ಐಬಿಎಂನಿಂದ 50 ಲಕ್ಷ ಮಂದಿಗೆ ಎಐ, ಸೈಬರ್‌ ಸೆಕ್ಯುರಿಟಿ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್ ತರಬೇತಿ

Kannadaprabha News   | Kannada Prabha
Published : Dec 22, 2025, 04:23 AM IST
IBM

ಸಾರಾಂಶ

ಐಬಿಎಂ ಸಂಸ್ಥೆಯು ಭಾರತದ 50 ಲಕ್ಷ ಯುವ ಜನರಿಗೆ ಕೃತಕ ಬುದ್ಧಿಮತ್ತೆ (ಎಐ), ಸೈಬರ್‌ ಸೆಕ್ಯುರಿಟಿ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ ನಲ್ಲಿ ಕೌಶಲ್ಯ ತರಬೇತಿ ನೀಡುವ ಮಹತ್ವದ ಯೋಜನೆಯನ್ನು ಘೋಷಿಸಿದೆ. ಈ ಕುರಿತ ವರದಿ ಇಲ್ಲಿದೆ.

ಬೆಂಗಳೂರು : ಐಬಿಎಂ ಸಂಸ್ಥೆಯು ಭಾರತದಾದ್ಯಂತ ಇರುವ 50 ಲಕ್ಷ ಯುವ ಜನರಿಗೆ ಕೃತಕ ಬುದ್ಧಿಮತ್ತೆ (ಎಐ), ಸೈಬರ್‌ ಸೆಕ್ಯುರಿಟಿ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ ನಲ್ಲಿ ಕೌಶಲ್ಯ ತರಬೇತಿ ನೀಡುವ ಮಹತ್ವದ ಯೋಜನೆಯನ್ನು ಘೋಷಿಸಿದೆ.

ಸಮಾನ ಸಾಮರ್ಥ್ಯದ, ಭವಿಷ್ಯ ಸಿದ್ಧ ಸಿಬ್ಬಂದಿ ಬಳಗವನ್ನು ನಿರ್ಮಿಸುವ ಐಬಿಎಂನ ಧ್ಯೇಯ

ಐಬಿಎಂ ಸ್ಕಿಲ್ಸ್ ಬಿಲ್ಡ್ ಯೋಜನೆಯ ಭಾಗವಾಗಿ ನಡೆಯಲಿರುವ ಈ ಯೋಜನೆಯು ಸಮಾನ ಸಾಮರ್ಥ್ಯದ, ಭವಿಷ್ಯ ಸಿದ್ಧ ಸಿಬ್ಬಂದಿ ಬಳಗವನ್ನು ನಿರ್ಮಿಸುವ ಐಬಿಎಂನ ಧ್ಯೇಯಕ್ಕೆ ಪೂರಕವಾಗಿ ಮಾಡಿ ಬಂದಿದ್ದು, ವಿದ್ಯಾರ್ಥಿಗಳು ಮತ್ತು ಆಸಕ್ತ ಕಲಿಕಾರ್ಥಿಗಳಿಗೆ ಸುಧಾರಿತ ಡಿಜಿಟಲ್ ಕೌಶಲ್ಯಗಳನ್ನು ಕಲಿಯಲು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.

ಈ ಯೋಜನೆಯ ಮೂಲಕ ಐಬಿಎಂ ಶಾಲೆಗಳು, ವಿಶ್ವವಿದ್ಯಾಲಯಗಳು, ವೃತ್ತಿಪರ ಮತ್ತು ಕೌಶಲ್ಯಾಭಿವೃದ್ಧಿ ಸಂಸ್ಥೆಗಳಲ್ಲಿ ಎಐ ಮತ್ತು ಉದಯೋನ್ಮುಖ ತಂತ್ರಜ್ಞಾನ ಶಿಕ್ಷಣವನ್ನು ಒದಗಿಸಲಿದೆ. All India Council for Technical Education (AICTE) ನಂತಹ ಸಂಸ್ಥೆಗಳೊಂದಿಗಿನ ಸಹಯೋಗದಲ್ಲಿ ಐಬಿಎಂ ಪ್ರಾಯೋಗಿಕ ಎಐ ಕಲಿಕಾ ವ್ಯವಸ್ಥೆ, ಅಧ್ಯಾಪಕರ ಸಬಲೀಕರಣ ಯೋಜನೆಗಳು, ಪಠ್ಯಕ್ರಮ ಸಂಯೋಜನೆ, ಹ್ಯಾಕಥಾನ್‌ಗಳು ಮತ್ತು ಇಂಟರ್ನ್‌ಶಿಪ್‌ಗಳನ್ನು ನಡೆಸಲಿದೆ.

ಭಾರತ ಎಐ ಮತ್ತು ಕ್ವಾಂಟಮ್‌ನಲ್ಲಿ ಜಗತ್ತನ್ನು ಮುನ್ನಡೆಸುವ ಪ್ರತಿಭೆ ಮತ್ತು ಮಹತ್ವಾಕಾಂಕ್ಷೆ ಹೊಂದಿದೆ

