ಖಾಸಗಿಯಲ್ಲಿದ್ದಿದ್ದರೆ ಕೋಟಿ ಎಣಿಸುತ್ತಿದ್ದರು, ಇಸ್ರೋ ಮುಖ್ಯಸ್ಥರ ಸ್ಯಾಲರಿ ಜಾಸ್ತಿ ಮಾಡಿ: ನೆಟ್ಟಿಗರ ಆಗ್ರಹ

By Suvarna NewsFirst Published Sep 12, 2023, 4:32 PM IST
Highlights

ಉದ್ಯಮಿ ಹರ್ಷ ಗೋಯಂಕಾ ಅವರು ಇಸ್ರೋ ಅಧ್ಯಕ್ಷರ ಸಂಬಳದ ಬಗ್ಗೆ ಹೊಸ ಚರ್ಚೆ ಹುಟ್ಟು ಹಾಕಿದ್ದು, ಇವರ ಪೋಸ್ಟ್ ನೋಡಿದ ನೆಟ್ಟಿಗರು ಇಸ್ರೋ ಅಧ್ಯಕ್ಷರಿಗೆ ಸ್ಯಾಲರಿ ಹೆಚ್ಚಿಸುವಂತೆ ಆಗ್ರಹಿಸುತ್ತಿದ್ದಾರೆ. 

ಚಂದ್ರಯಾನ-3 ಯಶಸ್ಸಿನ ನಂತರ ಇಸ್ರೋ ಮುಖ್ಯಸ್ಥರು ಸೇರಿದಂತೆ ಇಸ್ರೋದಲ್ಲಿ ಕೆಲಸ ಮಾಡುವ ವಿಜ್ಞಾನಿಗಳ ವೇತನ ಶಿಕ್ಷಣ ಅರ್ಹತೆಗೆ, ಅಲ್ಲಿರುವ ಉದ್ಯೋಗವಕಾಶಗಳಿಗೆ  ಸಂಬಂಧಿಸಿದಂತೆ ಜನ ಅತ್ಯಂತ ಹೆಚ್ಚು ಕುತೂಹಲಕಾರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಗಾಗ ಈ ವಿಚಾರವಾಗಿ ಕೆಲ ಪೋಸ್ಟ್‌ಗಳು ಬರುತ್ತಿದ್ದು, ಚರ್ಚೆಯೂ ಆಗುತ್ತಿದೆ. ಅದೇ ರೀತಿ ಈಗ ಉದ್ಯಮಿ ಹರ್ಷ ಗೋಯಂಕಾ ಅವರು ಇಸ್ರೋ ಅಧ್ಯಕ್ಷರ ಸಂಬಳದ ಬಗ್ಗೆ ಹೊಸ ಚರ್ಚೆ ಹುಟ್ಟು ಹಾಕಿದ್ದು, ಇವರ ಪೋಸ್ಟ್ ನೋಡಿದ ನೆಟ್ಟಿಗರು ಇಸ್ರೋ ಅಧ್ಯಕ್ಷರಿಗೆ ಸ್ಯಾಲರಿ ಹೆಚ್ಚಿಸುವಂತೆ ಆಗ್ರಹಿಸುತ್ತಿದ್ದಾರೆ. 

ಆರ್‌ಪಿಜಿ ಗ್ರೂಪ್‌ನ ಮುಖ್ಯಸ್ಥ ಹರ್ಷ ಗೋಯೆಂಕಾ (Harsha Goenka) ಅವರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಲವು ಪ್ರೇರಣಾದಾಯಕ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ . ಅದೇ ರೀತಿ ಈ ಬಾರಿ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮುಖ್ಯಸ್ಥರ ಸ್ಯಾಲರಿ ವಿಚಾರವಾಗಿ ಪೋಸ್ಟ್ ಮಾಡಿದ್ದು,  ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಸ್ಯಾಲರಿ ಬರುತ್ತದೆ. ಇಷ್ಟು ಸಾಕೆ ಇದು ನ್ಯಾಯವೇ ಎಂದು ಪ್ರಶ್ನಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. 

ಇಷ್ಟು ದಿನ ಪಟ್ಟ ನೋವು ಫಲ ನೀಡಿದೆ: ಇಸ್ರೋ ಮುಖ್ಯಸ್ಥ ಸೋಮನಾಥ್‌

ಇಸ್ರೋ ಮುಖ್ಯಸ್ಥರ (ISRO chief) ತಿಂಗಳ ಸಂಬಳ 2.5 ಲಕ್ಷ ರೂಪಾಯಿಯಾಗಿದ್ದು, ಇದು ಸರಿಯೇ ನ್ಯಾಯ ಸಮ್ಮತ್ತವೇ? ಇವರಂತಹ ವ್ಯಕ್ತಿಗಳು ಹಣಕ್ಕಿಂತ ಮುಖ್ಯವಾಗಿ ಕೆಲವು ಬೇರೆ ವಿಚಾರಗಳಿಂದ ಪ್ರೇರಿತರಾಗಿದ್ದಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.  ಅವರು ಹಣದ ಮುಖ ನೋಡದೇ ತಮ್ಮ ಆಸಕ್ತಿ, ವಿಜ್ಞಾನ ಹಾಗೂ ಸಂಶೋಧನೆಯ ವಿಷಯದಲ್ಲಿ ಸಮರ್ಪಣೆ ಜೊತೆಗೆ ತಮ್ಮ ದೇಶಕ್ಕೆ ಕೊಡುಗೆ ನೀಡಲು ಅವರು ಹೆಮ್ಮೆ ಪಡುತ್ತಾರೆ. ಈ ಸಾಧನೆಯ ಮೂಲಕ ಅವರು ತಮ್ಮ ವೈಯಕ್ತಿಕ ಆಸಕ್ತಿಯನ್ನು ನೆರವೇರಿಸಿಕೊಳ್ಳುತ್ತಾರೆ. ಅವರಂತಹ ದೇಶಕ್ಕಾಗಿ ಸಮರ್ಪಿತವಾದ ವ್ಯಕ್ತಿಗಳಿಗೆ ನಾನು ತಲೆ ಬಾಗುತ್ತೇನೆ ಎಂದು ಹರ್ಷ ಗೋಯಂಕಾ ಬರೆದುಕೊಂಡಿದ್ದಾರೆ. 

