
ಕಾಶ್ಮೀರ (ನ.17) ಶಾಂತವಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮೇಲೆ ಉಗ್ರರು ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದರು. ನವೆಂಬರ್ 11 ರಂದು ಸಿಆರ್‌ಪಿಎಫ್ ಚೆಕ್ ಪಾಯಿಂಟ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಪೈಕಿ ಲಷ್ಕರ್ ಉಗ್ರ ಸಂಘಟನೆ ಕಮಾಂಡರ್ ಲತೀಫ್ ಭಟ್‌ನ ಭಾರತೀಯ ಸೇನೆ ಎನ್‌ಕೌಂಟರ್ ಮಾಡಿದೆ. ವಿಶೇಷ ಅಂದರೆ ಕುಲ್ಗಾಂನ ಮಸೀದಿಯಲ್ಲಿ ಉಗ್ರ ಲತೀಫ್ ಭಟ್ ಆಶ್ರಯ ಪಡೆದಿದ್ದ. ಲತೀಫ್ ಭಟ್‌ಗೆ ವಿಡಿಯೋ ಕಾಲ್ ಮಾಡಿದ ಭಾರತೀಯ ಸೇನಾಧಿಕಾರಿ ಸರೆಂಡರ್‌ಗೆ ಸೂಚಿಸಿತ್ತು. ಆದರೆ ನಾನು ಸರೆಂಡರ್ ಆಗಲ್ಲ. ಅದಕ್ಕಿಂತ ಅಲ್ಲಾನ ಭೇಟಿ ಮಾಡುತ್ತೇನೆ ಎಂದಿದ್ದಾನೆ. ವಿಡಿಯೋ ಕಾಲ್ ಕಟ್ ಮಾಡಿದ ಬೆನ್ನಲ್ಲೇ ಭಾರತೀಯ ಸೇನೆ ಉಗ್ರ ಲತೀಫ್ ಭಟ್‌ನ ಹತ್ಯೆ ಮಾಡಿದೆ.
ಲಷ್ಕರ್ ಉಗ್ರರು ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಬಳಿ ದಾಳಿ ನಡೆಸಿ ಬಳಿಕ ಪರಾರಿಯಾಗಿದ್ದರು. ಭಾರತೀಯ ಸೇನೆ ಇದೀಗ ದಾಳಿ ನಡೆಸಿದ ಒಬ್ಬೊಬ್ಬ ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದೆ. ಸೋಮವಾರ ಲತೀಫ್ ಭಟ್ ಆಪ್ತ, ದಾಳಿ ನಡೆಸಿದ ಮತ್ತೊಬ್ಬ ಉಗ್ರ ಉಮರ್ ನಿಸಾರ್ ದಾರ್‌ನ ಹತ್ಯೆ ಮಾಡಿತ್ತು. ಇದೀಗ ಲತೀಫ್ ಭಟ್ ಹತ್ಯೆ ಮಾಡಲಾಗಿದೆ.
ಮಸೀದಿಯಲ್ಲಿ ಆಶ್ರಯ ಪಡೆದಿದ್ದ ಲಷ್ಕರ್ ಉಗ್ರ ಲತೀಫ್ ಭಟ್ ಕಳೆದ ಒಂದು ವಾರದಿಂದ ಸುರಕ್ಷಿತವಾಗಿದ್ದ. ಆದರೆ ಉಗ್ರ ಲತೀಫ್ ಭಟ್ ಕುರಿತು ಮಾಹಿತಿ ಪಡೆದ ಭಾರತೀಯ ಸೇನೆ ಮಸೀದಿ ಸುತ್ತುವರಿದಿತ್ತು. ಬಳಿಕ ವಿಡಿಯೋ ಕಾಲ್ ಮೂಲಕ ಲತೀಫ್ ಭಟ್‌ನ ಸಂಪರ್ಕಿಸಿದ ಸೇನೆ, ಶರಣಾಗಲು ಸೂಚಿಸಿತ್ತು. ಶಸ್ತ್ರ ತ್ಯಜಿಸಿ ಹೊರಬಂದು ಶರಣಾಗು. ನಿನಗೆ ಏನೂ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಮತ್ತೊಂದು ಗುಂಡಿನ ಚಕಮಕಿ ಅಗತ್ಯವಿಲ್ಲ. ನಿನ್ನ ಜೊತೆ ನಾವೀದ್ದೇವೆ, ಬಂದು ಶರಣಾಗು ಎಂದು ಸೇನಾಧಿಕಾರಿ ವಿಡಿಯೋ ಕಾಲ್ ಮೂಲಕ ಹೇಳಿದ್ದಾರೆ.
