ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ

Sujatha NR   | Kannada Prabha
Published : Dec 31, 2025, 06:49 AM IST
Journalism

ಸಾರಾಂಶ

ಚೆನೈ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಡೆದ 2 ದಿನಗಳ ಐಎಫ್‌ಡಬ್ಲ್ಯೂಜೆ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ವಾರ್ಷಿಕ ಸಭೆಯಲ್ಲಿ ಪತ್ರಕರ್ತರ ಒಳಿತಿಗಾಗಿ ಸಭೆಯಲ್ಲಿ 8 ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು.

ಚೆನ್ನ: ಚೆನೈ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಡೆದ 2 ದಿನಗಳ ಐಎಫ್‌ಡಬ್ಲ್ಯೂಜೆ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ವಾರ್ಷಿಕ ಸಭೆಯಲ್ಲಿ ಪತ್ರಕರ್ತರ ಒಳಿತಿಗಾಗಿ ಸಭೆಯಲ್ಲಿ 8 ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು.

ಐಎಫ್‌ಡಬ್ಲ್ಯೂಜೆ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ‘ಪತ್ರಕರ್ತರ ಹಿತ ಕಾಯುವುದು ಐಎಫ್‌ಡಬ್ಲ್ಯೂಜೆ ಸಂಘದ ಕೆಲಸ’ ಎಂದು ಹೇಳಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ, ಕರ್ನಾಟಕ, ತಮಿಳುನಾಡು, ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಸುಮಾರು 80 ಪತ್ರಕರ್ತರು ಭಾಗವಹಿಸಿದ್ದರು.

ಸಭೆ ನಿರ್ಣಯಗಳು:

1.ಪತ್ರಕರ್ತರನ್ನು ಕಡೆಗಣಿಸಿರುವ ಸರ್ಕಾರ ಮತ್ತು ಅಧಿಕಾರ ವ್ಯವಸ್ಥೆಯ ಬಗ್ಗೆ ದೇಶಾದ್ಯಂತ ಹೋರಾಟ ನಡೆಸಿ ಪತ್ರಕರ್ತರ ಹಿತ ಕಾಯಲು ಪ್ರಯತ್ನಿಸುವುದು.

2. ಆರೋಗ್ಯ ವಿಮೆ, ಮಾಧ್ಯಮ ಪಟ್ಟಿ ಮತ್ತು ಮಾಸಾಶನಕ್ಕೆ ಸಂಬಂಧಿಸಿ ಇರುವ ಕಠಿಣ ನಿಯಮಗಳನ್ನು ಸಡಿಲಗೊಳಿಸಿ, ಪತ್ರಕರ್ತರು ಅವಕಾಶದಿಂದ ವಂಚಿತರಾಗದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿ, ಕ್ರಮವಹಿಸುವಂತೆ ಒತ್ತಡ ತರುವುದು.

3. ಪತ್ರಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಕೊಲೆ, ಮಾನಸಿಕ ಹಿಂಸೆಗಳನ್ನು ನಿಯಂತ್ರಿಸಿ ಅವರ ಮತ್ತು ಅವರ ಕುಟುಂಬದ ರಕ್ಷಣೆಗಾಗಿ ಕ್ರಮ ವಹಿಸುವುದು. ಅಸ್ಸಾಂ, ಮದ್ಯಪ್ರದೇಶ, ತಮಿಳು ನಾಡಿನಲ್ಲಿ ಪತ್ರಕರ್ತರ ತೇಜೋವಧೆಯಾಗುತ್ತಿದ್ದು ಅವರ ಅಸ್ತಿತ್ವ ಕಾಪಾಡುವ ಜೊತೆಗೆ ಹೊಸ ಕಾನೂನುಗಳ ಮೂಲಕ ಅವರಿಗೆ ರಕ್ಷಣೆ ನೀಡುವುದು.

