ಯುದ್ಧ ವಿಮಾನವನ್ನು ಒಟ್ಟಿಗೆ ಹಾರಿಸಿ ಇತಿಹಾಸ ಬರೆದ ಅಪ್ಪ ಮಗಳು

Published : Jul 05, 2022, 08:25 PM ISTUpdated : Aug 04, 2022, 05:17 PM IST
ಯುದ್ಧ ವಿಮಾನವನ್ನು ಒಟ್ಟಿಗೆ ಹಾರಿಸಿ ಇತಿಹಾಸ ಬರೆದ ಅಪ್ಪ ಮಗಳು

ಸಾರಾಂಶ

ಅಪ್ಪ ಮಗಳು ಜೊತೆಯಾಗಿ ಫೈಟರ್ ಜೆಟ್ ಹಾರಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಏರ್‌ ಕಮಾಂಡರ್ ಸಂಜಯ್ ಶರ್ಮಾ (Sanjay Sharma) ಹಾಗೂ ಪುತ್ರಿ ಫ್ಲೈಯಿಂಗ್ ಆಫೀಸರ್‌ ಅನನ್ಯಾ ಶರ್ಮಾ (Ananya Sharma) ಅವರು ಜೊತೆಯಾಗಿ ಫೈಟರ್ ಜೆಟ್‌ ಹಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಬೀದರ್‌: ಅಪ್ಪ ಮಗಳು ಜೊತೆಯಾಗಿ ಫೈಟರ್ ಜೆಟ್ ಹಾರಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಏರ್‌ ಕಮಾಂಡರ್ ಸಂಜಯ್ ಶರ್ಮಾ (Sanjay Sharma) ಹಾಗೂ ಪುತ್ರಿ ಫ್ಲೈಯಿಂಗ್ ಆಫೀಸರ್‌ ಅನನ್ಯಾ ಶರ್ಮಾ (Ananya Sharma) ಅವರು ಜೊತೆಯಾಗಿ ಫೈಟರ್ ಜೆಟ್‌ ಹಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಭಾರತೀಯ ವಾಯುಸೇನೆಯಲ್ಲಿ ಈ ಸಾಧನೆ ಮಾಡಿದ ಮೊದಲ ಅಪ್ಪ ಮಗಳು ಎಂಬ ದಾಖಲೆಯನ್ನು ಇವರು ನಿರ್ಮಿಸಿದ್ದಾರೆ.

ಭಾರತೀಯ ವಾಯುಸೇನೆಯಲ್ಲಿ (Indian Air Force) ಫೈಟರ್ ಫೈಲಟ್ (fighter pilot) ಆಗಿದ್ದ, ಐಎಎಫ್‌ನ ಎಲ್ಲಾ ಚಟುವಟಿಕೆಗಳನ್ನು ನೋಡುತ್ತಾ ಜೊತೆ ಜೊತೆಗೆ ಬೆಳೆದ ಆಕೆಗೆ ಇದರ ಹೊರತಾಗಿ ಬೇರೆ ಕೆಲಸವನ್ನು ತನ್ನ ಬದುಕಿನ ವೃತ್ತಿಯಾಗಿ ಆಯ್ಕೆ ಮಾಡುವುದರ ಕಲ್ಪನೆಯನ್ನು ಕೂಡ ಆಕೆ ಮಾಡಿಲ್ಲ. 

ಇದನ್ನೂ ಓದಿ: Republic Day 2022 ಪರೇಡ್‌ನಲ್ಲಿ ಅಮೃತ ರಚನೆಯಲ್ಲಿ ಹಾರಲಿದೆ ಜಾಗ್ವಾರ್ ಏರ್‌ಕ್ರಾಫ್ಟ್, 75ನೇ ಸ್ವಾತಂತ್ರ್ಯ ಸಂಭ್ರಮ ಡಬಲ್!

