'ನಾನು ಸಚಿವ ಆಗಿರದಿದ್ರೆ ಏರಿಂಡಿಯಾಗೆ ಬಿಡ್‌ ಮಾಡ್ತಿದ್ದೆ'

By Kannadaprabha News  |  First Published Jan 24, 2020, 7:51 AM IST

ನಾನು ಸಚಿವ ಆಗಿರದಿದ್ರೆ ಏರಿಂಡಿಯಾಗೆ ಬಿಡ್‌ ಮಾಡ್ತಿದ್ದೆ: ಪೀಯೂಷ್‌| ಸುಮಾರು 60 ಸಾವಿರ ಕೋಟಿ ರು.ಗಿಂತಲೂ ಹೆಚ್ಚು ಸಾಲದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ


ದಾವೋಸ್‌[ಜ.24]: ಸುಮಾರು 60 ಸಾವಿರ ಕೋಟಿ ರು.ಗಿಂತಲೂ ಹೆಚ್ಚು ಸಾಲದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ವಿಮಾನ ಮಾರಾಟಕ್ಕೆ ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿರುವ ನಡುವೆಯೇ, ತಾವು ಒಂದು ವೇಳೆ ಕೇಂದ್ರದ ಸಂಪುಟದಲ್ಲಿ ಮಂತ್ರಿಯಾಗಿಲ್ಲದಿದ್ದರೆ, ಏರಿಂಡಿಯಾ ವಿಮಾನ ಸಂಸ್ಥೆ ಖರೀದಿಗಾಗಿ ಬಿಡ್‌ ಮಾಡುತ್ತಿದ್ದೆ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯೆಲ್‌ ಹೇಳಿದ್ದಾರೆ.

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ‘ಸ್ಟ್ರಾಟಿಜಿಕ್‌ ಔಟ್‌ಲುಕ್‌: ಇಂಡಿಯಾ’ ಎಂಬ ವಿಷಯದ ಮೇಲೆ ಭಾಷಣ ಮಾಡಿದ ಪೀಯೂಷ್‌ ಗೋಯೆಲ್‌, ‘ಒಂದು ವೇಳೆ ನಾನು ಸಚಿವನಾಗಿಲ್ಲದೆ ಇರುತ್ತಿದ್ದರೆ, ಏರಿಂಡಿಯಾ ಖರೀದಿಗೆ ಬಿಡ್‌ ಮಾಡುತ್ತಿದ್ದೆ.]

Latest Videos

undefined

80000 ಕೋಟಿ ಸಾಲ ಹಿನ್ನಲೆ: ಏರಿಂಡಿಯಾ ಖಾಸಗೀಕರಣ ಅಗತ್ಯ

ಏರಿಂಡಿಯಾ ವಿಶ್ವಾದ್ಯಂತ ಉತ್ತಮ ಸಂಪರ್ಕ ಹೊಂದಿದ್ದು, ಈ ಅತ್ಯುತ್ತಮ ಕಾರ್ಯದಕ್ಷತೆ ಹಾಗೂ ನಿರ್ವಹಣೆಯುಳ್ಳ ಏರಿಂಡಿಯಾ ಖರೀದಿಯು, ಚಿನ್ನದ ಗಣಿಯಲ್ಲಿ ಹಣ ಹೂಡಿಕೆ ಮಾಡುವುದಕ್ಕಿಂತಲೂ ಕಡಿಮೆಯೇನಲ್ಲ ಎಂಬುದು ನನ್ನ ಭಾವನೆ’ ಎಂದು ಪ್ರತಿಪಾದಿಸಿದ್ದಾರೆ.

click me!