ಜಿಲ್ಲಾ ಮಟ್ಟದ ಸಣ್ಣ ಪತ್ರಿಕೆಗಳು ಉಸಿರುಗಟ್ಟಿದ ವಾತಾವರಣ

4. ಜಿಲ್ಲಾ ಮಟ್ಟದ ಸಣ್ಣ ಪತ್ರಿಕೆಗಳು ಉಸಿರುಗಟ್ಟಿದ ವಾತಾವರಣದಲ್ಲಿ ಸರ್ಕಾರದ ಜಾಹಿರಾತು ಕೃಪಾಪೋಷಿತದಲ್ಲಿ ಬದುಕುತ್ತಿದ್ದು ಅದರಿಂದ ಹೊರತಂದು ಅವುಗಳನ್ನು ಉಳಿಸುವುದ ಜೊತೆಗೆ ಸ್ವತಂತ್ರ ನೀಡಬೇಕು.

5. ಸಾಮಾಜಿಕ ಜಾಲತಾಣದಲ್ಲಿ ಅನಿಯಂತ್ರಿತ ಪ್ರಸಾರ ವ್ಯವಸ್ಥೆಗೆ ಕಡಿವಾಣ ಹಾಕಿ, ಕಾನೂನು ರೂಪಿಸುವುದು.

6. ನಿಷ್ಕೀಯವಾಗಿರುವ ಪ್ರೆಸ್ ಕೌನ್ಸಲ್ ಆಫ್ ಇಂಡಿಯಾ ಪುನಃಶ್ಚೇತನಗೊಳಿಸಿ, ಪತ್ರಿಕೆಗಳು, ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಒಳಗೊಂಡ ಕಾನೂನು ರೂಪಿಸಿ ಮಿಡಿಯಾ ಕೌನ್ಸಿಲ್ ಆಫ್ ಇಂಡಿಯಾ ಎಂದು ಮರು ನಾಮಕರಣ ಮಾಡುವುದು.

7. ಮುಂದಿನ ದಿನಗಳಲ್ಲಿ ಸಣ್ಣ ಪತ್ರಿಕೆಗಳು ಸವಾಲುಗಳ ಎದುರಿಸದೇ ಅವಸಾನದ ದಾರಿ ತುಳಿಯದಂತೆ ನೂತನ ತಂತ್ರಜ್ಞಾನ ಎಐ ಬಗ್ಗೆ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ ನಡೆಸುವುದು.

8. ಪ್ರತಿ ತಿಂಗಳೂ ಆನ್‌ಲೈನ್ ಮೀಟಿಂಗ್ ಕರೆದು ಪತ್ರಕರ್ತರ ಸಮಸ್ಯೆಗಳ ಚರ್ಚಿಸುವುದು, ಸಂಘವನ್ನು ಎಲ್ಲಾ ರಾಜ್ಯಗಳನ್ನೊಳಗೊಂಡಂತೆ ರಾಷ್ಟ್ರ ಮಟ್ಟದಲ್ಲಿ ಬಲಗೊಳಿಸುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.

ಚೆನ್ನೈ ಪತ್ರಕರ್ತರ ಸಂಘದ ಶಬೀರ್ ಅಹಮದ್ ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಚೆನ್ನೈ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಸಾದುಲ್ಲ, ಸದಸ್ಯರಾದ ರಜನಿ, ಶೋಬನ್ ರಾಜು, ಸತೀಶ್, ಮತ್ತಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಪಾನ್‌ ಹಿಂದಿಕ್ಕಿದ ಭಾರತ ಈಗ 4ನೇ ದೊಡ್ಡ ಆರ್ಥಿಕತೆ ಹಿರಿಮೆ
ಜಿ-ರಾಮ್‌ಜಿಯಿಂದ ದುರ್ಬಲರ ಹಕ್ಕಿಗೆ ಕುತ್ತು: ಪ್ರಧಾನಿಗೆ ಸಿದ್ದರಾಮಯ್ಯ ಪತ್ರ