
ಲಖನೌ (ಅ.30): ರಾಜ್ಯದಲ್ಲಿ ಸಮಾಜವಾದಿ ಪಕ್ಷವನ್ನು ಸೋಲಿಸಲು ಮುಂಬರುವ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಲು ತಾವು ಸಿದ್ಧ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಘೋಷಿಸಿದ್ದಾರೆ.
ನ.9ರಂದು ರಾಜ್ಯದಿಂದ ರಾಜ್ಯಸಭೆಯ 10 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಅದರ ಬೆನ್ನಲ್ಲೇ ಮಾಯಾವತಿ ಈ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಜ್ಯಸಭೆ ಪ್ರವೇಶಕ್ಕೆ ಬಿಎಸ್‌ಪಿಗೆ ಅಗತ್ಯವಿರುವಷ್ಟುಶಾಸಕರ ಸಂಖ್ಯಾಬಲವಿಲ್ಲ. ಆದಾಗ್ಯೂ, ಒಂದು ಸ್ಥಾನದ ಮೇಲೆ ಮಾಯಾವತಿ ಕಣ್ಣಿಟ್ಟಿದ್ದಾರೆ.
ಶಿರಾ ಅಖಾಡಕ್ಕೆ ರಾಜಾಹುಲಿ ಎಂಟ್ರಿ; ರಾರಾದಲ್ಲಿ ಕಮಲ ಪಾಳಯ ಸೇರಿದ ಕೈ ನಾಯಕ ...
ಈ ನಡುವೆ ಪಕ್ಷದ ರಾಜ್ಯಸಭಾ ಅಭ್ಯರ್ಥಿ ವಿರುದ್ಧ ಬಂಡೆದಿದ್ದಿರುವ ಪಕ್ಷದ 9 ಶಾಸಕರನ್ನು ಮಾಯಾವತಿ ಅಮಾನತು ಮಾಡಿದ್ದಾರೆ. ಇವರೆಲ್ಲಾ ಎಸ್‌ಪಿ ಪರವಾಗಿ ಮತ ಚಲಾಯಿಸುವ ಭೀತಿ ಮಾಯಾರನ್ನು ಕಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