆ, ನದಿಗಳು ದಿಕ್ಕನ್ನೇ ಬದಲಿಸಿ ಗ್ರಾಮ, ಪಟ್ಟಣಗಳನ್ನು ಸರ್ವನಾಶ ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಲಾ ನಿನಾ ಮಳೆಯ ಪರಿಣಾಮ ಭಾರತದ ಬಹುತೇಕ ರಾಜ್ಯಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದಿದೆ. ಮಧ್ಯ ಹಾಗೂ ಪಾರ್ವ ಸಮಭಾಜಕ ಪೆಸಿಫಿಕ್‌ನಲ್ಲಿ ಸಮುದ್ರದ ತಂಪಾದ ವಾತಾವರಣದಿಂದ ರೂಪುಗೊಳ್ಳುವ ಲಾ ನಿನಾ ಮಾರುತ ಭಾರತದಲ್ಲಿ ಹೆಚ್ಚಿನ ಮಳೆ ಸುರಿಸಲಿದೆ. ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಈ ಬಾರಿ ಮಳೆ ಪ್ರಮಾಣ ಕೊಂಚ ಹೆಚ್ಚಾಗಲಿದೆ. ಈಗಾಗಲೇ ಮಳೆಯಿಂದ ಭೂಮಿ ಕುಸಿಯುತ್ತಿದೆ. ಇದರ ಬೆನ್ನಲ್ಲೇ ಲಾ ನಿನಾ ಮಳೆಯಿಂದ ಭೂಮಿ ಮತ್ತಷ್ಟು ಕುಸಿಯುವ ಆತಂಕ ಹೆಚ್ಚು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ನಿಜವಾಯ್ತು ಮಾನಸಿಕ ಅಸ್ವಸ್ಥನ ಭೂಕುಸಿತ ದುರಂತ ಭವಿಷ್ಯ, ವರ್ಷದ ಹಿಂದಿನ ವಿಡಿಯೋ ವೈರಲ್!
 

click me!