ವಿಡಿಯೋ ಕಾಲ್‌ನಲ್ಲಿ ಭಾರತೀಯ ಸೇನೆಗೆ ಪ್ರತಿಕ್ರಿಯಿಸಿದ ಉಗ್ರ ಲತೀಫ್ ಭಟ್, ನಾನು ಯಾವುದೇ ಕಾರಣಕ್ಕೂ ಸರೆಂಡರ್ ಆಗಲ್ಲ ಎಂದಿದ್ದಾನೆ. ಇಷ್ಟೇ ಅಲ್ಲ ನಾನು ಇಲ್ಲೇ ಇದ್ದು ಅಲ್ಲಾನ ಭೇಟಿಯಾಗುತ್ತೇನೆ ಎಂದಿದ್ದಾನೆ. ಮತ್ತೊಮ್ಮೆ ಭಾರತೀಯ ಸೇನೆ ಸರೆಂಡರ್ ಆಗಲು ಸೂಚಿಸಿದೆ. ಸೇನೆ ಸುತ್ತುವರಿದಿದೆ. ಇದು ಕೊನೆಯ ಅವಕಾಶ ಎಂದಿದೆ. ಆದರೆ ಲತೀಫ್ ಅಲ್ಲಾನ ಭೇಟಿಯಾಗುವುದರಲ್ಲೇ ನನಗೆ ಆನಂದವಿದೆ ಎಂದಿದ್ದಾನೆ. ಇದಕ್ಕೆ ಸರಿ ಎಂದು ಸೇನಾಧಿಕಾರಿ ವಿಡಿಯೋ ಕಾಲ್ ಕಟ್ ಮಾಡಿದ್ದಾರೆ.
ಅಲ್ಲಾನ ಭೇಟಿಯಾಗುವುದರಲ್ಲೇ ಸಂತೋಷ ಎಂದ ಉಗ್ರ ಲತೀಫ್ ಭಟ್‌ನನ್ನು ಭಾರತೀಯ ಸೇನೆ ಕಲೆವೆ ಸೆಕೆಂಡ್‌ಗಳಲ್ಲಿ ಹತ್ಯೆ ಮಾಡಿದೆ. ನಾವು ವಿಡಿಯೋ ಕಾಲ್ ಮಾಡಿ ಸರೆಂಡರ್ ಆಗಲು ಮನವಿ ಮಾಡಿದ್ದೆವು. ಆದರೆ ಉಗ್ರ ಲತೀಫ್ ಸರೆಂಡರ್ ಆಗಲಿಲ್ಲ. ನೀನು ಯುವಕ, ಇನ್ನು ವಯಸ್ಸಿದೆ. ನಿನಗೆ ಉತ್ತಮ ಅವಕಾಶ ಕಲ್ಪಿಸಿ ಕೊಡುತ್ತೇವೆ.ಉದ್ಯೋಗ ಜೊತೆ ಕುಟುಂಬದ ಜೊತೆಗಿರಲು ಸಾಧ್ಯವಿದೆ ಎಂದು ಮನವಿ ಮಾಡಿದ್ದೆವು. ಆದರೆ ಒಪ್ಪಲಿಲ್ಲ, ಹೀಗಾಗಿ ನಾವು ಹತ್ಯೆ ಮಾಡಿದ್ದೇವೆ ಎಂದು ಸೀನಿಯರ್ ಸೂಪರಿಡೆಂಟ್ ಆಫ್ ಪೊಲೀಸ್ ಅನಾಯತ್ ಅಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