ಯುದ್ಧ ವಿಮಾನ ಚಲಾಯಿಸುವ ಮೊದಲ ಮಹಿಳಾ ಫೈಟರ್‌ ಆಗಿ 2016ರಲ್ಲಿ ವಾಯುಸೇನೆ ಸೇರಿದ ಅನನ್ಯಾ ಆಕೆಯ ಜೀವನದುದ್ದಕ್ಕೂ ಕಂಡ ಕನಸು ಕೊನೆಗೂ ನನಸಾದ ಕ್ಷಣ ಇದಾಗಿತ್ತು. ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್‌ನಲ್ಲಿ ಬಿಟೆಕ್ ಮಾಡಿದ ಅನನ್ಯಾ ಐಎಎಫ್ ಫ್ಲೈಯಿಂಗ್ ಬ್ಯಾಚ್‌ನ ತರಬೇತಿಗೆ ಆಯ್ಕೆಯಾದರು. ನಂತರ  ಡಿಸೆಂಬರ್ 2021ರಲ್ಲಿ ಫೈಟರ್ ಪೈಲಟ್ ಆಗಿ ನೇಮಕಗೊಂಡರು. ಅನನ್ಯಾ ಮುಂಚೂಣಿಯಲ್ಲಿರುವ ಯುದ್ಧ ವಿಮಾನದಲ್ಲಿ ಕರ್ತವ್ಯ ಸೇರಿದಂತೆ Mig-21 Sqn ಗೆ ಕಮಾಂಡರ್ ಆಗಿ ಯುದ್ಧವಿಮಾನದ ಕಾರ್ಯಾಚರಣೆಗಳ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. 

ತಂದೆ-ಮಗಳ ಈ ಜೋಡಿ ಕರ್ನಾಟಕದ (Karnataka) ಬೀದರ್‌ನ (Bidar) ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಈ ವರ್ಷದ (2022) ಮೇ 30 ರಂದು ಹಾಕ್ -132 ವಿಮಾನದಲ್ಲಿ  ಈ ಹಾರಾಟದ ಇತಿಹಾಸವನ್ನು ಸೃಷ್ಟಿಸಿದೆ. ಇಲ್ಲಿಯೇ ಫ್ಲೈಯಿಂಗ್ ಆಫೀಸರ್ ಅನನ್ಯಾ ಶರ್ಮಾ ತರಬೇತಿ ಪಡೆದಿದ್ದಾರೆ. ಪೋಷಕರು ಸದಾ ತಮ್ಮ ಮಕ್ಕಳು ತಮಗಿಂತ ಹೆಚ್ಚಿನ ಸಾಧನೆ ಮಾಡಬೇಕು ಎಂದು ಬಯಸುತ್ತಾರೆ. ಜೊತೆಗೆ ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ತಮ್ಮನ್ನು ಮೀರಿ ಮಕ್ಕಳು ಸಾಧನೆ ಮಾಡಿದಾಗ ಪೋಷಕರ ಹೃದಯ ಹೆಮ್ಮೆಯಿಂದ ಉಬ್ಬುತ್ತದೆ. ಹಾಗೆಯೇ ಇಲ್ಲಿ ಫ್ಲೈಯಿಂಗ್ ಆಫೀಸರ್ ಆಗಿರುವ ಪುತ್ರಿ ಅನನ್ಯಾ ಅಪ್ಪನ ಸಾಧನೆಯನ್ನು ನೋಡುತ್ತಲೇ ಅಪ್ಪನೆತ್ತರಕ್ಕೆ ಬೆಳೆದಿದ್ದಾಳೆ.

ಇದನ್ನು ಓದಿ: ಬಿಜ್ಲಿ ಬಿಜ್ಲಿ ಹಾಡಿಗೆ ಸೊಂಟ ಬಳುಕಿಸಿದ ಅಪ್ಪ ಮಗಳು... ವಾಹ್ ಎಂದ ನೆಟ್ಟಿಗರು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್