Delhi Air Quality; ರಾಷ್ಟ್ರ ರಾಜಧಾನಿಯಲ್ಲಿ ಅತ್ಯಂತ ಕಳಪೆ ವಾಯು, AQI 531 ದಾಖಲು!

By Suvarna NewsFirst Published Nov 5, 2021, 7:54 PM IST
Highlights
  • ದೆಹೆಲಿ ವಾಯುಗುಣಮಟ್ಟ ಅತ್ಯಂತ ಕಳಪೆ, ಆತಂಕ ತಂದ ವರದಿ
  • ದೀಪಾವಳಿ ಬೆನ್ನಲ್ಲೇ ದೆಹಲಿ ವಾಯುಗುಣಮಟ್ಟ ಪಾತಾಳಕ್ಕೆ ಕುಸಿತ
  • ವಿಪರೀತ ವಾಯುಮಾಲಿನ್ಯದಿಂದ ಹಲವರು ಅಸ್ವಸ್ಥ

ನವದೆಹಲಿ(ನ.05): ಪ್ರಧಾನಿ ನರೇಂದ್ರ ಮೋದಿ(Narendra Modi) ಇತ್ತೀಚೆಗೆ ಗ್ಲಾಸ್ಗೋದಲ್ಲಿ ನಡೆದ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಮಹತ್ವದ ಸಂದೇಶ ಸಾರಿದ್ದರು. ಭಾರತ(India) ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮೋದಿ ಹೇಳಿದ್ದರು. ಆದರೆ ಮೋದಿ ಭಾಷಣ ಮಾಡಿದ ಎರಡೇ ದಿನದಲ್ಲಿ ದೇಶದ ವಾಯುಗುಣಮಟ್ಟ(Air Quality) ಪಾತಾಳಕ್ಕೆ ಕುಸಿದಿದೆ. ದೆಹಲಿ(Delhi) ವಾಯು ಗುಣಮಟ್ಟ ಇಂದು 531 ದಾಖಲಾಗಿದೆ. ಇದು ಅತ್ಯಂತ ಕಳಪೆ ವಾಯುಗುಣಮಟ್ಟವಾಗಿದೆ.

ಗಂಟಲು ಕಿರಿ ಕಿರಿ, ಕಣ್ಣು ಉರಿ: ದೀಪಾವಳಿಗೆ ಬಸವಳಿದ ದೆಹಲಿ!

ವಾಯು ಗುಣಮಟ್ಟ ಪರೀಕ್ಷೆಯಲ್ಲಿ ದೆಹಲಿ ಗಾಳಿ 531  AQI ಮಾಲಿನ್ಯವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ನೂತನ ವರದಿ ದೆಹಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ. ವಿಪರೀತ ವಾಯುಮಾಲಿನ್ಯದಿಂದ(Air Pollution) ದೆಹಲಿಯಲ್ಲಿ ಹಲವರು ಗಂಟಲು ಕಿರಿಕಿರಿ ಸೇರಿದಂತೆ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವರು ಆಸ್ವಸ್ಥಗೊಳ್ಳುತ್ತಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ದೆಹಲಿ ವಾಸಯೋಗ್ಯವಲ್ಲದ ನಗರವಾಗಲು ಹೆಚ್ಚು ದಿನ ಬೇಕಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ 400ರ ಆಸುಪಾಸಿನಲ್ಲಿದ್ದ ದೆಹಲಿ ವಾಯುಮಾಲಿನ್ಯ AQI, ಈ ಬಾರಿ 500ರ ಗಡಿ ದಾಟಿದೆ.  531ರ ಗಡಿ ದಾಟಿದ್ದು, ವಾಸಯೋಗ್ಯವಲ್ಲದ ನಗರವಾಗಿ ಪರಿಣಮಿಸಿದೆ.

ದೀಪಾವಳಿ ಹಿನ್ನೆಲೆ ದೆಹಲಿಯ ವಾಯು ಗುಣಮಟ್ಟ ಕುಸಿತ : IMD

ಏರ್ ಕ್ವಾಲಿಟಿ ಇಂಡೆಕ್ಸ್
0 to 50 : ಉತ್ತಮ
50 to 100: ಸಾಧಾರಣ
100 to 200: ಮಾಲಿನ್ಯ ಮಿಶ್ರಿತ
200 to 300: ಕಳಪೆ
300 to 400: ಅತ್ಯಂತ ಕಳಪೆ
400 to 500: ಗಂಭೀರ 
500 + :  ವಾಸಯೋಗ್ಯವಲ್ಲ

ದೆಹಲಿಯ ಸುತ್ತ ಮುತ್ತಲೂ ವಾಯು ಮಾಲಿನ್ಯ ವಿಪರೀತವಾಗಿದೆ. ಫರಿದಾಬಾದ್ ನಗರದಲ್ಲಿ AQI 469 ದಾಖಲಾಗಿದೆ. ಇನ್ನು ಗ್ರೇಟರ್ ನೋಯ್ಡಾದಲ್ಲಿ  AQI 470 ದಾಖಲಾಗಿದೆ. ಇನ್ನು ಗುರ್ಗಾಂವ್‌ನಲ್ಲಿ 472 ಹಾಗೂ ನೋಯ್ಡಾಗಲ್ಲಿ 475  AQI ದಾಖಲಾಗಿದೆ. 

