ಅಗ್ನಿಪಥಕ್ಕೆ 3 ದಿನದಲ್ಲಿ 56,960 ಅರ್ಜಿ ಸಲ್ಲಿಕೆ!

By Suvarna NewsFirst Published Jun 27, 2022, 7:24 AM IST
Highlights

* ಅಗ್ನಿವೀರರಾಗಲು ಭಾರೀ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆ

* ಜು.5ರಂದು ನೋಂದಣಿ ಪ್ರಕ್ರಿಯೆ ಅಂತ್ಯ

* ಅಗ್ನಿಪಥಕ್ಕೆ 3 ದಿನದಲ್ಲಿ 56,960 ಅರ್ಜಿ ಸಲ್ಲಿಕೆ

ನವದೆಹಲಿ(ಜೂ.27): ವಾಯುಪಡೆ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಅರಂಭಿಸಿದ ಕೇವಲ 3 ದಿನಗಳಲ್ಲಿ 56,960 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಅಗ್ನಿಪಥ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ವಾಯುಪಡೆ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು.

‘56960! ಇದು ಭವಿಷ್ಯದ ಅಗ್ನಿವೀರರಿಂದ ಈವರೆಗೆ ಸಲ್ಲಿಸಲಾದ ಅರ್ಜಿಯ ಸಂಖ್ಯೆಯಾಗಿದೆ. ಅಗ್ನಿಪಥ ನೋಂದಣಿ ಪ್ರಕ್ರಿಯೆಗೆ https://agnipathvayu.cdac.in/AV/ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಜುಲೈ. 5 ರಂದು ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಲಿದೆ’ ಎಂದು ಭಾನುವಾರ ವಾಯುಪಡೆ ಟ್ವೀಟ್‌ ಮಾಡಿದೆ.

ಜೂ. 14 ರಂದು ಸೇನೆಗೆ ತಾತ್ಕಾಲಿಕವಾಗಿ ಯುವಕರನ್ನು ನೇಮಿಸುವ ಅಗ್ನಿಪಥ ಯೋಜನೆಯನ್ನು ಘೋಷಿಸಲಾಗಿದ್ದು, ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿತ್ತು. ಆದರೆ ಕೇಂದ್ರ ಸರ್ಕಾರ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೇ ಹಿಂಸಾಚಾರದಲ್ಲಿ ಭಾಗಿಯಾದವರಿಗೆ ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡುವುದಾಗಿ ಎಚ್ಚರಿಕೆ ನೀಡಿತ್ತು. ಇದರಿಂದಾಗಿ ನಂತರದ ದಿನಗಳಲ್ಲಿ ಪ್ರತಿಭಟನೆ ಕಾವು ಕಳೆದುಕೊಂಡಿದ್ದು, ಸೇನೆ ಸೇರಲು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

Close

click me!