ವಯನಾಡು ರಕ್ಷಣಾ ಕಾರ್ಯಕ್ಕೆ BSNL ನೆರವು; ಕರೆ, ಇಂಟರ್ನೆಟ್, SMS ಎಲ್ಲವೂ ಉಚಿತ!

By Chethan Kumar  |  First Published Aug 2, 2024, 1:04 PM IST

ವಯನಾಡು ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಇದೀಗ ಬಿಎಸ್‌ಎನ್ಎಲ್ ಮಹತ್ವದ ಘೋಷಣೆ ಮಾಡಿದೆ. ರಕ್ಷಣಾ ಹೀರೋಗಳು, ದುರಂತದಲ್ಲಿ ಸಿಲುಕಿದವರು ಸೇರಿದಂತೆ ವಯನಾಡಿನಲ್ಲಿ ಸಂಪೂರ್ಣ ಉಚಿತ ಕರೆ, ಉಚಿತ ಇಂಟರ್ನೆಟ್ ಹಾಗೂ ಉಚಿತ ಮೆಸೇಜ್ ಸೌಲಭ್ಯ ಘೋಷಿಸಿದೆ.
 


ವಯನಾಡ್(ಆ.02) ವಯನಾಡು ಭೀಕರ ದುರಂತದಲ್ಲಿ ಮಡಿದವರ ಸಂಖ್ಯೆ ಇದೀಗ 300 ದಾಟಿದೆ. ಇನ್ನೂ 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿದೆ. ಅನ್ನ ನೀರು ಇಲ್ಲದೆ ಕಳೆದೆರಡು ದಿನದಿಂದ ಕಾಡಿನಲ್ಲಿದ್ದ ತಂದೆ ಹಾಗೂ ಮೂವರು ಪುಟ್ಟ ಮಕ್ಕಳನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಕ್ಕೆ ಮತ್ತಷ್ಟು ಚುರುಕು ನೀಡಲಾಗಿದೆ. ಇದರ ನಡುವೆ ಬಿಎಸ್ಎನ್‌ಎಲ್ ಮಹತ್ವದ ಘೋಷಣೆ ಮಾಡಿದೆ. ವಯನಾಡಿನಲ್ಲಿ ಕರೆ, ಇಂಟರ್ನೆಟ್ ಹಾಗೂ ಎಸ್ಎಂಎಸ್ ಸಂಪೂರ್ಣವಾಗಿ ಉಚಿತ ಮಾಡಲಾಗಿದೆ.

ವಯನಾಡು ಜಿಲ್ಲೆ ಹಾಗೂ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕಿನಲ್ಲಿ ಬಿಎಸ್‌ಎಸ್‌ಎನ್ಎಲ್ ಸಂಪೂರ್ಣ ಉಚಿತವಾಗಿದೆ. ರಕ್ಷಣಾ ಪ್ರವರ್ತಕರು, ಆಪ್ತರನ್ನು ಕಳೆದುಕೊಂಡಿರುವ ಗ್ರಾಮಸ್ಥರು ಸೇರಿದಂತೆ ಎಲ್ಲರಿಗೂ ತುರ್ತು ನೆರವಾಗಲು BSNL ಮಹತ್ವದ ಹೆಜ್ಜೆ ಇಟ್ಟಿದೆ. ವಯಾನಡು ಜಿಲ್ಲೆ ಹಾಗೂ ನಿಲಂಬೂರು ತಾಲೂಕಿನ ಎಲ್ಲಾ BSNL ಗ್ರಾಹಕರಿಗೆ ಸಂಪೂರ್ಣ ಉಚಿತ ಸೇವೆ ನೀಡಲಾಗಿದೆ.

Tap to resize

Latest Videos

undefined

ನಿಜವಾಯ್ತು ಮಾನಸಿಕ ಅಸ್ವಸ್ಥನ ಭೂಕುಸಿತ ದುರಂತ ಭವಿಷ್ಯ, ವರ್ಷದ ಹಿಂದಿನ ವಿಡಿಯೋ ವೈರಲ್!