ಈ ಕುರಿತು ಮಾತನಾಡಿರುವ ಐಬಿಎಂನ ಅಧ್ಯಕ್ಷರು, ಚೇರ್ಮನ್ ಮತ್ತು ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಅರವಿಂದ್ ಕೃಷ್ಣ ಅವರು , ‘ಭಾರತವು ಎಐ ಮತ್ತು ಕ್ವಾಂಟಮ್‌ನಲ್ಲಿ ಜಗತ್ತನ್ನು ಮುನ್ನಡೆಸುವ ಪ್ರತಿಭೆ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ನಿಪುಣತೆಯು ಆರ್ಥಿಕ ಸ್ಪರ್ಧಾತ್ಮಕತೆ, ವೈಜ್ಞಾನಿಕ ಪ್ರಗತಿ ಮತ್ತು ಸಾಮಾಜಿಕ ಪರಿವರ್ತನೆಯನ್ನು ನಿರ್ಧರಿಸಲಿದೆ. 50 ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡುವ ನಮ್ಮ ಯೋಜನೆಯು ನಾವು ಆ ಭವಿಷ್ಯಕ್ಕಾಗಿ ಮಾಡುತ್ತಿರುವ ಹೂಡಿಕೆಯಾಗಿದೆ. ಸುಧಾರಿತ ಕೌಶಲ್ಯಗಳನ್ನು ಎಲ್ಲರಿಗೂ ಒದಗಿಸುವ ಮೂಲಕ ನಾವು ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಹೊಸತನ್ನು ರೂಪಿಸಲು, ಆವಿಷ್ಕಾರ ಮಾಡಲು ಮತ್ತು ಭಾರತದ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಐಬಿಎಂ ಸಂಸ್ಥೆಯು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಎಐ ಪಠ್ಯಕ್ರಮವನ್ನು ಸಹಯೋಗದ ಮೂಲಕ ಅಭಿವೃದ್ಧಿಪಡಿಸುತ್ತಿದ್ದು, ಈ ಮೂಲಕ ಶಾಲಾ ಮಟ್ಟದಲ್ಲಿಯೂ ಸಿದ್ಧತೆಯನ್ನು ಬಲಪಡಿಸುತ್ತಿದೆ. ಇದರೊಂದಿಗೆ AI Project Cookbook, Teacher Handbook ಮತ್ತು ವಿವರಣಾ ಮಾಡ್ಯೂಲ್‌ಗಳಂತಹ ಬೋಧನಾ ಸಾಮಗ್ರಿಗಳನ್ನೂ ಸಹ ಅಭಿವೃದ್ಧಿಪಡಿಸುತ್ತಿದೆ.

ಈ ಯೋಜನೆಗಳನ್ನು ಲೆಕ್ಕಶಾಸ್ತ್ರೀಯ ಚಿಂತನೆ (ಕಂಪ್ಯೂಟೇಷನಲ್ ಥಿಂಕಿಂಗ್) ಮತ್ತು ಜವಾಬ್ದಾರಿಯುತ ಎಐ ತತ್ವಗಳನ್ನು ಬೇಗನೇ ಅರಿತುಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಶಿಕ್ಷಕರು ಎಐ ಶಿಕ್ಷಣವನ್ನು ಆತ್ಮವಿಶ್ವಾಸದಿಂದ ಮತ್ತು ದೊಡ್ಡ ಪ್ರಮಾಣದಲ್ಲಿ ತಲುಪಿಸಬಹುದಾಗಿದೆ.

ಈ ಯೋಜನೆಯ ಕೇಂದ್ರಬಿಂದುವಾಗಿರುವ ಐಬಿಎಂ ಸ್ಕಿಲ್ಸ್ ಬಿಲ್ಡ್, ಜಗತ್ತಿನ ಅತ್ಯಂತ ಸುಲಭವಾಗಿ ದೊರೆಯುವ ತಂತ್ರಜ್ಞಾನ ಕಲಿಕಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಕಲಿಕಾರ್ಥಿಗಳು, ಶಿಕ್ಷಕರು ಮತ್ತು ಸಂಸ್ಥೆಗಳಿಗೆ ಎಐ, ಸೈಬರ್‌ ಸೆಕ್ಯುರಿಟಿ, ಕ್ವಾಂಟಮ್, ಕ್ಲೌಡ್, ಡೇಟಾ, ಸಸ್ಟೈನಬಿಲಿಟಿ ಮತ್ತು ಕಾರ್ಯಸ್ಥಳ ಸಿದ್ಧತೆ ಮುಂತಾದ ವಿಷಯದಲ್ಲಿ 1,000ಕ್ಕೂ ಹೆಚ್ಚು ಕೋರ್ಸ್‌ಗಳನ್ನು ನೀಡುತ್ತದೆ. ಜಾಗತಿಕವಾಗಿ 1.6 ಕೋಟಿಯಷ್ಟು ವಿದ್ಯಾರ್ಥಿಗಳನ್ನು ಹೊಂದಿರುವ ಸ್ಕಿಲ್ಸ್ ಬಿಲ್ಡ್, ಇತರ ಯೋಜನೆಗಳ ಜೊತೆಗೆ 2030ರ ವೇಳೆಗೆ ಜಗತ್ತಿನಾದ್ಯಂತ 3 ಕೋಟಿ ಜನರಿಗೆ ತರಬೇತಿ ನೀಡುವ ಐಬಿಎಂನ ಉದ್ದೇಶದ ಕೇಂದ್ರಸ್ಥಾನದಲ್ಲಿದ್ದು, ಸಂಸ್ಥೆಯ ಈ ಉದ್ದೇಶ ಸಾಧನೆಯಲ್ಲಿ ಭಾರತವು ಮಹತ್ವದ ಪಾತ್ರ ವಹಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಜೆಪಿ ಮಹಾಯುತಿಗೆ ಕ್ಲೀನ್ ಸ್ವೀಪ್ ಗೆಲುವು, ಕೇರಳ ಗೆದ್ದಾಗ ಪ್ರಜಾಪ್ರಭುತ್ವ ಮಹಾರಾಷ್ಟ್ರ ಸೋತಾಗ ಕೊತ ಕೊತ