'ವಿಜ್ಞಾನದ ತತ್ವಗಳ ಮೂಲ ವೇದಗಳು..', ಇಸ್ರೋ ಚೇರ್ಮನ್‌ ಎಸ್‌ ಸೋಮನಾಥ್‌!

ಹರ್ಷ ಗೋಯೆಂಕಾ ಅವರ ಈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು,  ಖಂಡಿತವಾಗಿಯೂ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಂತಹ ವ್ಯಕ್ತಿಗಳ ಸಮರ್ಪಣೆ ಮತ್ತು ಉತ್ಸಾಹವನ್ನು ಅಳೆಯಲಾಗದು. ಅವರ ಕೆಲಸವು ಹಣದ ಪ್ರತಿಫಲಗಳನ್ನು ಮೀರಿದೆ, ವಿಜ್ಞಾನ, ಸಂಶೋಧನೆ ಮತ್ತು ರಾಷ್ಟ್ರದ ಸುಧಾರಣೆಗೆ ಆಳವಾದ ಬದ್ಧತೆಯಿಂದ ಅವರ ಕೆಲಸ ನಡೆಸಲ್ಪಡುತ್ತದೆ. ಅವರು ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ನಿಜವಾದ ಪ್ರೇರಣಾಶಕ್ತಿಗಳು ಅದನ್ನು ಹಣದಿಂದ ಅಳತೆ ಮಾಡಲಾಗದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. 

ಅವರ ಸಾಧನೆಗೆ ಅವರಿಗೆ ತಿಂಗಳಿಗೆ 25 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಬಳ ನೀಡಬೇಕು.  ನಮ್ಮ ಪ್ರತಿಭೆಯನ್ನು ಗುರುತಿಸಿ ಪ್ರತಿಫಲ ನೀಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಸ್ರೋ ಅಧ್ಯಕ್ಷರಿಗೆ ಮನೆ ಕಾರು, ಸೇವಕರು ಮುಂತಾದ ಇತರ ಸೇವೆಗಳನ್ನು ಒಳಗೊಂಡಿರುತ್ತದೆ.  ಆದರೂ ಈ ವ್ಯಕ್ತಿಗೆ ನೀವು ಹೇಳಿದಂತೆ ಹಣ ದೊಡ್ಡ ವಿಷಯವಲ್ಲ, ಯಶಸ್ಸು ಹಾಗೂ ರಾಷ್ಟ್ರದ ಹೆಮ್ಮೆಯೇ ಅವರಿಗೆ ದೊಡ್ಡದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇಂತಹ ಬುದ್ಧಿವಂತ ಮನಸ್ಸುಗಳು ಆಸಕ್ತಿ ಹಾಗೂ ಉದ್ದೇಶದಿಂದ ನಡೆಯಲ್ಪಡುತ್ತವೆ.  ಇಲ್ಲಿ ಅವರಿಗೆ ನೀವು ಹೇಳಿರುವ ಸಂಬಳ ಮೂಲ ವೇತನ ಮಾತ್ರವಾಗಿರಬಹುದು.  ಅವರಿಗೆ ಇರುವ ಇತರ ಸೌಲಭ್ಯಗಳನ್ನು ಸೇರಿಸಬೇಕು. ಇದರ ಜೊತೆಗೆ ವಿಜ್ಞಾನಿಗಳನ್ನು ನಿವೃತ್ತಿ ನಂತರವೂ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ಅದಕ್ಕೆ ಅವರು ಅರ್ಹರು ಆಗಿರುತ್ತಾರೆ. ಆದರೂ ಅವರು ಖಾಸಗಿ ಸಂಸ್ಥೆಗಳಲ್ಲಿದ್ದಿದ್ದರೆ ಅವರಿಗೆ ಇದಕ್ಕಿಂತ ಹಲವು ಪಾಲು ಹೆಚ್ಚು ವೇತನ ಸಿಗುತ್ತಿತ್ತು ಎಂಬುದನ್ನು ಅಲ್ಲಗಳೆಯಲಾಗದು. ವೈದ್ಯರು, ನ್ಯಾಯಾಧೀಶರು, ಸಂಶೋಧಕರು ಮತ್ತು ಇತರ ಅನೇಕ ವೃತ್ತಿಪರರು ಇವರಿಗಿಂತ ಹೆಚ್ಚು ವೇತನ ಗಳಿಸುತ್ತಾರೆ ಎಂಬುದು ಸತ್ಯವೂ ಹೌದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಗೋಯೆಂಕಾ ಅವರ ಈ ಪೋಸ್ಟನ್ನು 7 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು ವೈರಲ್ ಆಗಿದೆ. 

click me!