ದೆಹಲಿಯಲ್ಲಿ ದಿಢೀರ್ ವಾಯುಮಾಲಿನ್ಯ ಹೆಚ್ಚಳಕ್ಕೆ ದೀಪಾವಳಿ ಹಬ್ಬದಲ್ಲಿ ಸಿಡಿಸಿದ ಪಟಾಕಿ ಕಾರಣ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಜನವರಿ 2022ರ ವರೆಗೆ ಪಟಾಕಿ ನಿಷೇಧ ಮಾಡಲಾಗಿದೆ. ಆದರೆ ಹಲವರು ನಿರ್ಬಂಧದ ನಡುವೆಯೂ ಪಟಾಕಿ ಸಿಡಿಸಿದ್ದಾರೆ. ಇದರ ಪರಿಣಾಮ ದೆಹಲಿಯಲ್ಲಿ ವಾಯು ಮಾಲಿನ್ಯ ಗಂಭೀರ ಸ್ವರೂಪ ಪಡೆದುಕೊಂಡಿದೆ. 

ದೆಹಲಿ ಮಾತ್ರವಲ್ಲ, ಭಾರತದ ಪ್ರಮುಖ ನಗರಗಳಲ್ಲೂ ವಾಯು ಗುಣಮಟ್ಟ ಕುಸಿದಿದೆ. ದೀಪಾವಳಿ ಹಬ್ಬದ ಆಚರಣೆಯಿಂದ ದೇಶದ ಬಹುತೇಕ ಕಡೆ ಪಟಾಕಿ ನಿಷೇಧ ಮಾಡಲಾಗಿದೆ. ಆದರೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಪಟಾಕಿ ಮಾರಾಟ ಕೂಡ ನಿಷೇಧ ಮಾಡಲಾಗಿದೆ. ಆದರೆ ಎಲ್ಲಾ ಕಡೆ ಪಟಾಕಿ ಲಭ್ಯವಿದೆ. ಹೀಗಾಗಿ ಜನರು ಪಟಾಕಿ ಖರೀದಿಸಿ ದೀಪಾವಳಿ ಆಚರಿಸಿದ್ದಾರೆ. 

ದೀಪಾವಳಿ ಹಬ್ಬಕ್ಕೂ ಮೊದಲು ಪಟಾಕಿ ನಿರ್ಬಂಧಕ್ಕೆ ಪರ ವಿರೋಧ ವ್ಯಕ್ತವಾಗಿತ್ತು. ಹಿಂದೂಗಳ ಹಬ್ಬಕ್ಕೆ ನಿರ್ಬಂಧ ಹಾಕಿ, ಕ್ರಿಸ್ಮಸ್, ಹೊಸ ವರ್ಷ ಆಚರಣೆಗೆ ಪಟಾಕಿಗೆ ಅವಕಾಶ ನೀಡುವುದೇಕೆ ಎಂದು ಹಲವರು ಪ್ರಶ್ನಿಸಿದ್ದರು. ಇಷ್ಟೇ ಅಲ್ಲ ಪಟಾಕಿ ನಿಷೇಧ ಅಸಮಂಜಸ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಆದರೆ ಸರ್ಕಾರ ವಾಯ ಮಾಲಿನ್ಯ ತಗ್ಗಿಸಲು ಪಟಾಕಿ ನಿಷೇಧ ಹೇರಿತ್ತು. ಇದು ಹಲವು ಕಡೆಗಳಲ್ಲಿ ಪಾಲನೆಯಾಗಿಲ್ಲ. ದೆಹಲಿಯಲ್ಲಿ ಮಾಲಿನ್ಯ ವಿಪರೀತಗೊಂಡಿರುವ ಕಾರಣ ಆರೋಗ್ಯ ಸಮಸ್ಯೆ ಕೂಡ ಕಾಡುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೆಹಲಿ ಸೇರಿದಂತೆ ಎಲ್ಲಾ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ದೀಪಾವಳಿ ಮುಗಿದ ಬಳಿಕ ಹೊಸ ವರ್ಷ ಆಚರಣೆ ಕೂಡ ವಾಯು ಮಾಲಿನ್ಯಕ್ಕೆ ಕಾರಣವಾಗಲಿದೆ.

click me!