ಪ್ರತಿ ದಿನ 100 ಎಸ್ಎಂಎಸ್, ಅನ್ ಲಿಮಿಟೆಡ್ ಕರೆ ಹಾಗೂ ಅನ್‌ಲಿಮಿಟೆಡ್ ಡೇಟಾ ಉಚಿತವಾಗಿ ನೀಡಲಾಗಿದೆ. ಭೂಕುಸಿತ ಸ್ಥಳದಲ್ಲಿ BSNL ಫ್ರೀಕ್ವೆನ್ಸಿ ಹೆಚ್ಚಿಸಲಾಗಿದೆ. ಈ ಮೂಲಕ ಹೈ ಸ್ಪೀಡ್ ಇಂಟರ್ನೆಟ್ ಹಾಗೂ ಕಾಲ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಂಡಿದೆ.  ಚೂರ್‌ಮಲ ಸಮೀಪದ ಮುಂಡಕ್ಕೈಲ್‌ನಲ್ಲಿ ಇದೀಗ ಏಕೈಕ BSNL ಟವರ್ ಉಳಿದುಕೊಂಡಿದೆ. ಹೀಗಾಗಿ ಈ ಟವರ್ ಫ್ರೀ ಕ್ವೆನ್ಸಿ ಹೆಚ್ಚಿಸಲಾಗಿದೆ.

ಹೈ ಸ್ಪೀಡ್ 4ಜಿ ಇಂಟರ್ನೆಟ್ ಸೇವೆಯನ್ನು BSNL ಒದಗಿಸುತ್ತಿದೆ.  ಈ ಮೂಲಕ ರಕ್ಷಣಾ ಕಾರ್ಯಕರ್ತರು, ಸ್ಥಲೀಯರು, ಗ್ರಾಮಸ್ಥರಿಗೆ ನೆರವಾಗಲಿದೆ ಎಂದು BSNL ಹೇಳಿದೆ. ಈ ಕುರಿತು ಟ್ವೀಟ್ ಮಾಡಿದೆ. ವಯನಾಡು ಜಿಲ್ಲೆಯಲ್ಲಿ ಹೆಚ್ಚಿನ BSNL ಗ್ರಾಹಕರಿದ್ದಾರೆ. ಬೆಟ್ಟ ಗುಡ್ಡಗಳ ಈ ಪ್ರದೇಶದಲ್ಲಿ BSNL ಕವರೇಜ್ ಹೆಚ್ಚಿದೆ. ಆದರೆ ಭೂಕುಸಿತದಲ್ಲಿ ಹಲವು ಟವರ್‌ಗಳು ಮಣ್ಣುಪಾಲಾಗಿದೆ. ಇದೀಗ ಏಕೈಕ ಟವರ್ ಉಳಿದುಕೊಂಡಿದೆ.

 

As part of providing support to the rescue mission & solidarity with the affected citizens in Wayanad BSNL is providing free unlimited call & data usage facility with 100 sms/day for 3 days for all the customers in Wayanad district & Nilambur Taluk. pic.twitter.com/ZiyUEJwyFo

— BSNL_Kerala (@BSNL_KL)

 

ವಯನಾಡು ದುರಂತದಲ್ಲಿ ಮಡಿದವರ ಸಂಖ್ಯೆ 308ಕ್ಕೆ ಏರಿಕೆಯಾಗಿದೆ.ರಕ್ಷಣಾ ಕಾರ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಡ್ರೋನ್, ರೇಡಾರ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಬಳಸಿ ಕೆಸರು, ಕಲ್ಲು ಮಣ್ಣು ತುಂಬಿರುವ ಪ್ರದೇಶ, ಕಾಡಿನಲ್ಲಿ ಶೋಧ ಕಾರ್ಯಗಳನ್ನು ನಡೆಸಲಾಗುತ್ತಿದೆ. ಬದುಕುಳಿದವರನ್ನು ರಕ್ಷಿಸವು ಕಾರ್ಯ ನಿರಂತರವಾಗಿ ಸಾಗುತ್ತಿದೆ. ಈಗಲೂ ಕೆಲ ಪ್ರದೇಶಗಳಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.

ವಯನಾಡು ಭೂಕುಸಿತ ದುರಂತ: ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್; ₹70,000 ಧನ ಸಹಾಯ 
 

click me!