ಇಸ್ರೇಲ್ ಮೇಲೆ ಇರಾನ್ ಯುದ್ಧ ಸಾಧ್ಯತೆ, ಈ ದೇಶಕ್ಕೆ ಪ್ರಯಾಣ ಮಾಡದಂತೆ ಭಾರತೀರಿಗೆ MEA ಮನವಿ!

By Suvarna NewsFirst Published Apr 12, 2024, 7:40 PM IST
Highlights

ಮುಂದಿನ 48 ಗಂಟೆಯಲ್ಲಿ ಇಸ್ರೇಲ್ ಮೇಲೆ ಯುುದ್ಧಕ್ಕೆ ಇರಾನ್ ಸಜ್ಜಾಗಿದೆ.ತನ್ನ ಅಧಿಕಾರಿಗಳ ಹತ್ಯೆಯಿಂದ ಕೆರಳಿರುವ ಇರಾನ್ ಇಸ್ರೇಲ್ ಮೇಲೆ ಪ್ರತಿದಾಳಿಗೆ ಸಜ್ಜಾಗಿದೆ. ಹೀಗಾಗಿ ಮುಂದಿನ 2 ದಿನದಲ್ಲಿ ಮತ್ತೊಂದು ಯುದ್ಧ ಆರಂಭಗೊಳ್ಳುವ ಸಾಧ್ಯತೆ ಇದ್ದು, ಈ ಎರಡು ದೇಶಕ್ಕೆ ಪ್ರಯಾಣ ಮಾಡದಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಮನವಿ ಮಾಡಿದೆ.
 

ನವದೆಹಲಿ(ಏ.12) ಇಸ್ರೇಲ್ ಮೇಲೆ ನೇರ ದಾಳಿಗೆ ಇರಾನ್ ಸಜ್ಜಾಗಿದೆ. ಮುಂದಿನ 2 ದಿನದಲ್ಲಿ ಇಸ್ರೇಲ್ ಮೇಲೆ ಭೀಕರ ದಾಳಿ ನಡೆಯುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಕೇವಲ ರಾಜಕೀಯ ಸವಾಲುಗಳು ಹಾಗೂ ಅಪಾಯದಿಂದ ಇರಾನ್ ದಾಳಿಯನ್ನು ಮುಂದೂಡಿತ್ತು. ಇದೀಗ ಸಹನೆಯ ಕಟ್ಟೆ ಒಡೆದಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್ ಮೇಲೆ ಇರಾನ್ ಯುದ್ಧ ಆರಂಭಿಸಿವು ಸಾಧ್ಯತೆಗಳಿವೆ.ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಕಾರ್ಮೋಡ ಹೆಚ್ಚಾಗುತ್ತಿದ್ದಂತೆ ಭಾರತೀಯ ವಿದೇಶಾಂಗ ಇಲಾಖೆ ತುರ್ತು ಮಾರ್ಗಸೂಚಿ ಪ್ರಕಟಿಸಿದೆ. ಸದ್ಯ ಇರಾನ್ ಹಾಗೂ ಇಸ್ರೇಲ್ ಪ್ರಯಾಣ ಮುಂದೂಡಿ ಅಥವಾ ರದ್ದು ಮಾಡಿ ಎಂದು ಭಾರತೀಯರಿಗೆ ಮನವಿ ಮಾಡಿದೆ.

ಸಿರಿಯಾದಲ್ಲಿ ಇರಾನ್‌ನ ಕೌನ್ಸುಲೇಟ್ ಸೇರಿದಂತೆ 6 ಅಧಿಕಾರಿಗಳ ಹತ್ಯೆಯಾಗಿದೆ. ಈ ಹತ್ಯೆಯ ಹಿಂದೆ ಇಸ್ರೇಸ್ ಕೈವಾಡವಿದೆ ಎಂದು ಇರಾನ್ ಆರೋಪಿಸಿದೆ.  ಇದಕ್ಕೆ ಪ್ರತೀಕಾರವಾಗಿ ಇರಾನ್ ದಾಳಿಗೆ ಸಜ್ಜಾಗಿದೆ. ಆದರೆ ಈ ದಾಳಿಯಲ್ಲಿ ಇಸ್ರೇಲ್ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಇರಾನ್ ಮಾತ್ರ ಗಂಭೀರ ಆರೋಪ ಮುಂದಿಟ್ಟು ಯುದ್ಧಕ್ಕೆ ತಯಾರಿ ಮಾಡಿದೆ. ಇರಾನ್ ಹಾಗೂ ಇಸ್ರೇಲ್ ಯುದ್ಧ, ಈಗಾಗಲೇ ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಯುದ್ಧ ನಡೆಯುತ್ತಿರುವ ಕಾರಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಎಚ್ಚರಿಸಿದೆ.

ದೇಶ ವಿಭಜನೆ ಆಗಲೇ ಇಲ್ಲ ಎಂಬಂತೆ ವಿಶ್ವ ಪ್ರತಿಕ್ರಿಯಿಸುತ್ತಿದೆ, ಅಮೆರಿಕದ ಸಿಎಎ ಹೇಳಿಕೆಗೆ ಜೈಶಂಕರ್ ತಿರುಗೇಟು

ಇರಾನ್ ಹಾಗೂ ಇಸ್ರೇಲ್ ದೇಶಕ್ಕೆ ಪ್ರಯಾಣ ಮಾಡುವುದನ್ನು ಮುಂದೂಡಿ ಅಥವಾ ರದ್ದು ಮಾಡಿ. ವಿದೇಶಾಂಗ ಇಲಾಖೆಯ ಮುಂದಿನ ಸೂಚನೆವರೆಗೆ ಪ್ರಯಾಣ ಬೇಡ ಎಂದು ಮನವಿ ಮಾಡಿದೆ. ಇಸ್ರೇಲ್ ಹಾಗೂ ಇರಾನ್‌ನಲ್ಲಿರುವ ಭಾರತೀಯ ನಾಗರೀಕರು ಅಲ್ಲಿನ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಲು ಕೋರಿದೆ. ಮುನ್ನಚ್ಚೆರಿಕಾ ಕ್ರಮವಾಗಿ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ.

ಇರಾನ್ ಹಾಗೂ ಇಸ್ರೇಲ್‌ನಲ್ಲಿರುವ ಭಾರತೀಯರು ಅನಗತ್ಯ ತಿರುಗಾಟಗಳನ್ನು ರದ್ದು ಮಾಡಿ. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಸೂಚಿಸಲಾಗಿದೆ. ರಾಯಭಾರ ಕಚೇರಿ ಜೊತೆ ಮಾತನಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚಿಸಿದೆ. ಪರಿಸ್ಥಿತಿ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತೀಯ ಸುರಕ್ಷತೆ ನಮ್ಮ ಆದ್ಯತೆ. ಎಲ್ಲರ ಸುರಕ್ಷತೆ ಕುರಿತು ಇಲಾಖೆ, ಇಸ್ರೇಲ್ ಹಾಗೂ ಇರಾನ್ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದಿದೆ.

ಬೆದರಿಸುವ ದೇಶ ಸಂಕಷ್ಟದ ಸಮಯದಲ್ಲಿ $4.5 ಬಿಲಿಯನ್ ನೆರವು ನೀಡುವುದಿಲ್ಲ; ಮಾಲ್ಡೀವ್ಸ್‌ಗೆ ಭಾರತ ತಿರುಗೇಟು

click me!