ಮುಂಚೂಣಿ ಗಡಿ ಪ್ರದೇಶದಲ್ಲಿ ಕಾರ್ಯನಿರ್ವಹಣೆ ವೇಳೆ ಕೈ ತುಂಡಾಗಿದ್ದ ಯೋಧನೊಬ್ಬನನ್ನು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯು ತಡರಾತ್ರಿ ಕಾರ್ಯಾಚರಣೆ ಮೂಲಕ ರಕ್ಷಿಸಿದ ಘಟನೆ ಲಡಾಖ್‌ನಲ್ಲಿ ನಡೆದಿದೆ.
ನವದೆಹಲಿ (ಏ.13): ಮುಂಚೂಣಿ ಗಡಿ ಪ್ರದೇಶದಲ್ಲಿ ಕಾರ್ಯನಿರ್ವಹಣೆ ವೇಳೆ ಕೈ ತುಂಡಾಗಿದ್ದ ಯೋಧನೊಬ್ಬನನ್ನು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯು ತಡರಾತ್ರಿ ಕಾರ್ಯಾಚರಣೆ ಮೂಲಕ ರಕ್ಷಿಸಿದ ಘಟನೆ ಲಡಾಖ್‌ನಲ್ಲಿ ನಡೆದಿದೆ.
ಯಂತ್ರವೊಂದರಲ್ಲಿ ಕೆಲಸ ಮಾಡುವ ವೇಲೇಹ್ಳೆ ಯೋಧನ ಕೈ ತುಂಡರಿಸಿತ್ತು. ಕೂಡಲೇ ಗಾಯಾಳು ಯೋಧನನ್ನು ಮೊದಲಿಗೆ ಲೇಹ್ ವಾಯುನೆಲೆಗೆ ಕರೆತರಲಾಯಿತು. ಅಲ್ಲಿಂದ ದೆಹಲಿಗೆ ವಾಯುಪಡೆಯ ಸಿ-130 ಜೆ ವಿಮಾನದ ಮೂಲಕ ಸ್ಥಳಾಂತರಿಸಿ ಸೇನಾ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.
undefined
ಘಟನೆ ನಡೆದಾಗಿನಿಂದ ಕೇವಲ 4 ಗಂಟೆಗಳ ಅವಧಿಯಲ್ಲಿ ಯೋಧನನ್ನು ದೆಹಲಿಗೆ ಕರೆತರಲಾದ ಕಾರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ತುಂಡರಿಸಿದ್ದ ಭಾಗವನ್ನು ಮರಳಿ ಜೋಡಿಸಲಾಗಿದೆ. ಸೇನೆ ಮತ್ತು ವಾಯುಪಡೆಯ ಸಮನ್ವಯತೆ ಇದನ್ನು ಸಾಧ್ಯವಾಗಿಸಿದೆ ಎಂದು ಭಾರತೀಯ ವಾಯುಪಡೆ ಹೇಳಿದೆ.
ತಮಿಳನಾಡಲ್ಲಿ ಭೀಕರ ರಸ್ತೆ ಅಪಘಾತ: ವಿಜಯಪುರ IRB ಪೊಲೀಸ್ ಸೇರಿ ಮೂವರು ಸ್ಥಳದಲ್ಲೇ ಸಾವು!