ಯು.ಪಿಯಲ್ಲಿ ತಲೆಗೆ ನೀರಿನ ಬದಲು, ಎಂಜಲು ಉಗಿದ ಕೇಶ ವಿನ್ಯಾಸಕಾರ: ವಿವಾದ!

Published : Jan 07, 2022, 05:36 AM ISTUpdated : Jan 08, 2022, 11:30 AM IST
ಯು.ಪಿಯಲ್ಲಿ ತಲೆಗೆ ನೀರಿನ  ಬದಲು, ಎಂಜಲು ಉಗಿದ  ಕೇಶ ವಿನ್ಯಾಸಕಾರ: ವಿವಾದ!

ಸಾರಾಂಶ

* ಯು.ಪಿಯಲ್ಲಿ ತಲೆಗೆ ನೀರಿನ ಬದಲು, ಎಂಜಲು ಉಗಿದ * ಕೇಶ ವಿನ್ಯಾಸಕಾರ: ವಿವಾದ

ನವದೆಹಲಿ(ಜ. 07): ಕೇಶ ವಿನ್ಯಾಸಕಾರನೋರ್ವ ಮಹಿಳೆಯ ತಲೆಗೆ ನೀರು ಸಿಂಪಡಿಸುವ ಬದಲು ಎಂಜಲು(ಉಗಿದಿರುವ) ಘಟನೆ ಉತ್ತರ ಪ್ರದೇಶದ ಮುಜಾಫ್ಫರನಗರದಲ್ಲಿ ನಡೆದಿದೆ. ಈ ಘಟನೆ ವಿವಾದದ ಸ್ವರೂಪ ಪಡೆದಿದ್ದು, ಕೇಶ ವಿನ್ಯಾಸಕಾರನ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

ದೇಶಾದ್ಯಂತ 115 ನಗರಗಳಲ್ಲಿ 850 ಸಲೂನ್‌ಗಳನ್ನು ನಡೆಸುತ್ತಿರುವ ಕೇಶ ವಿನ್ಯಾಸಕಾರ ಜಾವೇದ್‌ ಹಬೀಬ್‌, ಇತ್ತೀಚೆಗೆ ಮುಜಾಫ್ಫರನಗರದಲ್ಲಿ ಕೇಶವಿನ್ಯಾಸದ ಕುರಿತು ಕಾರ್ಯಗಾರ ನಡೆಸಿದ್ದ. ಈ ವೇಳೆ ಪೂಜಾ ಗುಪ್ತಾ ಎಂಬ ಮಹಿಳೆಗೆ ಕೇಶವಿನ್ಯಾಸ ಮಾಡುವಾಗ ನೀರು ಇಲ್ಲದಿದ್ದರೆ, ಎಂಜಲನ್ನು ಉಪಯೋಗಿಸಿ ಎಂದು ಹೇಳಿ ಉಗಿದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಹಬೀಬ್‌ ಕೃತ್ಯವನ್ನು ಖಂಡಿಸಿದೆ. ಈ ಕೃತ್ಯವು ವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶ ಪೊಲೀಸರಿಗೆ ಆಗ್ರಹಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